More

    ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಉತ್ತಮ ಬೆಳವಣಿಗೆ

    ಮುಧೋಳ: ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯವಾಗಿದೆ. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದರು.

    ನಗರದ ಇಂಗಳಗಿ ರಸ್ತೆಯಲ್ಲಿರುವ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಮುಧೋಳ ತಾಲೂಕು ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ, ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗಾಣಿಗ ಯುವ ಘಟಕದ ಆಶ್ರಯದಲ್ಲಿ 2022-23ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಗಾಣಿಗ ಸಮಾಜ ಸ್ನೇಹಪರ ಸಮಾಜ. ಎಲ್ಲರೊಂದಿಗೂ ಹೊಂದಿಕೊಳ್ಳುವ ಸಮಾಜ. ಈ ಸಮಾಜಕ್ಕೆ ನನ್ನ ಕೈಲಾದಮಟ್ಟಿಗೆ ಸರ್ಕಾದಿಂದ ಸೌಲಭ್ಯ ಕೊಡಿಸಲು ಪ್ರಯತ್ನಿಸುವೆ ಎಂದು ತಿಳಿಸಿದರು.

    ವಿಜಯಪುರ ಗಾಣಿಗ ಗುರುಪೀಠ ವನಶ್ರೀ ಸಂಸ್ಥಾನ ಮಠದ ಡಾ. ಜಯಬಸವ ಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಣದಿಂದ ಎಲ್ಲವನ್ನು ಗೆಲ್ಲಬಹುದು. ಸಮಾಜದ ಎಲ್ಲ ವಿದ್ಯಾರ್ಥಿಗಳು ದೊಡ್ಡದಾಗಿ ಗುರಿ ಇಟ್ಟುಕೊಂಡಿರಬೇಕು. ಅದನ್ನು ಪಡೆಯುವವರೆಗೂ ವಿಶ್ರಾಂತಿ ಪಡೆಯದೆ ಕಾರ್ಯ ಮಾಡಬೇಕು ಎಂದರು.

    ಮುಧೋಳ ಗವಿಮಠ-ವಿರಕ್ತಮಠದ ಶ್ರೀ ಬಸವಲಿಂಗ ಸ್ವಾಮಿಗಳು, ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಶ್ರೀ ಯೋಗಿನಾಥ ಕಲ್ಲಿನಾಥ ದೇವರು ಆಶೀರ್ವಚನ ನೀಡಿದರು.

    ಇದನ್ನೂ ಓದಿ: ಕೆರೆ ತುಂಬುವುದರಿಂದ ರೈತರಿಗೆ ಅನುಕೂಲ

    ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ ಚಿನ್ನಣ್ಣವರ ಅಧ್ಯಕ್ಷತೆ ವಹಿಸಿದ್ದರು.

    ಮಾಜಿ ಶಾಸಕ ಆನಂದ ನ್ಯಾಮಗೌಡ, ಮಾಜಿ ಎಂಎಲ್‌ಸಿ ಜಿ.ಎಸ್. ನ್ಯಾಮಗೌಡ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಶಾಂತಗೌಡ ಪಾಟೀಲ, ಡಾ.ಶಿವಾನಂದ ಅಂತಾಪುರ, ಗುರಣ್ಣ ಗೋಡಿ, ಆರ್. ಆರ್. ಜರಾದರ, ವಿ. ಎಂ. ಗಾಣಿಗೇರ , ಹೊಳಬಸು ತೇಲಿ ಇತರರಿದ್ದರು.

    ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಉಪ ಕಾರ್ಯದರ್ಶಿ ಮಲ್ಲಕಾರ್ಜುನ ತೊದಲಬಾಗಿ, ತಹಸೀಲ್ದಾರ್ ವಿನೋದ ಹತ್ತಳ್ಳಿ, ದುಂಡಪ್ಪ ಕೋಮಾರ, ಬಿಆರ್‌ಸಿ ಅಡಿವೆಪ್ಪ ಛಬ್ಬಿ, ಸಂಶೋಧಕಿ ಡಾ. ಮೇಘನಾ ಜಿ., ಜ್ಯೋತಿ ಕೊಲ್ಲಾರ, ವೀರಣಗೌಡ ಮರಿಗೌಡರ, ಡಾ. ಮಾಕರ್ಂಡಯ್ಯ ಹಂದ್ರಾಳ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts