More

    ಕವಿ ಗೋಷ್ಠಿಗೆ ಅರ್ಜಿ ಆಹ್ವಾನ

    ಹೂವಿನಹಿಪ್ಪರಗಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ 65 ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಬಸವನಬಾಗೇವಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನೇತೃತ್ವದಲ್ಲಿ ಸಂಗೀತ ಸ್ಪರ್ಧೆ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ವೇದಿಕೆ ತಾಲೂಕಾಧ್ಯಕ್ಷ ಎಂ.ಆರ್.ರಾಜನಾಳ ತಿಳಿಸಿದ್ದಾರೆ.
    ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸುವವರು ಕನ್ನಡಾಭಿಮಾನಕ್ಕೆ ಸಂಬಂಧಿಸಿದ ಗೀತೆಗಳನ್ನು ಹಾಡಬೇಕು. ಕರೋಕೆ ಮೂಲಕವೂ ಹಾಡಬಹುದು. ಹಾಡಿರುವ ವೀಡಿಯೋ ಗರಿಷ್ಠ 3 ನಿಮಿಷದಾಗಿರಬೇಕು. ಯಾವುದೇ ವ್ಯಕ್ತಿ ಅಥವಾ ಭಾಷೆಯನ್ನು ಅವಹೇಳನ ಮಾಡುವಂತಿರಬಾರದು. ಕೇವಲ ಪ್ರಾಥಮಿಕ ಶಾಲೆ ಮಕ್ಕಳಿಗೆ ಮಾತ್ರ ಅವಕಾಶ ಇರುವುದು.
    ಕವಿಗೋಷ್ಠಿಯಲ್ಲಿ ಭಾಗವಹಿಸುವವರು ಕನ್ನಡ ನಾಡು-ನುಡಿ ಕುರಿತಾಗಿ ಕವನ ವಾಚಿಸಬೇಕು, ಗೋಷ್ಠಿಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ. ಅತ್ಯುತ್ತಮ 20 ಕವಿತೆಗಳನ್ನು ಗೋಷ್ಠಿಗೆ ಆಯ್ಕೆ ಮಾಡಲಾಗುವುದು. ನಾಡು, ನುಡಿಗೆ ಅಪಮಾನವಾಗದಂತಿರಬೇಕು. ಸ್ವ-ರಚಿತ ಕವನವಾಗಿರಬೇಕು. 5 ನಿಮಿಷ ಮಿತಿಯಲ್ಲಿರಬೇಕು. ಮಾಹಿತಿಗಾಗಿ 74118 87488 ಸಂಪರ್ಕಿಸಬೇಕು.81474 09656 ವಾಟ್ಸ್ ಆ್ಯಪ್‌ಗೆ ಕವನ ಕಳುಹಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts