More

    ಚೀನಾ ಮಹಾ ಯಡವಟ್ಟು: ಕರೊನಾ ಸೋಂಕು ಇಲ್ಲದ ಸಾವಿರಾರು ಮಂದಿಗೆ ಕ್ವಾರಂಟೈನ್​!

    ಬೀಜಿಂಗ್​: ವಿಶ್ವದಾದ್ಯಂತ ಕರೊನಾ ವೈರಸ್​ ಪರಿಚಯಿಸಿದ ಚೀನಾ ಇದೀಗ ಮತ್ತೆ ಕೊವಿಡ್​ ಸಂಕಷ್ಟವನ್ನು ಎದುರಿಸುತ್ತಿದೆ. ಎಲ್ಲೆಡೆ ಕಡಿಮೆಯಾದ ವೈರಸ್​​​ ಪ್ರಭಾವ ಈಗ ಚೀನಾದಲ್ಲಿ ಮುಂದುವರಿದಿದೆ.

    ಮೊಟ್ಟ ಮೊದಲ ಬಾರಿಗೆ ಕರೊನಾ ಸೋಂಕು ಪತ್ತೆಯಾಗಿದ್ದ ಚೀನಾದ ವುಹಾನ್​ ನಗರದಲ್ಲೂ ಸಹ ಕರೊನಾ ರಣಕೇಕೆ ಮುಂದುವರಿದಿದೆ. ಹೀಗಾಗಿ ಹಲವು ನಗರಗಳಲ್ಲು ಮುಂದುವರಿದಿದ್ದು, ಲಾಕ್​ಡೌನ್​ ಸೂತ್ರವನ್ನೇ ಅಳವಡಿಸಿದೆ.

    ಇನ್ನು ಶಾಂಘೈ ನಗರದಲ್ಲಿ ಕೆಲ ದಿನಗಳಿಂದ ಲಾಕ್​ಡೌನ್​ ಜಾರಿಯಲ್ಲಿದ್ದು, ಓಮಿಕ್ರ್ಯಾನ್​ ಲಕ್ಷಣಗಳು ಕೂಡ ಕಂಡುಬಂದಿರುವುದರಿಂದ ಭಾರೀ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸದ್ಯಕ್ಕೆ ಶಾಂಘೈ ನಗರದಲ್ಲಿ ಏಪ್ರಿಲ್​​ ನಿಂದ ಹೋಟೆಲ್​ಗಳು, ಶಾಲೆಗಳು, ಕಚೇರಿ ಹೀಗೆ ಯಾವುಂದೂ ತೆರದಿಲ್ಲ. ಸದ್ಯ ಭಯದ ವಾತಾವರಣವಿದೆ.

    ಈ ನಡುವೆ ಇಲ್ಲಿನ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದೆ. ಅದೇನೆಂದರೆ ಕೇವಲ 26 ಮಂದಿಯಲ್ಲಿ ವೈರಸ್​ ಕಾಣಿಸಿಕೊಂಡಿದ್ದರಿಂದ ಸೋಂಕು ತಗುಲದ ಬರೋಬ್ಬರಿ 13 ಸಾವಿರ ಮಂದಿಯನ್ನು ಕ್ವಾರಂಟೇನ್​​ನಲ್ಲಿಡಲಾಗಿದೆ. ಇದು ಇಲ್ಲಿನ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ದಕ್ಷಿಣ ಬೀಜಿಂಗ್​ನಲ್ಲೂ ಸಹ ಇದೇ ರೀತಿ ಜನರನ್ನು ಮನೆಯಲ್ಲೇ ಕ್ವಾರಂಟೈನ್​​ ​ ಮಾಡಲಾಗಿದೆ. ಇಲ್ಲಿನ ಜನರು ಹೊರಗೆ ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ತಿನ್ನಲು ಆಹಾರವಿಲ್ಲದೇ ಇಲ್ಲಿನ ಜನರು ಪರದಾಡುತ್ತಿದ್ದಾರೆ. (ಏಜೆನ್ಸೀಸ್​​)

    ಭಾರೀ ಮಳೆಯಿಂದ ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts