More

    ಜನರ ಸಮಸ್ಯೆ ಬೇಗ ಪರಿಹರಿಸಿ

    ಹುಬ್ಬಳ್ಳಿ: ಹಳ್ಳಿಗಳಲ್ಲಿ ವೃದ್ಧಾಪ್ಯ ವೇತನ, ಗೃಹಲಕ್ಷ್ಮೀ ಯೋಜನೆ ಅನುಷ್ಠಾನ, ಪಡಿತರ ವಿತರಣೆಯಲ್ಲಿನ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬೇಗ ಪರಿಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
    ತಾಲೂಕಿನ ಶೆರೆೇವಾಡ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ನಾಗರಿಕರ ಕುಂದು-ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
    ಬಳಿಕ ಅಮೃತ ಸರೋವರ ಘನ ತ್ಯಾಜ್ಯ ಮತ್ತು ವಿಲೇವಾರಿ ಘಟಕ ಗ್ರಂಥಾಲಯ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚು ಅಭಿವೃದ್ಧಿ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿದರು.
    ಗ್ರಾಪಂ ಸದಸ್ಯ ಶಿವಾನಂದ ಉಳ್ಳೆಗಡ್ಡಿ ಮಾತನಾಡಿ, ಗ್ರಾಮದಲ್ಲಿ 8 ಎಕರೆ 11 ಗುಂಟೆ ಸರ್ಕಾರದ ಜಮೀನಿನಲ್ಲಿ ಆಶ್ರಯ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಮಾಡಿದರು.
    ಗ್ರಾಪಂ ಉಪಾಧ್ಯಕ್ಷ ಸಿದ್ದಪ್ಪ ಹನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಬೆಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು.
    ನವರಾತ್ರಿ ಪ್ರಯುಕ್ತ ಗ್ರಾಪಂ ಸದಸ್ಯೆಯರು ಜಿಪಂ ಸಿಇಒ ಸ್ವರೂಪಾ ಟಿ.ಕೆ. ಅವರಿಗೆ ಉಡಿ ತುಂಬಿದರು. ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗೂನೂರಮಠ, ಗ್ರಾಪಂ ಸದಸ್ಯ ವಿರೂಪಾಕ್ಷ ಯಡವನ್ನವರ, ಈರಪ್ಪ ಮಟ್ಟಿ, ಶಂಭುಲಿಂಗ ಗುಡಿಮನಿ, ಇಮಾಮಸಾಬ್ ಛಬ್ಬಿ, ಮಹಾದೇವಿ ಅಮಟೂರ, ಪ್ರೇಮಾ ಪಾಟೀಲ, ಶಾರದಾ ದಾನಪ್ಪಗೌಡ್ರ, ಫಕೀರವ್ವ ಭಜಂತ್ರಿ, ಪ್ರಸಿದ್ದವ್ವ ಗುಂಜಳ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಪಿಡಿಒ ನಾಗೇಶ ಕುಂಬಾರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts