More

    ಮನೆಯೊಳಗೆ ನಾಗರಹಾವಿನ ಮರಿಗಳ ಭಯ, ಹೊರಗೆ ಕೋವಿಡ್​ 19 ಆತಂಕ!

    ಮನೆಯೊಳಗೂ ಇರುವಂತಿಲ್ಲ… ಮನೆಯ ಹೊರಗೂ ಬರುವಂತಿಲ್ಲ…. ಇದು ಗ್ರಾಮದ ಮನೆಯೊಂದರ ನಿವಾಸಿಗಳ ನಿತ್ಯ ಗೋಳು! ಅಷ್ಟೇ ಅಲ್ಲ, ಈ ಮನೆಯಲ್ಲಿ ಆಗುತ್ತಿರುವ ಈ ಘಟನೆಯನ್ನು ಕಂಡು ಇಡೀ ಗ್ರಾಮವೇ ಕಂಗಾಲಾಗಿದೆ. ಇದು ಒಳ್ಳೆಯ ಶಕುನವಾ ಅಥವಾ ಅಪಶಕುನವಾ ಎಂದು ತಿಳಿಯದೆ ಗೊಂದಲಕ್ಕೆ ಬಿದ್ದಿದ್ದಾರೆ.

    ಮಧ್ಯಪ್ರದೇಶದ ರೋನ್​ ಎಂಬ ಗ್ರಾಮದ ಜೀವನ್​ ಸಿಂಗ್​ ಕುಶ್ವಾ ಎಂಬಾತನ ಮನೆಯಲ್ಲಿ ಕತ್ತಲಾವರಿಸುತ್ತಿದ್ದಂತೆ ನೂರಾರು ಸಂಖ್ಯೆಯ ನಾಗರಹಾವಿನ ಮರಿಗಳು ಮನೆಯ ತುಂಬಾ ಹರಿದಾಡಲಾರಂಭಿಸುತ್ತವೆ. ಎರಡ್ಮೂರು ದಿನಗಳ ಹಿಂದಷ್ಟೇ ಮೊಟ್ಟೆಯೊಡೆದು ಹೊರಬಂದಿರುವ ಈ ಮರಿಗಳು ಬೆಳಗಾಗುತ್ತಲೇ ಬಿಲವನ್ನು ಸೇರಿಕೊಂಡು ಬಿಡುತ್ತವೆ ಎಂದು ಜೀವನ್​ ಸಿಂಗ್​ ಕುಶ್ವಾ ಅಸಹಾಯಕತೆ ವ್ಯಕ್ತಪಡಿಸುತ್ತಾನೆ.

    ನಾಗರಹಾವಿನ ಮರಿಗಳು ವಯಸ್ಕ ನಾಗರಹಾವುಗಳಿಗಿಂತಲೂ ಹೆಚ್ಚು ಅಪಾಯಕಾರಿ. ಏಕೆಂದರೆ ಇವು ಕಚ್ಚಿದರೆ ತಮ್ಮಲ್ಲಿ ಇರುವ ವಿಷದ ಅಂಶ ಎಲ್ಲವನ್ನೂ ಕಕ್ಕಿಬಿಡುತ್ತವೆ. ಆದರೆ, ವಯಸ್ಕ ನಾಗರಹಾವುಗಳು ಹಾಗಲ್ಲ. ಮುಂದಿನ ಬಳಕೆಗೆ ಅನುವಾಗುವಂತೆ ತಮ್ಮಲ್ಲಿರುವ ವಿಷದ ಸಂಗ್ರಹವನ್ನು ಕಾಪಿಟ್ಟುಕೊಳ್ಳುತ್ತವೆ. ಆದರೆ, ಮರಿಗಳಲ್ಲಿ ವಿಷವನ್ನು ಕಾಪಿಟ್ಟುಕೊಳ್ಳುವ ವ್ಯವಸ್ಥೆ ಇನ್ನೂ ಅಭಿವೃದ್ಧಿ ಹೊಂದಿರುವುದಿಲ್ಲ ಎಂದು ಉರುಗ ತಜ್ಞರು ವಿವರಿಸುತ್ತಾರೆ.

    ಇದನ್ನೂ ಓದಿ: ಸಚಿವ ಮಾಧುಸ್ವಾಮಿಗೆ ಎಚ್ಚರಿಕೆ ನೀಡಿದ ಸಿಎಂ ಬಿಎಸ್​ವೈ

    ಹಾವಿನ ಮರಿಗಳ ಭಯದಿಂದಾಗಿ ಜೀವನ್​ ಸಿಂಗ್​ ಕುಶ್ವಾನ ಕುಟುಂಬದ ಸದಸ್ಯರೆಲ್ಲರೂ ಬೇರೊಂದು ಗ್ರಾಮದಲ್ಲಿರುವ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ಜೀವನ್​ ಸಿಂಗ್​ ಕುಶ್ವಾ ಮಾತ್ರ ರಾತ್ರಿಯ ಬಳಿಕ ಮನೆಯ ಕಾವಲಿಗೆ ಉಳಿದುಕೊಳ್ಳುತ್ತಿದ್ದಾನೆ. ಒಂದು ಕುರ್ಚಿಯ ಮೇಲೆ ಕುಳಿತು ನೋಡುತ್ತಿರುವಂತೆ ನೂರಾರು ಹಾವಿನಮರಿಗಳು ಬಿಲದಿಂದ ಹೊರಬಂದು ಮನೆಯ ತುಂಬೆಲ್ಲ ಹರಿದಾಡಲು ಆರಂಭಿಸುತ್ತವೆ.

    ಹೀಗೆ ಒಮ್ಮೆ ಕಷ್ಟಪಟ್ಟು ಒಂದು ಬಿಲವನ್ನು ಹುಡುಕಿ, ಅದರಲ್ಲಿದ್ದ 51 ಮರಿಗಳನ್ನು ಸಂರಕ್ಷಿಸಲಾಯಿತು. ಆದರೆ, ಸಂಜೆಯಾಗುತ್ತಲೇ ಐದಾರು ವಯಸ್ಕ ಹಾವುಗಳು ಹರಿದಾಟ ಕಂಡುಬಂದಿತು. ಅದರ ಬೆನ್ನಲ್ಲೇ ನೂರಾರು ಮರಿಗಳು ಮತ್ತೆ ಮನೆಯ ತುಂಬೆಲ್ಲ ಆವರಿಸಿಕೊಂಡವು ಎಂದು ಜೀವನ್​ ಸಿಂಗ್​ ಕುಶ್ವಾ ಅಸಹಾಯಕತೆ ವ್ಯಕ್ತಪಡಿಸುತ್ತಾನೆ.

    ಈತನ ಪರಿಸ್ಥಿತಿ ಅರಿತು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಮತ್ತು ಉರುಗತಜ್ಞರು ಹಾವುಗಳ ಬಿಲವನ್ನು ಹುಡುಕಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಒಂದೊಂದೇ ಬಿಲದಿಂದ ನೂರಾರು ಮರಿಗಳನ್ನು ಹಿಡಿದು, ದೂರದಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಅವುಗಳನ್ನು ಸುರಕ್ಷಿತವಾಗಿ ಬಿಟ್ಟುಬರುವ ಕೆಲಸ ಮಾಡಲಾಗುತ್ತಿದೆ. ಸ್ಥಳೀಯ ಗ್ರಾಮಸ್ಥರು ಕೂಡ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಆದರೂ ಹಾವುಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎನ್ನಲಾಗಿದೆ.

    ಪೆಟ್ರೋಲ್​, ಡೀಸೆಲ್​ ಮಾರಾಟ ಮೊದಲಿನಂತಾಗಲು ಇನ್ನಾರು ತಿಂಗಳು ಬೇಕು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts