More

    ಕಾನೂನಿನ ಸೌಲಭ್ಯಗಳು ಸದ್ಬಳಕೆಯಾಗಲಿ- ನ್ಯಾಯಾಧೀಶ ಸಿ.ಕೆ.ವೀರೇಶ್‌ಕುಮಾರ್ ಸಲಹೆ

    ಹೂವಿನಹಡಗಲಿ: ಸಂವಿಧಾನದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮಹಿಳೆಯರು ಸದೃಢರಾಗಬೇಕು ಎಂದು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಸಿ.ಕೆ.ವೀರೇಶ್‌ಕುಮಾರ್ ಹೇಳಿದರು.

    ಪಟ್ಟಣದ ಸೇವಾಲಾಲ್ ಭವನದಲ್ಲಿ ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರೃ ಪೂರ್ವದಲ್ಲಿ ಮಹಿಳೆಯರಿಗೆ ಶಿಕ್ಷಣ ದೊರಕುವುದು ಕಷ್ಟಕರವಾಗಿತ್ತು. ಪ್ರಸ್ತುತ ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ ಎಂದರು.

    ಉದ್ಯೋಗ ಮತ್ತು ರಾಜಕೀಯ ಸೇರಿ ಅನೇಕ ರೀತಿಯ ಮೀಸಲಾತಿಗಳು ಕಾನೂನಿನಲ್ಲಿ ದೊರೆಯುತ್ತಿದ್ದು, ಮಹಿಳೆಯರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶಿಕ್ಷಣ ದಿಂದ ಮಹಿಳೆ ಇನ್ನಷ್ಟು ಶಕ್ತಿಯನ್ನು ಪಡೆಯುತ್ತಾಳೆ ಎಂದು ಹೇಳಿದರು.

    ತಹಸೀಲ್ದಾರ್ ಕೆ.ಶರಣಮ್ಮ ಮಾತನಾಡಿ, ದೇಶದ ಪ್ರತಿಯೊಂದು ಕುಟುಂಬದಲ್ಲೂ ಮಹಿಳೆಯ ಪಾತ್ರ ಪ್ರಮುಖ. ಸೃಷ್ಟಿಯ ಮೂಲ ಹೆಣ್ಣು ಎಂದು ಪುರಾಣಗಳಲ್ಲಿ ಉಲ್ಲೇಖವಾದರೂ, ದೇಶದ ಚರಿತ್ರೆಯಲ್ಲಿ ಮಹಿಳೆ ಸಾಮ್ರಾಜ್ಯಗಳನ್ನು ಆಳ್ವಿಕೆ ಮಾಡುವ ಮೂಲಕ ಯುದ್ಧಗಳನ್ನೂ ಮಾಡುತ್ತಿದ್ದರೆಂಬುದಕ್ಕೆ ಹಲವು ನಿದರ್ಶನಗಳಿವೆ ಎಂದರು.

    ಸರ್ಕಾರಿ ಸಹಾಯಕ ಅಭಿಯೋಜಕ ಕೆ.ಅಜ್ಜಯ್ಯ, ಮಹಿಳೆಯರಿಗೆ ಕಾನೂನಿನಡಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಶಾಸ್ತ್ರಿ ವೃತ್ತದಿಂದ ಸೇವಾಲಾಲ್ ಭವನದವರೆಗೆ ಜಾಗೃತಿಜಾಥಾ ನಡೆಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಡೊಳ್ಳಿನ್, ಬಿಇಒ ಎಸ್.ಎನ್.ಹಳ್ಳಿಗುಡಿ, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಉಪ ತಹಸೀಲ್ದಾರ್ ಮಲ್ಲಿಕಾರ್ಜುನ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷ ಬಿ.ವಿಜಯಲಕ್ಷ್ಮೀ, ಬಿಸಿಯೂಟ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಅನಸೂಯ, ತಾಲೂಕು ಅಧ್ಯಕ್ಷೆ ಪಿ.ಕವಿತಾ, ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಚನ್ನಮ್ಮ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts