More

    ಔಷಧ ವಿಜ್ಞಾನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

    ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಮದ ಶ್ರೀ ನವಗ್ರಹತೀರ್ಥ ಕ್ಷೇತ್ರದ ಎಜಿಎಂ ಔಷಧ ವಿಜ್ಞಾನ ಮಹಾವಿದ್ಯಾಲಯ ಫಾರ್ಮಸಿ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
    ಜೈನ ಮುನಿಗಳಾದ ರಾಷ್ಟ್ರ ಸಂತ ಆಚಾರ್ಯ ಶ್ರೀ 108 ಗುಣಧರ ನಂದಿ ಮಹಾರಾಜರು ಮತ್ತು ಸಂಸ್ಥೆಯ ಮುಖ್ಯಸ್ಥರಾದ ಸ್ವಸ್ತಿ ಶ್ರೀ 105 ಧರ್ಮಸೇನಾ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಧಾರವಾಡ-ವೃತ್ತ ಹುಬ್ಬಳ್ಳಿ ನೀಲಕಂಠ ರಾಠೋಡ ಮಾತನಾಡಿ, ಔಷಧ ವಿಜ್ಞಾನ, ಪದವಿ ನಂತರ ಮುಂದಿನ ಅಧ್ಯಯನ, ಸ್ವಉದ್ಯೋಗ, ಖಾಸಗಿ /ಸರ್ಕಾರಿ ಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಡಾ. ಎಸ್.ಎ. ಶ್ರೀನಿವಾಸ, ವಿದ್ಯಾರ್ಥಿಗಳ ಮುಂದಿನ ಉಜ್ಜಲ ಭವಿಷ್ಯದ ಕುರಿತು ಮಾರ್ಗದರ್ಶನ ನೀಡಿದರು. ಅತಿ ಹೆಚ್ಚು ಅಂಕ ಪಡೆದ ಕಾಲೇಜ್ ವಿದ್ಯಾರ್ಥಿಗಳಾದ ದೀಪಾಲಿ ಪವಾರ (ಪ್ರಥಮ) ಹಾಗೂ ದ್ವಿತೀಯ ಸ್ಥಾನ ಪಡೆದ ಜ್ಯೋತಿ ಶಿರೋಳ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಪದವಿಯ ನಾಲ್ಕು ವರ್ಷದ ಕಾಲೇಜ್ ದಿನಗಳಲ್ಲಿನ ವಿದ್ಯಾಭ್ಯಾಸ, ಆಟೋಟಗಳ ಅನುಭವ ಮೆಲುಕು ಹಾಕಿದರು. ಕಿರಿಯರಿಗೆ ಅನುಭವಾಮೃತದೊಂದಿಗೆ ಸ್ಫೂರ್ತಿದಾಯಕ ಮಾತುಗಳಿಂದ ಪ್ರೋತ್ಸಾಹಿಸಿದರು.
    ಎಜಿಎಂ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ಸಂದೀಪ ಕ್ಯಾಥನವರ, ಎಜಿಎಂ ಆಯುರ್ವೇದಿಕ್ ಕಾಲೇಜ್ ಪ್ರಾಂಶುಪಾಲ ಆಕಾಶ ಕೆಂಬಾವಿ, ಎಜಿಎಂ ಹೋಮಿಯೋಪಥಿಕ್ ಕಾಲೇಜ್ ಪ್ರಾಂಶುಪಾಲ ಆನಂದ ಕುಲಕರ್ಣಿ ಅವರು ಪದವೀಧರ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪ್ರಾಧ್ಯಾಪಕರಾದ ನಂದೀಶ, ಅಕ್ಬರ್ ಬಾಬಕ್ಕನವರ, ವೀರೇಶ ಗಜ್ಜಿಗಟ್ಟಿ, ಯಶೋದಾ ರೆಕರೆಡ್ಡಿ, ಅಕ್ಷತಾ ಪಾಟೀಲ, ವೈಭವಿ ಇಂಗಳಹಳ್ಳಿ, ಮುತ್ತವ್ವ ಹಿಪ್ಪರಗಿ, ಶರಣಬಸು ಗೋಡ್ಕೇರ, ಪೂಜಾ ಉಪಾಧ್ಯಾಯ, ಐಶ್ವರ್ಯ ಪಾಟೀಲ, ರಜತ್ ತಂಬದಡಿ, ಸಿಬ್ಬಂದಿ ನವೀನ ನಲವಡಿ, ಅನುಷಾ. ಅಜಯ ಕಮ್ಮಾರ, ಪದವಿ ವಿದ್ಯಾರ್ಥಿಗಳ ಪಾಲಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts