More

    ಆಸ್ಟ್ರೇಲಿಯಾದ ಈ ಗಂಡ-ಹೆಂಡತಿ ಈಗ ಟಿ20 ವಿಶ್ವ ಚಾಂಪಿಯನ್ಸ್!

    ಮೆಲ್ಬೋರ್ನ್: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಮಹಿಳಾ ತಂಡದ ವಿಕೆಟ್ ಕೀಪರ್-ಬ್ಯಾಟರ್ ಅಲಿಸ್ಸಾ ಹೀಲಿ ಟಿ20 ವಿಶ್ವಕಪ್ ಜಯಿಸಿದ ಮೊದಲ ದಂಪತಿ ಎನಿಸಿದ್ದಾರೆ.

    ಅಲಿಸ್ಸಾ ಹೀಲಿ ಈಗಾಗಲೆ 5 ಬಾರಿ ಮಹಿಳಾ ಟಿ20 ವಿಶ್ವಕಪ್ (2010, 2012, 2014, 2018, 2020) ಗೆಲುವು ಕಂಡಿದ್ದರೆ, ಸ್ಟಾರ್ಕ್ ಕೂಡ ಈಗ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದಾರೆ. 31 ವರ್ಷದ ಸ್ಟಾರ್ಕ್ ಫೈನಲ್‌ನಲ್ಲಿ ದುಬಾರಿಯಾದರೂ, ಟೂರ್ನಿಯಲ್ಲಿ 11 ವಿಕೆಟ್ ಕಬಳಿಸಿ ಮಿಂಚಿದ್ದರು. ಸ್ಟಾರ್ಕ್-ಅಲಿಸ್ಸಾ 2016ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು.

    ಅಲಿಸ್ಸಾ ಹೀಲಿ 2020ರ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಬಿರುಸಿನ 75 ರನ್ (39 ಎಸೆತ, 7 ಬೌಂಡರಿ, 5 ಸಿಕ್ಸರ್) ಸಿಡಿಸಿ ಆಸೀಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆ ಪಂದ್ಯಕ್ಕೆ ಸ್ಟಾರ್ಕ್ ಸ್ಟೇಡಿಯಂನಲ್ಲಿ ಸಾಕ್ಷಿಯಾಗಿದ್ದರು.

    ಆಸ್ಟ್ರೇಲಿಯಾ ತಂಡಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ; ಕಿವೀಸ್‌ಗೆ ನಿರಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts