More

    ತಾರಿಹಾಳ ಅಗ್ನಿ ದುರಂತ ಪ್ರಕರಣ; ಆರ್​ಎಫ್ಎಸ್​ಎಲ್​ಗೆ ಕೆಮಿಕಲ್​ ರವಾನೆ

    ಹುಬ್ಬಳ್ಳಿ: ತಾರಿಹಾಳ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯಲ್ಲಿ ಬಳಕೆಯಾಗಿದ್ದ ರಾಸಾಯನಿಕ ಯಾವುದು ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ರಾಸಾಯನಿಕ ಮಾದರಿಯನ್ನು ಹುಬ್ಬಳ್ಳಿಯ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಆರ್​ಎಫ್ ಎಸ್​ಎಲ್​)ಗೆ ರವಾನಿಸಲಿದ್ದಾರೆ.
    ರ್ಬತ್​ ಡೇ ಪಾಟಿರ್ಗೆ ಬಳಸುವ ಸ್ಪಾರ್ಕಲ್​ ಕ್ಯಾಂಡಲ್​ ತಯಾರಿಸುತ್ತಿದ್ದ ಐ.ಸಿ. ಫ್ಲೇಮ್​ಫ್ಯಾಕ್ಟರಿಯಲ್ಲಿ ಶನಿವಾರ ಸ್ಫೋಟ ಸಂಭವಿಸಿದಾಗ ಅದರ ತೀವ್ರತೆ ಹೆಚ್ಚಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುವಾಗಲೂ ಸ್ಪೋಟಗೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಯಾವ ಯಾವ ಕೆಮಿಕಲ್​ ಇಡಲಾಗಿತ್ತು ? ನಿಷೇಧಿತ ಕೆಮಿಕಲ್​ ಬಳಸಲಾಗಿತ್ತೇ ? ಎಂಬ ಕುರಿತು ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್​ ಮಾದರಿಗಳನ್ನು ಸಂಗ್ರಹಿಸಿ ಆರ್ ಎಫ್ಎಸ್​ಎಲ್​ನ ರಾಸಾಯನಿಕ ವಿಶ್ಲೇಷಣೆ ವಿಭಾಗಕ್ಕೆ ಪರೀಕ್ಷೆಗಾಗಿ ರವಾನಿಸುವ ಕಾರ್ಯ ನಡೆದಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ‘ವಿಜಯವಾಣಿ’ ತಿಳಿಸಿದ್ದಾರೆ.

    ಮ್ಯಾನೇಜರ್​ ಬಂಧನ
    ಅಗ್ನಿ ಅವಡ ಪ್ರಕರಣಕ್ಕೆ ಸಂಬಂಧಿಸಿದಂತೆ ಐ.ಸಿ.ಫ್ಲೇಮ್​ ಫ್ಯಾಕ್ಟರಿ ಮ್ಯಾನೇಜರ್​ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ. ಫ್ಯಾಕ್ಟರಿ ಮಾಲೀಕ ಗದಗ ಮೂಲದ, ಸದ್ಯ ಮುಂಬೈನಲ್ಲಿ ವಾಸವಾಗಿರುವ ಅಬ್ದುಲ್​ ಖಾದಿರ್​ ಶೇಖ್​ ತಲೆಮರೆಸಿಕೊಂಡಿದ್ದಾನೆ. ಕಟ್ಟಡ ಮಾಲೀಕ ಸೇರಿದಂತೆ ಹಲವರ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಐವರು ಗಾಯಾಳುಗಳಿಗೆ ಕಿಮ್ಸ್​ನಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts