More

    ರತಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ, ಹಲಗಿ ಹೊಡೆದು ಸಂಭ್ರಮಿಸಿದ ಮಕ್ಕಳು

    ಹುಬ್ಬಳ್ಳಿ: ರಂಗ ಪಂಚಮಿಗೆ ಹೆಸರುವಾಸಿಯಾಗಿರುವ ಹುಬ್ಬಳ್ಳಿಯಲ್ಲಿ ರತಿ& ಕಾಮಣ್ಣ ಮೂತಿರ್ ಪ್ರತಿಷ್ಠಾಪನೆಯೊಂದಿಗೆ ಸೋಮವಾರ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಯಿತು.

    ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗುವ ರತಿ- ಕಾಮಣ್ಣ ಮೂರ್ತಿ ವಿಶೇಷ ಆಕರ್ಷಣೆ ಹೊಂದಿರುತ್ತವೆ. ಅದರಲ್ಲೂ ಮೂತಿರ್ಗಳಿಗೆ ತೊಡಿಸುವ ವೈವಿಧ್ಯಮ ಆಭರಣಗಳು ನೋಡುವುದೇ ಕಣ್ಣಿಗೆ ಹಬ್ಬದಂತಿದೆ.

    ನಗರದ ಕಮರಿಪೇಟೆ, ಅಂಚಟಗೇರಿ ಓಣಿ, ಮ್ಯಾದಾರ ಓಣಿ, ಹಳೇಹುಬ್ಬಳ್ಳಿ, ಡಾಕಪ್ಪ ಸರ್ಕಲ್, ನೇಕಾರನಗರ ಹೀಗೆ ಅನೇಕ ಕಡೆಗಳಲ್ಲಿ ಸೋಮವಾರ ಬೆಳಗ್ಗೆ ರತಿ& ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

    ಮಹಿಳೆಯರು ರತಿ& ಕಾಮಣ್ಣರ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು. ಆಭರಣಗಳನ್ನು ತೊಡಿಸಿ ಸಂಭ್ರಮಿಸಿದರು. ಹೋಳಿಗೆ, ಭಜಿ, ಸಂಡಿಗೆ, ವಿವಿಧ ತರಹದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿದರು.

    ಮಕ್ಕಳು ಹಲಗಿ ಹೊಡೆಯುವ ಮೂಲಕ ಹೋಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಪರೀಕ್ಷೆ ಮುಗಿಸಿ ರಜೆ ಮಜೆಯಲ್ಲಿರುವ ಅನೇಕ ಮಕ್ಕಳು ಹೋಳಿ ಆಚರಣೆಯ ಸಡಗರದಲ್ಲಿದ್ದಾರೆ.

    ಐದು ದಿನಗಳವರೆಗೆ ಹೋಳಿ ಆಚರಣೆ ನಡೆಯಲಿದ್ದು, ಮಾ. 29ರಂದು ರಂಗಪಂಚಮಿ ಆಚರಣೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts