More

    ವಾಲ್ಮೀಕಿ ಸಮುದಾಯದವರಿಗೆ ಮಾತ್ರ ಎಸ್‌ಟಿ ಮಾನ್ಯತೆ ನೀಡಿ

    ಹೂವಿನಹಿಪ್ಪರಗಿ: ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ವಾಲ್ಮೀಕಿ ಸಮುದಾಯದ ಪರ್ಯಾಯ ಪದಗಳಾದ ತಳವಾರ ಹಾಗೂ ಪರಿವಾರ ಜನಾಂಗಕ್ಕೆ ಮಾತ್ರ ಎಸ್‌ಟಿ ಮಾನ್ಯತೆ ನೀಡಿ ಪ್ರಮಾಣ ಪತ್ರ ನೀಡಬೇಕೆಂದು ಸಮುದಾಯದ ಮುಖಂಡ ಸಿದ್ದು ಮೇಟಿ ಹೇಳಿದರು.
    ಸ್ಥಳೀಯ ನಾಡ ಕಚೇರಿ ಕಾರ್ಯಾಲಯದಲ್ಲಿ ಉಪ ತಹಸೀಲ್ದಾರ್ ಜಿ.ಟಿ. ನಾಯ್ಕ ಅವರಿಗೆ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ವತಿಯಿಂದ ಸೋಮವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.

    ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ರಾಜ್ಯದ ಪರಿಶಿಷ್ಟ ಪಂಗಡದ ಮುಖ್ಯ ಜಾತಿಗಳಾದ ನಾಯ್ಕ, ನಾಯಕಗಳ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ಸೇರ್ಪಡೆಗೊಳಿಸಿ ಆದರೆ, ಇದೆ ಹೆಸರಿನಿಂದ ಕರೆಯಿಸಿಕೊಳ್ಳುವ ಇತರೆ ಸಮುದಾಯದವರು ತಪ್ಪು ನಿರೂಪಣೆ ಮಾಡಿಕೊಂಡು ವಂಚಿಸಿ ಮೀಸಲಾತಿ ಪಡೆಯದಂತೆ ಸರ್ಕಾರ ಕಟ್ಟನಿಟ್ಟಿನ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು.

    ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸದಾಶಿವ ಕಡ್ಲೆವಾಡ ಮಾತನಾಡಿ, ಸಮಾಜದಲ್ಲಿ ಬೇರೆ ಬೇರೆ ವೃತ್ತಿಪರ ಸಮುದಾಯದವರು ತಳವಾರ ಎಂದು ಹೆಸರಿಟ್ಟಿಕೊಂಡು ಮೀಸಲಾತಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿದ್ದು, ವಾಲ್ಮೀಕಿ ಸಮುದಾಯದ ಜನರಿಗೆ ಮಾತ್ರ ಎಸ್‌ಟಿ ಮಾನ್ಯತೆ ನೀಡಿ, ವಿಜಯಪುರ ಜಿಲ್ಲೆಯಲ್ಲಿ ನಾಯಕ ಪರ್ಯಾಯ ಪದವಾದ ತಳವಾರ ಮತ್ತು ಪರಿವಾರ, ಸಿದ್ದಿ ಜನಾಂಗ ಇಲ್ಲ ಅಧಿಕಾರಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಎಸ್‌ಟಿ ಜಾತಿ ಪ್ರಮಾಣ ಪತ್ರ ಕೂಡಬೇಕು. ರಾಜ್ಯ ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮೀಸಲಾತಿ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದರು.

    ಸಚಿವ ಕಾರಜೋಳ ವಿರುದ್ಧ ಆಕ್ರೋಶ

    ಕೇಂದ್ರ ಸರ್ಕಾರ ಹೊರಡಿಸಿರುವ ವಾಲ್ಮೀಕಿ ಸಮುದಾಯದ ಇತರೆ ಪದಗಳಾದ ತಳವಾರ ಹಾಗೂ ಪರಿವಾರ ಸಮುದಾಯದ ಜನತೆಗೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡಿ ಆದೇಶ ಹೊರಡಿಸಿದ ಹಿನ್ನೆಲೆ ಈಗ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಆದ ಗೋವಿಂದ ಕಾರಜೋಳ ಅವರು ಅಂಬಿಗೇರ ಸಮಾಜ ಹಾಗೂ ವಾಲ್ಮೀಕಿ ಸಮಾಜದ ನಡುವೆ ಗದ್ದಲ ಎಬ್ಬಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೋ ಅಥವಾ ಅವರಿಗೆ ಗೆಜೆಟ್ಟ್ ಮಾಹಿತಿ ಕೊರತೆಯೇ ಎಂದು ತಿಳಿಯುತ್ತಿಲ್ಲ. ಕೂಡಲೇ ಅವರು ವಾಲ್ಮೀಕಿ ಸಮುದಾಯದವರಿಗೆ ಕ್ಷಮೆ ಕೇಳಬೇಕೆಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಆಗ್ರಹಿಸಿತು.
    ಸಮಾಜದ ಮುಖಂಡರಾದ ಬಸನಗೌಡ ಪಾಟೀಲ, ಸಿದ್ದು ಜಂಬಗಿ, ಲಕ್ಷಣ ರ‌್ಯಾಗೇರಿ, ಅನೀಲ ಯಲಗೋಡ, ಯಲ್ಲಪ್ಪ ಬಾವೂರ, ರಮೇಶ ರೋಳ್ಳಿ, ಪರಶುರಾಮ ಬಾವೂರ, ಶಿವಾನಂದ ರೊಳ್ಳಿ, ಸಿದ್ದನಗೌಡ ಪಾಟೀಲ, ಬಸವರಾಜ ಗುಡಗುಂಟಿ, ರಾಜು ಕುರಿ, ಶಿವಾನಂದ ನಾಟಿಕಾರ, ಬಸಲಿಂಗಪ್ಪ ಯಲಗೋಡ ಮತ್ತಿತರರಿದ್ದರು.

    ವಾಲ್ಮೀಕಿ ಸಮುದಾಯದವರಿಗೆ ಮಾತ್ರ ಎಸ್‌ಟಿ ಮಾನ್ಯತೆ ನೀಡಿ
    ವಾಲ್ಮೀಕಿ ಸಮುದಾಯದವರಿಗೆ ಮಾತ್ರ ಎಸ್‌ಟಿ ಮಾನ್ಯತೆ ನೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts