More

    ಕರೊನಾ ಸೋಂಕಿತ ಬಾಗಲಕೋಟೆ ಗರ್ಭಿಣಿಯ ಗರ್ಭಪಾತಕ್ಕೆ ವೈದ್ಯರು ಮುಂದಾಗಿದ್ದೇಕೆ?

    ಹುಬ್ಬಳ್ಳಿ: ಚೊಚ್ಚಲ ಹೆರಿಗೆಯ ನಿರೀಕ್ಷೆಯಲ್ಲಿದ್ದ ಗರ್ಭಿಣಿಯ ಆಸೆಗೆ ಮಹಾಮಾರಿ ಕರೊನಾ ವೈರಸ್​ ತಣ್ಣೀರೆರಚಿದೆ. ಸೊಂಕಿತ ಮಹಿಳೆಯ ಗರ್ಭಪಾತಕ್ಕೆ ವೈದ್ಯರು ಮುಂದಾಗಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬಾದಾಮಿಯ 5 ತಿಂಗಳ ಗರ್ಭಿಣಿಗೆ ಕಳೆದ ತಿಂಗಳ ಮೇ 3ರಂದು ಸೊಂಕು ದೃಢಪಟ್ಟಿತ್ತು. ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗರ್ಭಿಣಿಗೆ ಗರ್ಭಪಾತ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

    ಇದನ್ನೂ ಓದಿ: ಹೊರಗಡೆ ತಿರುಗಾಡಿ ಬರುತ್ತೇವೆಂದು ಹೇಳಿ ಹೊರಟ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆ

    ಗರ್ಭಿಣಿಯ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗಿ ಸುಸ್ತು ಹೆಚ್ಚಾಗುತ್ತಿದ್ದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶವೂ ಕಡಿಮೆಯಾಗುತ್ತಿದೆ. ಅಲ್ಲದೇ ಮೂತ್ರದ ತೊಂದರೆ ಹಾಗೂ ಅಲ್ಸರ್ ಸಮಸ್ಯೆಯಿಂದ ಗರ್ಭಿಣಿ ಆರೋಗ್ಯದಲ್ಲಿ ಏರಿಳಿತವಾಗುತ್ತಿದ್ದು, ಜೀವ ಉಳಿಸಿಕೊಳ್ಳಲು ವೈದ್ಯರು ಗರ್ಭಪಾತಕ್ಕೆ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

    ಗರ್ಭಿಣಿಯ ಕುಟುಂಬದವರೆಲ್ಲ ಹೋಮ್​ ಕ್ವಾರಟೈನ್​ನಲ್ಲಿರುವುದರಿಂದ ಕಿಮ್ಸ್ ವೈದ್ಯರು ಫೋನ್ ಮೂಲಕವೇ ಸಂಬಂಧಿಕರ ಅಭಿಪ್ರಾಯ ಪಡೆಯುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಗರ್ಭಿಣಿಗೆ ಚಿಕಿತ್ಸೆ ಮುಂದುವರೆದಿದೆ. ಅಲ್ಲದೇ ಗರ್ಭಿಣಿಯನ್ನು ನೋಡಿಕೊಳ್ಳಲು ಯಾರು ಇಲ್ಲದ ಪರಿಣಾಮ ಕಿಮ್ಸ್ ಸಿಬ್ಬಂದಿಯೇ ಅವರ ಮನೆಯಿಂದಲೇ ಗಂಜಿ, ಜ್ಯೂಸ್ ತಂದುಕೊಟ್ಟು ಆರೈಕೆ ಮಾಡುತ್ತಿರುವುದು ವಿಶೇಷವಾಗಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: VIDEO| ಭಾರತದಲ್ಲಿ ಪತ್ತೆಯಾಯ್ತು ಎರಡು ತಲೆ: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತಿರಾ…!

    ಬೆಳ್ಳಂಬೆಳಗ್ಗೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ವಲಸೆ ಕಾರ್ಮಿಕರು ತಲೆ ಬಿಸಿ ತಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts