More

    ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ

    ಹುಣಸೂರು: ಮತದಾನ ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಹೇಳಿದರು.

    ಫೆ.9ರಂದು ನಡೆಯಲಿರುವ ನಗರಸಭೆ ಚುನಾವಣೆ ಪ್ರಕ್ರಿಯೆಲ್ಲಿ ಪಾಲ್ಗೊಳ್ಳಲಿರುವ ಅಧಿಕಾರಿಗಳಿಗೆ ಗುರುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

    ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ನಡೆಸುವ ಚುನಾವಣೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಈ ಬಾರಿಯ ಚುನಾವಣೆಯಲ್ಲಿ ವಿವಿ ಪ್ಯಾಟ್ ಇರುವುದಿಲ್ಲ. ಹುಣಸೂರು ನಗರಸಭೆ ವ್ಯಾಪ್ತಿ 49 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಚುನಾವಣಾ ಸಿಬ್ಬಂದಿಯಲ್ಲಿ ಅನುಮಾನಗಳಿದ್ದರೆ ತರಬೇತಿ ವೇಳೆ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ತಹಸೀಲ್ದಾರ್ ಐ.ಇ.ಬಸವರಾಜು ಮಾತನಾಡಿ, ಮತಯಂತ್ರಕ್ಕೆ ಬ್ಯಾಲೆಟ್ ಪೇಪರ್ ಅಳವಡಿಸುವ ಕಾರ್ಯ ಶೀಘ್ರ ಕೈಗೊಳ್ಳಲಾಗುವುದು. ತರಬೇತಿ ವೇಳೆ ಮತಯಂತ್ರ ಓಪನ್ ಮಾಡುವ, ಮತದಾನಕ್ಕೆ ಚಾಲನೆ ನೀಡುವ, ಮತದಾನದ ಅವಧಿ ಪೂರ್ಣಗೊಂಡ ನಂತರ ಮತಯಂತ್ರವನ್ನು ಸೀಲ್ ಮಾಡುವ ಕುರಿತು ಸಮಗ್ರ ಮಾಹಿತಿಯನ್ನು ತರಬೇತಿ ವೇಳೆ ನೀಡಲಾಗುವುದು ಎಂದರು.

    ಮಾಸ್ಟರ್ ಟ್ರೈನರ್ ಸಂತೋಷ್‌ಕುಮಾರ್ ಮತಯಂತ್ರಗಳ ಕುರಿತು ಮಾಹಿತಿ ಒದಗಿಸಿದರು. 45 ಪಿಆರ್‌ಒ, 45 ಎಪಿಆರ್‌ಒ ಸೇರಿದಂತೆ ಒಟ್ಟು 180 ಸಿಬ್ಬಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts