More

    ಸರ್ಕಾರಕ್ಕೆ ನಿಖರ ಮಾಹಿತಿ ಒದಗಿಸಿ

    ಹುನಗುಂದ: ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ತಾವೇ ಮಾಡಿಕೊಳ್ಳುವ ಮೂಲಕ ಸರ್ಕಾರಕ್ಕೆ ನಿಖರ ಮಾಹಿತಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ತಿರಕನ್ನವರ ಹೇಳಿದರು.

    ತಾಲೂಕಿನ ಕರಡಿ ಮತ್ತು ಹಿರೇಬಾದವಾಡಗಿ ಗ್ರಾಮಗಳ ರೈತ ಜಮೀನಿಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆಯ ಕುರಿತು ರೈತರೊಂದಿಗೆ ಸುದೀರ್ಘ ಚರ್ಚೆ ಮತ್ತು ಬೆಳೆ ಸಮೀಕ್ಷೆಯ ಮಾಹಿತಿ ನೀಡಿ ಮಾತನಾಡಿ, ನಿಮ್ಮ ಮೊಬೈಲ್ ಗೂಗಲ್ ಪ್ಲೇಸ್ಟೋರ್‌ನಿಂದ ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21 ಆ್ಯಪ್ ಡೌನ್‌ಲೋಡ್ ಮಾಡಿ ಆರ್ಥಿಕ ವರ್ಷ ಹಾಗೂ ಋತು ದಾಖಲಿಸಬೇಕು. ನಂತರ ಆಧಾರ್ ಕ್ಯುಆರ್ ಕೋಡ್ ಸ್ಕಾೃನ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಆ್ಯಪ್‌ನ್ನು ಸಕ್ರಿಯಗೊಳಿಸಬೇಕು. ಆಗ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆಯನ್ನು ಆ್ಯಪ್‌ನ ನಿಗದಿತ ಕಾಲಂನಲ್ಲಿ ದಾಖಲಿಸಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸರ್ವೆ ನಂಬರ್,ಹಿಸ್ಸಾ ಮಾಲೀಕ ಆಯ್ಕೆ ಮಾಡಿ ಕ್ಷೇತ್ರ ನಮೂದಿಸಬೇಕು. ಸರ್ವೆ ನಂಬರ್‌ಗಳಡಿ ರೇಖೆಯೊಳಗೆ ನಿಂತು ವಿವರ ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು ಎಂದರು.

    ಸಹಾಯಕ ಕೃಷಿ ಅಧಿಕಾರಿ ರಾಘವೇಂದ್ರ ಜಾಧವ ಮಾತನಾಡಿ, ಬೆಳೆ ಸಮೀಕ್ಷೆ ಮಾಡುವುದು ರೈತರಿಗೆ ಬಹಳಷ್ಟು ಅನುಕೂಲಕಾರಿಯಾಗಿದೆ. ಇದರಿಂದ ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನುವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನದ ಕುರಿತು ಮಾಹಿತಿ ಪಡೆಯಲು ಸಾಧ್ಯ ಎಂದರು.

    ಸಹಾಯಕ ಕೃಷಿ ನಿರ್ದೇಶಕ ವಿನೋದ, ಡಾ.ಶ್ರೀಕಾಂತ ಚವ್ಹಾಣ, ಕೃಷಿ ಅಧಿಕಾರಿ ಎಸ್.ಡಿ. ಸಜ್ಜನ, ರೈತರಾದ ಬೇಗಂ ಖಾಜಿ, ನಬೀಸಾಬ ನದ್ಾ, ಹನುಮಪ್ಪ ಹೊಸಮನಿ, ಈಶಪ್ಪ ಪಾಟೀಲ, ದ್ಯಾವಪ್ಪ ಮಿಸಿ ಹಾಗೂ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts