More

    ಲಂಚಕ್ಕೆ ಪೀಡಿಸಿದರೆ ದೂರು ಸಲ್ಲಿಸಿ

    ಹುನಗುಂದ: ಸರ್ಕಾರದ ಯಾವುದೇ ಕಚೇರಿಯಲ್ಲಿ ನೌಕರರು ನ್ಯಾಯಯುತವಾಗಿ ಕೆಲಸ ಮಾಡಿಕೊಡದೆ ಲಂಚದ ಹಣಕ್ಕಾಗಿ ಪೀಡಿಸಿ ವಿಳಂಬ ಮತ್ತು ತೊಂದರೆ ಮಾಡಿದರೆ ಕೂಡಲೇ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಗೆ ದೂರು ನೀಡಬೇಕೆಂದು ಎಸಿಬಿ ಡಿವೈಎಸ್‌ಪಿ ಜಿ.ವೈ. ಗುಡಾಜಿ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆ ಬಾಗಲಕೋಟೆ ಆಶ್ರಯದಲ್ಲಿ ಭ್ರಷ್ಟಾಚಾರ ವಿರೋಧಿ ವಿಷಯಗಳ ಕುರಿತ ಜಾಗೃತಿ ಸಪ್ತಾಹ-2020 ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸರ್ಕಾರಿ ನೌಕರಸ್ಥರು ತಮ್ಮ ಆದಾಯಕ್ಕಿಂತ ಅಪಾರ ಪ್ರಮಾಣದಲ್ಲಿ ಆಸ್ತಿಯನ್ನು ಹೊಂದಿದ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವ ಜತೆಗೆ ಆಸ್ತಿ ವಶಕ್ಕೆ ಪಡೆದು ವಿಚಾರಣೆ ಮಾಡುತ್ತೇವೆ ಎಂದು ತಿಳಿಸಿದರು.

    ತಹಸೀಲ್ದಾರ್ ಬಸವರಾಜ ನಾಗರಾಳ ಮಾತನಾಡಿ, ಸರ್ಕಾರ ನೌಕರರಿಗೆ ಸಾಕಷ್ಟು ಸಂಬಳ ನೀಡುತ್ತದೆ. ಅಧಿಕಾರಿಗಳು ಏನನ್ನೂ ನಿರೀಕ್ಷೆ ಮಾಡದೆ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಬೇಕು ಎಂದರು.

    ತಾಪಂ ಇಒ ಸಿ.ಬಿ. ಮೇಗೇರಿ, ಉಪ ನೋಂದನಾಧಿಕಾರಿ ಬಿ.ಬಿ. ಮುಂಡರಗಿ, ಸಿಡಿಪಿಒ ಸಿ. ಮಾಧವಾನಂದ, ಆರೋಗ್ಯಾಧಿಕಾರಿ ಪ್ರಶಾಂತ ತುಂಬಗಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಎಸಿಬಿ ಸಿಪಿಐಗಳಾದ ಎಸ್.ಎಚ್. ಮುಲ್ಲಾ, ವಿ.ಎಸ್. ಚೌಗಲೆ, ಎಸಿಬಿ ಸಿಬ್ಬಂದಿ ಎನ್.ಎ. ಪೂಜಾರಿ, ಎಚ್.ಎಸ್. ಹೂಗಾರ, ಬಿ.ವಿ. ಪಾಟೀಲ, ಎಸ್.ಆರ್. ಚುರಚಾಲ, ಸಿ.ಎಚ್. ಹೂಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts