More

    VIDEO| ಪೈಲಟ್​​ ಗಂಡನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ: ಬೆಚ್ಚಿಬೀಳಿಸುವಂತಿದೆ ಸಿಸಿಟಿವಿ ದೃಶ್ಯ

    ಹೈದರಾಬಾದ್​: ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಬ್ಬಳು ಗಂಡನ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ ಹೊರವಲಯದ ಶಮ್ಶಾಬಾದ್​ನ ರಲ್ಲಗುವಾದಲ್ಲಿ ನಡೆದಿದೆ.

    ಮೃತಳನ್ನು ಲಾವಣ್ಯ ಲಹಿರಿ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಲಟ್​ ಆಗಿರುವ ವೆಂಕಟೇಶ್ವರ್​ ರಾವ್ ಎಂಬುವರನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಹು ವರ್ಷಗಳಿಂದಲೂ ಕೌಟುಂಬಿಕ ಹಿಂಸೆಗೆ ಲಾವಣ್ಯ ಒಳಗಾಗಿದ್ದರು ಎಂದು ಹೇಳಲಾಗಿದೆ.

    ಇದನ್ನೂ ಓದಿ: ಮದುವೆಗೆ 4 ದಿನ‌ ಇರುವಾಗ್ಲೇ ಭಾವನಿಂದಲೇ ಮದುಮಗಳ ಹತ್ಯೆ: ಆರೋಪಿಯ ನಾಟಕ ಕೇಳಿದ್ರೆ ಶಾಕ್​ ಆಗ್ತೀರಾ!

    ಲಾವಣ್ಯ ಲಹರಿ ಆತ್ಮಹತ್ಯೆಗೂ ಮುನ್ನ ಗಂಡನ ಕಿರುಕುಳವನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಆಕೆ ಸಾವಿನ ಬೆನ್ನಲ್ಲೇ ಕುಟುಂಬಸ್ಥರು ಗಂಡನ ಕಿರುಕುಳಕ್ಕೆ ಸಾಕ್ಷಿಯಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಬಿಡುಗಡೆ ಮಾಡಿದ್ದಾರೆ. ಮಕ್ಕಳಾಗದಿದ್ದಕ್ಕೆ ಪತಿ ಮತ್ತು ಆಕೆಯ ಅತ್ತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

    ವಿಡಿಯೋದಲ್ಲಿ ಏನಿದೆ?: ಮನೆಯ ಕೋಣೆಯೊಂದರಲ್ಲಿ ಲಾವಣ್ಯ ಮತ್ತು ವೆಂಕಟೇಶ್ವರ್​ ರಾವ್​ ಕಿತ್ತಾಡುವ ದೃಶ್ಯವಿದ್ದು, ಪಾಪಿ ಪತಿರಾಯ ತನ್ನ ಪತ್ನಿಗೆ ಅಮಾನವೀಯವಾಗಿ ಥಳಿಸುತ್ತಿರುವುದು ರೆಕಾರ್ಡ್​ ಆಗಿದೆ. ಈ ವೇಳೆ ಅವರ ಸಾಕುನಾಯಿ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಯತ್ನಿಸಿದ ಮನಕಲುಕುವ ದೃಶ್ಯವು ಸೆರೆಯಾಗಿದೆ. ವಿಡಿಯೋ ಕೊನೆಯಲ್ಲಿ ಪತಿ ಥಳಿಸುವುದನ್ನು ನಿಲ್ಲಿಸಿದಾಗ ಗಾಯಗೊಂಡ ಲಾವಣ್ಯ, ಹೊಟ್ಟೆಯನ್ನು ಹಿಡಿದುಕೊಂಡು, ನೋವಿನಿಂದ ಕಣ್ಣೀರಿಡುತ್ತಾ ನಡೆದು ಹೋಗುತ್ತಾರೆ.

    ಇದನ್ನೂ ಓದಿ: ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!

    ಅನೇಕ ಬಾರಿ ಕೌಟುಂಬಿಕ ಹಿಂಸೆ ನಡೆದಾಗಲೂ ಹೇಗೋ ಸಹಿಸಿಕೊಂಡಿದ್ದ ಲಾವಣ್ಯ, ಈ ರೀತಿಯ ಘಟನೆ ಪದೇಪದೆ ನಡೆಯುವುದನ್ನು ಸಹಿಸಲಾರದೇ ಶುಕ್ರವಾರ ಶಮ್ಶಾಬಾದ್​ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts