More

    ಲಾಕ್‌ಡೌನ್ ಸಡಿಲಿಕೆ ದುರುಪಯೋಗ ಪಡಿಸಿಕೊಳ್ಳಬೇಡಿ

    ಹೂವಿನಹಿಪ್ಪರಗಿ: ಕರೊನಾ ತಡೆಗೆ ಸೇನಾನಿಗಳ ಸೇವೆ ಅನನ್ಯವಾಗಿದೆ. ಜನರ ಜೀವ ಉಳಿಸುವಲ್ಲಿ ಅವರು ಜೀವಂತ ದೇವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
    ಹೂವಿನಹಿಪ್ಪರಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಮಂಗಲಕಾರ್ಯಲಯದಲ್ಲಿ ಮಂಗಳವಾರ ಮಾಜಿ ಸಚಿವ ದಿ. ಬಿ. ಎಸ್. ಪಾಟೀಲ ಸಾಸನೂರ ೌಂಡೇಷನ್ ವತಿಯಿಂದ ಕರೊನಾ ಸೇನಾನಿಗಳಿಗೆ ದಿನಸಿ ಕಿಟ್, ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
    ದೇಶದ ಎಲ್ಲ ಧರ್ಮದವರು ವಿಭಿನ್ನ ರೀತಿಯಲ್ಲಿ ದೇವರನ್ನು ಪೂಜೆ ಮಾಡುತ್ತೇವೆ. ದೇಶಕ್ಕೆ ಕೋವಿಡ್-19 ಎಂಬ ಮಾಹಾಮಾರಿ ರೋಗದ ವಿರುದ್ಧ ಹೋರಾಟ ನಡೆಸುತ್ತಿರುವ ಕರೊನಾ ಸೇನಾನಿಗಳಿಗೆ ನಾವು ದೇವರ ರೂಪದಲ್ಲಿ ಕಂಡರೂ ತಪ್ಪೇನಿಲ್ಲ ಎಂದರು.
    ಸರ್ಕಾರದ ಲಾಕ್‌ಡೌನ್ ಸಡಲಿಕೆಯನ್ನು ದುರುಪಯೋಗಪಡಿಸಿಕೊಳ್ಳದೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ, ಸ್ಯಾನಿಟೈಸರ್ ಬಳಸುವುದನ್ನು ಮರೆಯಬಾರದು ಎಂದರು.

    ರಾಜ್ಯದಲ್ಲಿನ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ವಿಚಾರ ಸರ್ಕಾರದ ಮುಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ಆರ್ಥಿಕ ಚಟುವಟಕೆ ಶಿಥಿಲಗೊಂಡಿದ್ದು ರಾಜ್ಯ, ಕೇಂದ್ರ ಸರ್ಕಾರಗಳು ಆರ್ಥಿಕ ಚಟುವಟಿಕೆ ಉತ್ತೇಜನಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಕೆಲ ದಿನಗಳಲ್ಲಿ ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆ ಆರಂಭವಾಗಲಿದ್ದು, ಕೃಷಿ ಇಲಾಖೆ ರೈತರಿಗೆ ಬಿತ್ತನೆ ಬೀಜ ಗೊಬ್ಬರ ದಾಸ್ತಾನು ಮಾಡುತ್ತಿದೆ ಎಂದರು.

    ಬಿಜೆಪಿ ಮುಖಂಡ ರಮೇಶ ಮಸಬಿನಾಳ ಮಾತನಾಡಿದರು. ಶಾಸಕರ ಸಹೋದರ ಸಾಹೇಬಗೌಡ ಪಾಟೀಲ, ಸುರೇಶಗೌಡ ಪಾಟೀಲ, ಮುಖಂಡ ರಾಮನಗೌಡ ನಾವದಗಿ, ಜಿಪಂ ಸದಸ್ಯ ಕಲ್ಲಪ್ಪ ಮಟ್ಟಿ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಲಚ್ಯಾಣ, ಜಿ.ಬಿ. ಬಾಗೇವಾಡಿ, ಬಸವರಾಜ ಅಸ್ಕಿ, ಶಂಕರಗೌಡ ಕೋಟೆಖಾನೆ, ಇಒ ಭಾರತಿ ಚಲುವಯ್ಯ, ಡಾ. ಎಸ್. ಎಸ್. ಓತಗೇರಿ, ಡಾ. ಕಲ್ಪನಾ ಬಸವರಾಜ, ಡಾ. ಬಿ. ಎಸ್. ಸಂದಿಮನಿ, ಬಿಇಒ ಬಸವರಾಜ ತಳವಾರ, ಹಣಮಂತರಾಯ ಗುಣಕಿ, ಸಂಗನಗೌಡ ಬಿರಾದಾರ, ಮೂಹನಗೌಡ ಹಿರೆಗೌಡರ, ಸಂಗನಗೌಡ ಧನ್ನೂರ, ಶಿವನಗೌಡ ಬಿರಾದಾರ, ಮಹೇಶ ಶಂಕ್ರಪ್ಪಗೋಳ, ಶೇಕು ನಾಡಗೌಡ ಮತ್ತಿತರರಿದ್ದರು.
    ಹುಣಶ್ಯಾಳ ಪಿಬಿ, ಹೂವಿನಹಿಪ್ಪರಗಿ, ಕುದರಿಸಾಲವಾಡಗಿ, ಬೂದಿಹಾಳ, ಕಾಮನಕೇರಿ, ದಿಂಡವಾರ, ಸಾತಿಹಳ ಬೈರವಾಡಗಿ, ಸಾಸನೂರ, ವಡವಡಗಿ ಸೇರಿದಂತೆ ಇತರೆ ಗ್ರಾಮಗಳ ಕರೊನಾ ಸೇನಾನಿಗಳಿಗೆ ದಿನಸಿಕಿಟ್, ಮಾಸ್ಕ್ ವಿತರಿಸಿದರು. ಕ್ವಾರಂಟೈನಲ್ಲಿರುವ ಜನರಿಗೆ ಉಪಹಾರದ ವ್ಯವಸ್ಥೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts