More

    ಯೋಜನೆ ವೈಫಲ್ಯದ ಕಾರಣ ತನಿಖೆಗೆ ಆಗ್ರಹ

    ಹುನಗುಂದ: ಮರೋಳ ಏತ ನೀರಾವರಿ ಯೋಜನೆಯ ಮೊದಲನೇ ಮತ್ತು ಎರಡನೇ ಹಂತದ ಯೋಜನೆಗಳ ವೈಲ್ಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ವೈಲ್ಯಕ್ಕೆ ಕಾರಣರಾದವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಹನಿ ನೀರಾವರಿ ವಿತರಣೆ ಕೇಂದ್ರಕ್ಕೆ ನೀರು ಪೂರೈಸುವ ಧನ್ನೂರ ಸಮೀಪದ ಮುಖ್ಯ ಕಾಲುವೆ ಇತ್ತೀಚೆಗೆ ಸುರಿದ ಮಳೆಗೆ ಕುಸಿದು ಹೋಗಿದೆ. ಕಳಪೆ ಕಾಮಗಾರಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? ಎಂದು ಪ್ರಶ್ನಿಸಿದ ಅವರು, ಅದಕ್ಕೆ ಕಾರಣರಾದವರನ್ನು ಯಾವ ಕಾರಣಕ್ಕೂ ಕ್ಷಮಿಸಕೂಡದು ಎಂದರು.

    ಒಂದನೇ ಹಂತದ ನೀರಾವರಿ ಯೋಜನೆಗೆ 275 ಕೋಟಿ ರೂ. ಖರ್ಚಾದರೂ ಯೋಜನೆ ಪೂರ್ಣಗೊಂಡಿಲ್ಲ. ಆದರೆ, ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಷಾಮೀಲಾಗಿ ಕಾಗದದಲ್ಲೇ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

    ಪೂರ್ವ ಭಾಗದ 52 ಕಿ.ಮೀ. ಕಾಲುವೆಯಲ್ಲಿ 44 ಕಿ.ಮೀ. ಕಾಮಗಾರಿ ಕಳಪೆ ಆಗಿದೆ. 8 ಕಿ.ಮೀ. ಕಾಮಗಾರಿಯೇ ಆಗಿಲ್ಲ. ಹೀಗಿದ್ದರೂ ಯೋಜನೆ ಪೂರ್ಣಗೊಂಡಿದೆ ಎಂದು ಹೇಳುತ್ತಿರುವುದು ಅತಿರೇಕದ ಸಂಗತಿಯಾಗಿದೆ. ಈ ಎರಡೂ ಹಂತದ ಯೋಜನೆಗಳ ವೈಫಲ್ಯದಲ್ಲಿ ಜನಪ್ರತಿನಿಧಿಗಳ ಪಾತ್ರವೇ ಪ್ರಮುಖವಾಗಿದೆ ಎಂದು ಆರೋಪಿಸಿದರು.

    ಮೊದಲ ಹಂತದ ಪಶ್ಚಿಮ ಭಾಗದ ಕಾಲುವೆಗೆ ನೀರು ಹರಿಯುತ್ತಿದ್ದರೂ ಅದು ರೈತರ ಹೊಲಗಳಿಗೆ ಹೋಗದೆ ನದಿ ಸೇರುತ್ತಿದೆ. ರೈತರು ಅಲ್ಲಲ್ಲಿ ಈ ಕಾಲುವೆಗೆ ಇಂಜಿನ್ ಹಚ್ಚಿ ನೀರೆತ್ತಿಕೊಳ್ಳುತ್ತಿದ್ದಾರೆ. ನೀರಾವರಿ ಯೋಜನೆಗಳ ಹರಿಕಾರರೆಂದು ಬಡಾಯಿ ಕೊಚ್ಚಿಕೊಳ್ಳುವ ಮಹಾನುಭಾವರು ಇದಕ್ಕೇನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.

    ಇತ್ತೀಚೆಗೆ ಹನಿ ನೀರಾವರಿ ಯೋಜನೆಗಳ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಿದ್ದ ಸರ್ಕಾರ ಸಿದ್ಧಗೊಂಡಿರುವ ತನಿಖಾ ವರದಿಯನ್ನು ಬಹಿರಂಗಪಡಿಸಬೇಕು. ಮೊದಲ ಹಂತದ ಯೋಜನೆ ವೈಲ್ಯದ ಬಗ್ಗೆಯೂ ಸಮಗ್ರ ತನಿಖೆಗೆ ಆದೇಶಿಸಿ ಯೋಜನೆ ವೈಲ್ಯಕ್ಕೆ ಕಾರಣರಾಗಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಹೊಂಗಲ್ ಒತ್ತಾಯಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts