More

    ಅಪ್ಪುಗೋಳಗೆ ಸೇರಿದ ಆಸ್ತಿ ವಶಕ್ಕೆ ಪಡೆದ ‘ಇಡಿ’

    ಬೆಳಗಾವಿ: ಇಲ್ಲಿನ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರಿಗೆ ಸಂಬಂಧಿಸಿದ ಕೋಟ್ಯಂತರ ರೂ. ಮೌಲ್ಯದ ಸ್ಥಿರ, ಚರಾಸ್ತಿಯನ್ನು ಇಡಿ ವಶಪಡಿಸಿ ಕೊಂಡಿದೆ.

    ಹನುಮಾನ ನಗರದಲ್ಲಿರುವ ಅಪ್ಪುಗೋಳ ಒಡೆತನದ ರಾಯಣ್ಣ ಕೋಟೆ ನಿವಾಸ- 65 ಲಕ್ಷ ರೂ., ಬಿ.ಕೆ.ಕಂಗ್ರಾಳಿ ಗ್ರಾಮದಲ್ಲಿರುವ ನಿವಾಸ-1.75 ಲಕ್ಷ ರೂ., ಕೆ.ಎಚ್.ಕಂಗ್ರಾಳಿ ಗ್ರಾಮದಲ್ಲಿರುವ ನಿವಾಸ -1.48 ಲಕ್ಷ ರೂ., ಅನಗೋಳದಲ್ಲಿರುವ ನಿವಾಸ- 61.51 ಲಕ್ಷ ರೂ., ಹಿಂಡಲಗಾದಲ್ಲಿನ ನಿವಾಸ- 6.15 ಲಕ್ಷ ರೂ., ಕುವೆಂಪು ನಗರದಲ್ಲಿರುವ ನಿವಾಸ 1.69 ಲಕ್ಷ ರೂ. ಹಾಗೂ ಬೆಳಗಾವಿ, ಕಿತ್ತೂರು, ಬೈಲಹೊಂಗಲ, ಹುಕ್ಕೇರಿ ಸೇರಿ ತಾಲೂಕಿನ ವಿವಿಧ ಭಾದಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಕೃಷಿ ಜಮೀನಗಳನ್ನು ವಶಪಡಿಸಿಕೊಂಡಿದೆ. ಸಂಗೊಳ್ಳಿ ರಾಯಣ್ಣ ಕೋ-ಆಪ್ ಸೊಸೈಟಿಯಲ್ಲಿ ಗ್ರಾಹಕರ ಕೋಟ್ಯಂತರ ರೂ. ಠೇವಣಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಆನಂದ ಅಪ್ಪುಗೋಳ ವಿರುದ್ಧ ದೂರು ದಾಖಲಾಗಿತ್ತು. ಗಂಭೀರ ಪ್ರಕರಣವಾದ್ದರಿಂದ ಸೊಸೈಟಿ ಮತ್ತು ಅದರ ಅಧ್ಯಕ್ಷ ಅಪ್ಪುಗೋಳಗೆ ಸಂಬಂಧಿತ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಈ ಹಿಂದೆಯೇ ಸೂಚನೆ ನೀಡಿತ್ತು. ಅಲ್ಲದೆ, ಈ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆನಂದ ಅಪ್ಪುಗೋಳ ಮನೆಗೆ ಸಾವಿರಾರು ಸಂಖ್ಯೆಯಲ್ಲಿ ಠೇವಣಿದಾರರು ತೆರಳಿ ಪ್ರತಿಭಟಿಸಿದ್ದರು.

    ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿರುವ ಜಾರಿ ನಿರ್ದೇಶನಾಲಯ, ಅಪ್ಪುಗೋಳಗೆ ಸಂಬಂಧಿಸಿದ ಆಸ್ತಿ ಜಪ್ತಿ ಮಾಡಿಕೊಂಡಿದೆ. ಕಳೆದ ತಿಂಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರು ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ಜೈಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts