ಸಮುದ್ರದಾಳದಲ್ಲಿ 500 ವರ್ಷ ಹಳೆಯ ಮಸಾಲೆ ಪತ್ತೆ! ಇನ್ನೂ ಸುಸ್ಥಿತಿಯಲ್ಲಿ ಇದೆಯಂತೆ…

blank

ಸ್ವೀಡನ್: 500 ವರ್ಷಗಳ ಹಿಂದೆ ಸ್ವೀಡನ್ನ ಬಾಲ್ಟಿಕ್ ಕರಾವಳಿಯಲ್ಲಿ ಮುಳುಗಿದ ರಾಜಮನೆತನದ ಹಡಗಿನ ಅವಶೇಷಗಳ ಮೇಲೆ ಕುಂಕುಮಕೇಸರಿ ಎಳೆಗಳಿಂದ ಹಿಡಿದು ಮೆಣಸು ಮತ್ತು ಶುಂಠಿಯವರೆಗೆ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಮಸಾಲೆಗಳ ಸಂಗ್ರಹವನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

ಸಮುದ್ರದಾಳದಲ್ಲಿ 500 ವರ್ಷ ಹಳೆಯ ಮಸಾಲೆ ಪತ್ತೆ! ಇನ್ನೂ ಸುಸ್ಥಿತಿಯಲ್ಲಿ ಇದೆಯಂತೆ…

ಡೆನ್ಮಾರ್ಕ್ ಮತ್ತು ನಾರ್ವೆಯ ರಾಜ ಹ್ಯಾನ್ಸ್ ಒಡೆತನದ ಗ್ರಿಬ್ಶಂಡ್ನ ಅವಶೇಷಗಳು 1495ರಿಂದ ರೊನ್ನೆಬಿ ಕರಾವಳಿಯಲ್ಲಿ ಬಿದ್ದಿವೆ. ಆಗ ಚಕ್ರವರ್ತಿ ಸ್ವೀಡನ್ನಲ್ಲಿ ನಡೆದ ರಾಜಕೀಯ ಸಭೆಯಲ್ಲಿ ಭಾಗವಹಿಸಲು ಹೊರಟಿದ್ದಾಗ ಹಡಗಿಗೆ ಬೆಂಕಿ ಹೊತ್ತಿಕೊಂಡು ಮುಳುಗಿದೆ ಎಂದು ಭಾವಿಸಲಾಗಿದೆ.

1960 ರ ದಶಕದಲ್ಲಿ ಡೈವರ್ ಗಳು ಈ ಜಾಗವನ್ನು ಮರುಶೋಧಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಹಡಗಿನ ವಿರಳ ಉತ್ಖನನಗಳು ನಡೆದಿವೆ. ಹಿಂದಿನ ಡೈವ್ ಗಳು ಫಿಗರ್ ಹೆಡ್ ಗಳು ಮತ್ತು ದೊಡ್ಡ ವಸ್ತುಗಳನ್ನು ಮೇಲಕ್ಕೆತ್ತಿದ್ದವು. ಈಗ ಲುಂಡ್ ವಿಶ್ವವಿದ್ಯಾಲಯದ ಪುರಾತತ್ವ ವಿಜ್ಞಾನಿ ಬ್ರೆಂಡನ್ ಫೋಲೆ ನೇತೃತ್ವದ ಉತ್ಖನನ ತಂಡ ದೋಣಿಯ ಹೂಳಿನಲ್ಲಿ ಹುದುಗಿರುವ ಮಸಾಲೆಗಳನ್ನು ಕಂಡುಹಿಡಿದಿದೆ.

“ಬಾಲ್ಟಿಕ್ ಸಮುದ್ರ ವಿಚಿತ್ರವಾಗಿದೆ. ಇದು ಕಡಿಮೆ ಆಮ್ಲಜನಕ, ಕಡಿಮೆ ತಾಪಮಾನ, ಕಡಿಮೆ ಲವಣಾಂಶ, ಹೊಂದಿದೆ. ಆದ್ದರಿಂದ ಅನೇಕ ನೈಸರ್ಗಿಕ ಮಸಾಲೆ ಹಾಗೂ ಇತರೆ ವಸ್ತುಗಳು ಬಾಲ್ಟಿಕ್ ಸಮುದ್ರದಲ್ಲಿ ಚೆನ್ನಾಗಿ ಸಂರಕ್ಷಿಸಲಾಗಿದೆ. ಈ ರೀತಿ ಬೇರೆ ಸಮುದ್ರದಲ್ಲಿ ಮಸಾಲೆ ಉಳಿಯುವುದು ಸಾಧ್ಯ ಇಲ್ಲವೋ ಏನೋ. ಈ ರೀತಿ, ನೂರಾರು ವರ್ಷ ಹಳೆಯ ಮಸಾಲೆಗಳನ್ನು ಸಮುದ್ರದ ಆಳದಲ್ಲಿ ಕಂಡುಹಿಡಿಯುವುದು ಸಾಕಷ್ಟು ಅಸಾಧಾರಣವಾಗಿದೆ” ಎಂದು ಫೋಲೆ ಹೇಳಿದರು.

ಸಂಬಾರ ಪದಾರ್ಥಗಳು ಉನ್ನತ ಸ್ಥಾನಮಾನದ ಸಂಕೇತವಾಗಿರಬಹುದು. ಏಕೆಂದರೆ ಶ್ರೀಮಂತರು ಮಾತ್ರ ಕೇಸರಿ ಅಥವಾ ಲವಂಗದಂತಹ ಯುರೋಪಿನ ಹೊರಗಿನಿಂದ ಆಮದು ಮಾಡಿಕೊಳ್ಳುವ ಸರಕುಗಳನ್ನು ಖರೀದಿಸಲು ಸಾಧ್ಯವಿತ್ತು.

ಸಂಶೋಧನೆಗಳನ್ನು ಅಧ್ಯಯನ ಮಾಡುತ್ತಿರುವ ಲುಂಡ್ ವಿಶ್ವವಿದ್ಯಾಲಯದ ಸಂಶೋಧಕ ಮೈಕೆಲ್ ಲಾರ್ಸನ್, “ನಾವು ಕೇಸರಿಯನ್ನು ಕಂಡುಹಿಡಿದ ಏಕೈಕ ಪುರಾತತ್ವ ಸಂದರ್ಭ ಇದು. ಆದ್ದರಿಂದ ಇದು ತುಂಬಾ ವಿಶಿಷ್ಟವಾಗಿದೆ ಮತ್ತು ಇದು ತುಂಬಾ ವಿಶೇಷವಾಗಿದೆ. (ಏಜೆನ್ಸೀಸ್)

Share This Article

Monday Puja Tips: ಸೋಮವಾರದಂದು ಈ ಕಾರ್ಯಗಳನ್ನು ಮಾಡಿ ನೋಡಿ.. ಶಿವನ ಕೃಪೆಗೆ ಪಾತ್ರರಾಗುತ್ತೀರ…

Monday Puja Tips: ಸೋಮವಾರ ಹಿಂದೂ ಧರ್ಮದಲ್ಲಿ ಶಿವನಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು…

ನೀವು ಅಡುಗೆಗೆ ಪಾಮ್​ ಆಯಿಲ್​ ಬಳಸುತ್ತಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು! Palm Oil

Palm Oil : ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಎಣ್ಣೆಗಳನ್ನು ಬಳಸಲಾಗುತ್ತದೆ. ಕಡಲೆ ಎಣ್ಣೆ, ಸೂರ್ಯಕಾಂತಿ…

Relationship Tips : ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡುತ್ತಿದ್ದೀರಾ? ಈ ರೀತಿಯಲ್ಲಿ ನಿಮ್ಮ ಸಂಬಂಧ ಗಟ್ಟಿ ಮಾಡಿಕೊಳ್ಳಿ…

Relationship Tips : ಪತಿ-ಪತ್ನಿಯರ ನಡುವಿನ ಸಣ್ಣ ಜಗಳಗಳು ಸಮಯದೊಂದಿಗೆ ಪರಿಹರಿಸಲ್ಪಡುತ್ತವೆ, ಇಲ್ಲದಿದ್ದರೆ ಕೆಲವೊಮ್ಮೆ ಉದ್ವಿಗ್ನತೆ…