More

    ಕಾಂಗ್ರೆಸ್‌ಗೆ ಇವು ಕೊನೆಯ ದಿನಗಳು, ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ವ್ಯಾಖ್ಯಾನ

    ಹೂವಿನಹಡಗಲಿ: ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಆ ಪಕ್ಷ ಅಸ್ತಿತ್ವದ ಕೊನೆಯ ದಿನಗಳಾಗಿವೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಹೇಳಿದರು.

    ದಾಕ್ಷಾಯಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅ.13ರಂದು ನಡೆಸುತ್ತಿರುವ ಜನಸಂಕಲ್ಪಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಭಾರತ್ ಜೋಡೋ ಯಾತ್ರೆಗೆ ಸ್ಪಷ್ಟ ಉದ್ದೇಶವಿಲ್ಲ. ಭವಿಷ್ಯದ ದಿನಗಳಲ್ಲಿ ದೇಶದ ಜನರ ಕುರಿತಾದ ಯಾವುದೇ ಜನಪರ ಯೋಜನೆಗಳು ಅವರ ಬಳಿ ಇಲ್ಲ. ಒಂದು ಕುಟುಂಬದಿಂದ ಬಂದಿರುವವರನ್ನು ಮುಂದಿಟ್ಟುಕೊಂಡು ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ. ಭಾರತದ 130 ಕೋಟಿ ಜನ ಕಾಂಗ್ರೆಸ್ ಎಂಬ ಪುಸ್ತಕವನ್ನು ಮುಚ್ಚಿ ಗಂಗೆಗೆ ಅರ್ಪಿಸಿದ್ದಾರೆ ಎಂದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ನಡೆಸುತ್ತಿವೆ. ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದೆ. ಇದನ್ನು ನಮ್ಮ ರಾಜ್ಯದ ಜನತೆಗೆ ತಿಳಿಯಪಡಿಸುವುದೇ ಜನಸಂಕಲ್ಪಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಅವರು (ಕಾಂಗ್ರೆಸ್) ಹಣವಿದ್ದರೆ ಜನರನ್ನು ಕೊಂಡುಕೊಳ್ಳಬಹುದು ಎನ್ನುವ ಮನೋಭಾವ ಹೊಂದಿದ್ದಾರೆ. ನಾವು (ಬಿಜೆಪಿ) ಜನರ ಒಳಿತಿಗಾಗಿ ಪಕ್ಷ ಸಂಘಟನೆ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೆವೆ ಎಂದರು.

    ವಿಭಾಗಿಯ ಪ್ರಭಾರ ಸಿದ್ದೇಶ ಯಾದವ್ ಮಾತನಾಡಿ, ಭಾರತ್ ಜೋಡೋ ಯಾತ್ರೆಯು ವಾಜಪೇಯಿ ಕಾಲದಲ್ಲಿಯೇ ಪ್ರಾರಂಭವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದದ ವರೆಗೆ ಈಗಾಗಲೇ ದೇಶ ಜೋಡಣೆ ಕೆಲಸ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ನವರಿಗೆ ದೇಶ ಜೋಡಿಸುವ ಯಾವುದೇ ಕೆಲಸ ಇರುವುದಿಲ್ಲ ಇದು ಭಾರತ್ ಜೋಡೋ ಯಾತ್ರೆಯಲ್ಲ ಬದಲಿಗೆ ಕಾಂಗ್ರೇಸ್ ಜೋಡೋ ಯಾತ್ರೆಯಾಗಿದೆ ಎಂದರು.

    ವಿಭಾಗಿಯ ಸಹಪ್ರಭಾರಿ ಚಂದ್ರಶೇಖರ್ ಪಾಟೀಲ್ ಮಾತನಾಡಿದರು. ಮಂಡಲ ಅಧ್ಯಕ್ಷ ಸಂಜೀವ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ದೂದಾ ನಾಯ್ಕ, ಎಂ.ಬಿ.ಬಸವರಾಜ್, ಪಿ.ವಿಜಯಕುಮಾರ್, ಗುರುಸಿದ್ದಪ್ಪ, ಎಸ್.ಕೊಟ್ರೇಶ್, ಶಿವಪುರ ಸುರೇಶ್, ಈಟಿ. ಲಿಂಗರಾಜ್, ಸಿರಾಜ್ ಬಾವಿಹಳ್ಳಿ ವಿಭಾಗೀಯ ಸಂಘಟನ ಕಾರ್ಯದರ್ಶಿ ಎಚ್.ಪೂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ರಮೇಶ್ ನಾಯ್ಕ, ಕೆ.ರಾಘವೇಂದ್ರ, ರವಿಕುಮಾರ್ ಎಲ್.ಕೆ, ಲಲಿತಾಬಾಯಿ, ಮೀರಾಬಾಯಿ, ಐಯನಹಳ್ಳಿ ಭಾಗ್ಯಮ್ಮ ಇತರೆ ಪ್ರಮುಖರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts