More

    ರಾತ್ರಿ ಹತ್ತು ಗಂಟೆಗೆ ಡಿಜೆ ಬಂದ್​

    ಹುಬ್ಬಳ್ಳಿ: ಭರ್ಜರಿ ಡಿಜೆ ಸೌಂಡ್​ನೊಂದಿಗೆ ಶುಕ್ರವಾರ ಸಂಜೆಯಿಂದಲೇ ಗಣೇಶ ವಿಸರ್ಜನೆ ಜೋಶ್​ನಲ್ಲಿದ್ದ ಗಣೇಶೋತ್ಸವ ಮಂಡಳಿಯವರಿಗೆ, ಸಾರ್ವಜನಿಕರಿಗೆ ಹುಬ್ಬಳ್ಳಿ ಪೊಲೀಸರು ಶಾಕ್​ ನೀಡಿದರು. ಸುಪ್ರೀಂಕೋರ್ಟ್​ ಆದೇಶದನ್ವಯ ರಾತ್ರಿ ಹತ್ತು ಗಂಟೆಯಾಗುತ್ತಿದ್ದಂತೆ ಎಲ್ಲ ಡಿಜೆ ಬಂದ್​ ಮಾಡಿಸಿದರು.
    ಹನ್ನೊಂದನೇ ದಿನದ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಮರಾಠ ಗಲ್ಲಿಯ ಹುಬ್ಬಳ್ಳಿ ಕಾ ಮಹಾರಾಜ, ದಾಜಿಬಾನಪೇಟೆಯ ಹುಬ್ಬಳ್ಳಿ ಕಾ ರಾಜಾ ಗಣೇಶ ಸೇರಿದಂತೆ ನೂರಾರು ಸಾರ್ವಜನಿಕ ಗಣಪತಿ ಮಂಡಳಿಯವರು ವಿಸರ್ಜನೆಗೆ ಬೆಳಗ್ಗೆಯಿಂದಲೇ ಸಿದ್ಧತೆ ಮಾಡಿಕೊಂಡಿದ್ದರು. ಲಾಂತರ ರೂ. ಖರ್ಚು ಮಾಡಿ ಬೃಹತ್​ ಡಿಜೆ ಹಚ್ಚಿಕೊಂಡು ಸಂಜೆಯಿಂದಲೇ ಮೆರವಣಿಗೆ ಆರಂಭಿಸಿದ್ದರು. ಡಿಜೆ ಸದ್ದು ನಗರದಾದ್ಯಂತ ಕೇಳಿಸುತ್ತಿತ್ತು. ಪೊಲೀಸರು ಮೊದಲೇ ಸೂಚನೆ ನೀಡಿದ್ದಂತೆ ರಾತ್ರಿ 10 ಗಂಟೆಗೆ ಸರಿಯಾಗಿ ಎಲ್ಲೆಡೆ ಡಿಜೆ ಬಂದ್​ ಮಾಡಿಸಿದರು.
    ಪೊಲೀಸರ ನಡೆ ವಿರುದ್ಧ ಕೆಲ ಯುವಕರು ಬೇಸರ ವ್ಯಕ್ತಪಡಿಸಿದರು. ಕೆಲವೆಡೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಬಳಿಕ ಡಿಜೆ ಇಲ್ಲದ್ದರಿಂದ ಮೆರವಣಿಗೆ ವೇಗವಾಗಿ ಸಾಗಿತು. ಪ್ರತಿ ವರ್ಷ ರಾತ್ರಿ 10, 11 ಗಂಟೆ ನಂತರ ಮೆರವಣಿಗೆ ಆರಂಭವಾಗಿ ಮರುದಿನ ಬೆಳಗ್ಗೆ 10, 11ರವರೆಗೆ ವಿಸರ್ಜನೆ ಮುಗಿಯುತ್ತಿತ್ತು. ಈ ಬಾರಿ ಪೊಲೀಸ್​ ಆಯುಕ್ತ ಲಾಭೂರಾಮ ಡಿಜೆ ವಿಚಾರವಾಗಿ ಖಡಕ್​ ನಿರ್ಣಯ ಕೈಗೊಂಡಿದ್ದರಿಂದ ಮದ್ಯರಾತ್ರಿ ಅವಧಿಯೊಳಗೇ ಬಹುತೇಕ ಎಲ್ಲ ಗಣಪತಿ ವಿಸರ್ಜನೆ ಮುಕ್ತಾಯಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts