More

    ಯಲಗೂರದಲ್ಲಿ ಹುಂಡಿ ಹಣ ಎಣಿಕೆ

    ಆಲಮಟ್ಟಿ : ಸುಕ್ಷೇತ್ರ ಯಲಗೂರು ಗ್ರಾಮದ ಆಂಜನೇಯ ದೇವರ ಹುಂಡಿಗಳ ಹಣ ಎಣಿಕೆ ಕಾರ್ಯ ಭಾನುವಾರ ಜರುಗಿತು.
    ಒಟ್ಟು 2 ಕಬ್ಬಿಣದ ಹುಂಡಿಗಳಲ್ಲಿನ ಹಣ ಎಣಿಕೆ ಕಾರ್ಯ ಬೆಳಗ್ಗೆ 10 ರಿಂದ ಸಂಜೆ ರಾತ್ರಿ 8.15 ಗಂಟೆವರೆಗೆ ನಡೆಯಿತು.
    ಒಟ್ಟು 51,53,174 ರೂ. ಹಾಗೂ 160 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

    ಎಣಿಕೆ ವೇಳೆ ವಿಡಿಯೋ ಚಿತ್ರೀಕರಣ, ಪೊಲೀಸ್ ರಕ್ಷಣೆ ಕೈಗೊಳ್ಳಲಾಗಿತ್ತು. ಕೆನರಾ ಬ್ಯಾಂಕ್ ಸಿಬ್ಬಂದಿ, ದೇವಸ್ಥಾನ ಸಮಿತಿ, ಅರ್ಚಕರು ಹಾಗೂ ಭಕ್ತರು ಸೇರಿದಂತೆ ಅಂದಾಜು 60ಕ್ಕೂ ಹೆಚ್ಚು ಜನ ಹುಂಡಿಗಳಲ್ಲಿನ ಹಣ ಎಣಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು.

    ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಉತ್ತಮ ಬೆಳವಣಿಗೆ

    ಅನಂತ ಓಂಕಾರ, ಶ್ಯಾಮ್ ಪಾತ್ರದ, ಗುಂಡೂರಾವ್ ಕುಲಕರ್ಣಿ, ಗೋಪಾಲ ಗದ್ದನಕೇರಿ, ಗುರುರಾಜ ಪರ್ವತೀಕರ, ಗುಂಡಪ್ಪ ಪೂಜಾರಿ, ಸಂತೋಷ ಪೂಜಾರಿ, ಭೀಮಣ್ಣ ಪೂಜಾರಿ, ಯಲಗೂರದಪ್ಪ ಪೂಜಾರಿ ಇತರರಿದ್ದರು.

    ದೇವರಿಗೆ ಪತ್ರದ ಮೂಲಕ ಮೊರೆ
    ಹುಂಡಿ ಹಣ ಎಣಿಕೆ ವೇಳೆ ದೇವರಲ್ಲಿ ಭಕ್ತರು ಮೊರೆ ಇಡುವ ಅನೇಕ ಪತ್ರಗಳು ಕಂಡು ಬಂದವು. ನಾನು ಮಾಡಿದ ಸಾಲ ಪರಿಹಾರಕ್ಕೆ ದಾರಿ ತೋರಿಸು ಯಲಗೂರು ಹನುಮಪ್ಪ, ನನ್ನ ಅಣ್ಣನಿಗೆ ಆರಾಮ ಆಗಲಿ, ಜಿಎನ್‌ಎಂ ಪಾಸಾಗಲಿ, ನನ್ನ ತಂದೆ ತಾಯಿಯನ್ನು ಚೆನ್ನಾಗಿಡು, ಆರ್ಮಿ ರನ್ನಿಂಗ್‌ನಲ್ಲಿ ಅತಿ ವೇಗವಾಗಿ ಓಡುವಂತೆ ಮಾಡು ಆರೋಗ್ಯವಾಗಿಡು, ಹೆಂಡತಿ ಮಕ್ಕಳ ನಡುವೆ ಜಗಳವಾಗದಂತಿರಿಸು, ಮಗನಿಗೆ ಎಂಬಿಎ ಸೀಟ್ ಸಿಗಲಿ ಮತ್ತೆ ಬಂದು ನಿನ್ನ ದರ್ಶನ ಮಾಡುತ್ತೇನೆ, ನೌಕರಿ ಅವಶ್ಯಕತೆ ತುಂಬ ಇದ್ದು ಬೇಗನೆ ಒಳ್ಳೆಯ ಕಂಪನಿಯಲ್ಲಿ ಹೆಚ್ಚಿನ ಸಂಬಳದ ನೌಕರಿ ಸಿಕ್ಕು ಉತ್ತಮ ಜೀವನ ನಡೆಸುವಂತೆ ಆಶೀರ್ವಾದ ಮಾಡು ನಿನಗೆ ಬೂಂದಿ ಲಾಡು ನೈವೇದ್ಯ ಸಲ್ಲಿಸುತ್ತೇನೆ ಎಂದು ಮರಾಠಿಯಲ್ಲಿ ಬರೆದ ಪತ್ರಗಳು ಸೇರಿದಂತೆ ಅನೇಕ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬರೆದ ಪತ್ರಗಳು ದೊರಕಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts