More

    ಹೆಲಿಕಾಪ್ಟರ್​ಗೆ ವಾಹನ ಪೂಜೆ ನೆರವೇರಿಸಿದ ಉದ್ಯಮಿ! ವೈರಲ್​ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

    ಹೈದರಾಬಾದ್​: ಯಾವುದೇ ಹೊಸ ವಸ್ತು ಅಥವಾ ಯಂತ್ರವನ್ನು ಖರೀದಿ ಮಾಡಿದಾಗ ಮೊದಲು ದೇವರಿಗೆ ಪೂಜೆ ಸಲ್ಲಿಸುವುದು ಭಾರತೀಯ ಪದ್ಧತಿ. ಯಾವುದೇ ಅಡ್ಡಿ, ಆತಂಕ ಹಾಗೂ ಅಪಾಯಯ ಬರದಿರಲೆಂದು ಹೊಸ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನದಲ್ಲಿ “ವಾಹನ ಪೂಜೆ” ಅಂತಾನೇ ವಿಶೇಷ ಪೂಜೆ ನಡೆಯುತ್ತದೆ. ಅಲ್ಲದೆ, ಪೂಜಾ ಫಲಕದಲ್ಲೂ ಅದರ ಆಯ್ಕೆ ಇದ್ದೇ ಇರುತ್ತದೆ. ನಮ್ಮ ದೇಶದಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಬಸ್​ ಹಾಗೂ ಲಾರಿಗಳಿಗೆ ಪೂಜೆ ಸಲ್ಲಿಸುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ಹೆಲಿಕಾಪ್ಟರ್​​ಗೆ ಎಂದಾದರೂ ವಾಹನ ಪೂಜೆ ಮಾಡಿಸಿರುವುದನ್ನು ನೋಡಿದ್ದೀರಾ? ನಾವು ತೋರಿಸುತ್ತೇವೆ ನೋಡಿ.

    ತೆಲಂಗಾಣದ ಉದ್ಯಮಿ ಬೋಯಿನಪಲ್ಲಿ ಶ್ರೀನಿವಾಸ ರಾವ್ ಎಂಬುವರು ತಾವು ಖರೀದಿಸಿದ ಹೊಸ ಹೆಲಿಕಾಪ್ಟರ್​ ಅನ್ನು ದೇವಸ್ಥಾನಕ್ಕೆ ತಂದು ಪೂಜೆ ಮಾಡಿಸುವ ಮೂಲಕ ಭಾರತೀಯ ಸಂಪ್ರದಾಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಹೆಲಿಕಾಪ್ಟರ್​ಗೆ ವಾಹನ ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.

    ಅಂದಹಾಗೆ ಶ್ರೀನಿವಾಸ್​ ರಾವ್​ ಅವರು ಪ್ರತಿಮಾ ಗ್ರೂಪ್​ ಕಂಪನಿಯ ಮಾಲೀಕರು. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯ ಕಂಪನಿ ಇದಾಗಿದೆ. ಹೈದರಾಬಾದ್​ನಿಂದ ಸುಮಾರು 100 ಕಿ. ಮೀ ದೂರದ ಯಾದಾದ್ರಿಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಏರ್​ಬಸ್​ ಎಸಿಎಚ್​-135 ನಂಬರ್​ನ ಹೊಸ ಹೆಲಿಕಾಪ್ಟರ್ ಮೂಲಕ ತೆರಳಿದ ಶ್ರೀನಿವಾಸ್​ ರಾವ್​, ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ವಾಹನ ಪೂಜೆ ಮಾಡಿಸಿದ್ದಾರೆ.

    ಪ್ರಖ್ಯಾತ ದೇವಸ್ಥಾನದ ಮೂವರು ಅರ್ಚಕರು ಸೇರಿ ಹೆಲಿಕಾಪ್ಟರ್​ಗೆ ಪೂಜೆ ಸಲ್ಲಿಸಿದ್ದಾರೆ. ಈ ಹೆಲಿಕಾಪ್ಟರ್​​ ಬರೋಬ್ಬರಿ 5.7 ಮಿಲಿಯನ್​ ಡಾಲರ್​ ಮೌಲ್ಯದ್ದಾಗಿದೆ. ಭಾರತದಲ್ಲಿ ಹೆಲಿಕಾಪ್ಟರ್​ ವಾಹನ ಪೂಜೆ ಅಸಾಮಾನ್ಯವಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ತಪ್ಪದೇ ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    ಪೋಕ್ಸೊ ಆರೋಪಿ ಜೊತೆ ಬಲವಂತದ ಅಸಹಜ ಲೈಂಗಿಕ ಕ್ರಿಯೆ: ಸರ್ಕಲ್​ ಇನ್ಸ್​ಪೆಕ್ಟರ್​ ವಿರುದ್ಧ ದೂರು ದಾಖಲು

    ಪೋಕ್ಸೊ ಆರೋಪಿ ಜೊತೆ ಬಲವಂತದ ಅಸಹಜ ಲೈಂಗಿಕ ಕ್ರಿಯೆ: ಸರ್ಕಲ್​ ಇನ್ಸ್​ಪೆಕ್ಟರ್​ ವಿರುದ್ಧ ದೂರು ದಾಖಲು

    ಸಂಪಾದಕೀಯ: ಸೈನಿಕರಿಗೆ ಜಮೀನು ಮಂಜೂರಾತಿ ಸಮಸ್ಯೆ ಬಗೆಹರಿಸಲು ಸೂಕ್ತ ನಿರ್ಣಯ ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts