More

    ರೈತರಿಗೆ ಕಳಪೆ ಗೊಬ್ಬರ ಪೂರೈಕೆ, ಕ್ರಿಮಿನಲ್ ಕೇಸ್ ದಾಖಲಿಸಲು ಪಿ.ಟಿ.ಪಿ. ಆಗ್ರಹ

    ಹೂವಿನಹಡಗಲಿ: ತಾಲೂಕಿನ ನಂದಿಹಳ್ಳಿ, ಸೋಗಿ ಮತ್ತು ವರಕನಹಳ್ಳಿಯಲ್ಲಿ ಕಳಪೆ ಗೊಬ್ಬರ ಮಾರಿ ರೈತರನ್ನು ವಂಚಿಸಿರುವ ವರ್ತಕರ ವಿರುದ್ಧ ಅಧಿಕಾರಿಗಳು ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ನಕಲಿ ಗೊಬ್ಬರ ಮಾರಾಟಗರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಜಯನಗರ ಜಿಲ್ಲೆ ಜಂಟಿ ಕೃಷಿ ನಿರ್ದೇಶಕರು ಹಾಗೂ ಹಡಗಲಿಯ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದ್ದೇನೆ. ಜೋಳ, ಮೆಕ್ಕೆಜೋಳ ಮತ್ತಿತರ ಬೆಳೆಗಳಿಗೆ ನೀಡಿರುವ ಗೊಬ್ಬರ 30-40 ದಿನವಾದರೂ ಮಣ್ಣಿನಲ್ಲಿ ಕರಗಿಲ್ಲ. ಉತ್ತಮ ಮಳೆಯಾಗಿದ್ದರೂ ಫಸಲುಗಳ ಬೆಳವಣಿಗೆ ಕುಂಠಿತವಾಗಿದೆ. ಮೇಲು ಗೊಬ್ಬರ ನೀಡಿರುವ ಬೆಳೆಗಳು ಹುಲುಸಾಗಿ ಬೆಳೆಯುವ ಬದಲು ಕ್ಷೀಣಿಸತೊಡಗಿವೆ. ಮೇಲ್ನೋಟಕ್ಕೆ ಗೊಬ್ಬರ ಕಳಪೆ ಎಂಬುದು ಸಾಬೀತಾಗಿದ್ದರಿಂದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

    ಸೋಗಿ ಸುತ್ತಲಿನ 7-8 ಗ್ರಾಮಗಳಲ್ಲಿ ಕಳಪೆ ಗೊಬ್ಬರ ಮಾರಾಟವಾಗಿರುವ ಬಗ್ಗೆ ರೈತರು ದೂರಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ವರಕನಹಳ್ಳಿಯೇ ಕಳಪೆ ಗೊಬ್ಬರದ ಮೂಲವಾಗಿದೆ. ನಕಲಿ ಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸಿದವರ ರಸಗೊಬ್ಬರ ಮಾರಾಟ ಪರವಾನಗಿಯನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts