More

    ರಿಷಿ ಕಪೂರ್​ ನೆನೆದು ಭಾವುಕ ಪತ್ರ ಬರೆದ ಹೃತಿಕ್​ ರೋಷನ್​

    ಮುಂಬೈ: ರಿಷಿ ಕಪೂರ್​ ನಿಧನದ ಬೆನ್ನಲ್ಲೇ ಬಾಲಿವುಡ್​ ನಟ ಹೃತಿಕ್​ ರೋಷನ್​ ನೆಚ್ಚಿನ ಅಂಕಲ್ ನೆನೆದು ಭಾವುಕ ಪತ್ರ ಬರೆದಿದ್ದಾರೆ. ಅವರೊಂದಿಗೆ ಕಳೆದ ಕ್ಷಣಗಳನ್ನು ಅಕ್ಷರರೂಪಕ್ಕಿಳಿಸಿ ಹಳೇ ದಿನಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಏನೆಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂಬುದರ ವಿವರ ಇಲ್ಲಿದೆ.
    ‘ನನ್ನನ್ನು ನಿಮ್ಮ ಪಕ್ಕ ಕೂರಿಸಿಕೊಂಡು ನನ್ನ ಬಗ್ಗೆ ಮಾತನಾಡುತ್ತಿರಿ ಎಂದು ನಾನು ಯಾವತ್ತೂ ಊಹಿಸಿರಲಿಲ್ಲ. ಪ್ರತಿ ಸಲ ಅಪ್ಪ ಹೀಗೆ ಹೇಳುವವರು, ‘ಚಿಂಟು ಅಂಕಲ್​ ಇದೀಗ ತಾನೇ ನಿನ್ನ ಸಿನಿಮಾ ನೋಡಿದ್ದಾರೆ. ಅವರೇ ನಿನಗೆ ಕಾಲ್​ ಮಾಡುತ್ತಿದ್ದಾರೆ ’ ಎನ್ನುತ್ತಿದ್ದರು. ಎದೆಬಡಿತ ಜೋರಾಗುತ್ತಿತ್ತು. ಕೋಣೆಯಲ್ಲಿಯೇ ಏನು ಮಾತನಾಡುವುದೆಂದು ತೋಚದೆ ಓಡಾಡುತ್ತಿದ್ದೆ. ಮಾತನಾಡುತ್ತಿದ್ದಾಗ, ನನ್ನ ಪ್ರತಿ ತಪ್ಪುಗಳನ್ನು ತಿದ್ದುತ್ತಿದ್ದರು. ಅದಕ್ಕೆ ಸರಿಯಾದುದ್ದನ್ನೇ ಹೇಳುತ್ತಿದ್ದರು’.

    ‘ನಾನು ಸೋತೆ ಎಂದು ತಲೆತಗ್ಗಿಸಿ ಕುಳಿತಿದ್ದಾಗ, ನನಗೆ ಶಕ್ತಿ ತುಂಬುತ್ತಿದ್ದದ್ದು ನೀವೆ. ಮತ್ತೊಂದೆಡೆ ನನ್ನ ಕೆಲಸ ನೋಡಿ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾಗ, ‘ಓಹ್​ ರಿಷಿ ಕಪೂರ್​ ನನ್ನ ನಟನೆ ಮೆಚ್ಚಿದ್ರಾ?’ ಎಂದೂ ನನಗೆ ನಾನೇ ಅಂದುಕೊಳ್ಳುತ್ತಿದ್ದೆ. ಆಗ ನನ್ನ ಮೇಲೆ ನನಗೆ ಆತ್ಮ,ಸ್ಥೈರ್ಯ, ವಿಶ್ವಾಸ ಹೆಚ್ಚಾಗತೊಡಗಿತು. ಧನ್ಯವಾದಗಳು, ಪ್ರತಿ ಸಲ ಕರೆ ಮಾಡಿ ನನ್ನ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುತ್ತಿದ್ದಿದ್ದಕ್ಕೆ. ನನ್ನ ತಪ್ಪುಗಳನ್ನು ಪದೇಪದೆ ಎತ್ತಿ ತೋರಿಸಿದ್ದಕ್ಕೂ ನಾನು ಋಣಿ.’
    ‘ನಿಮ್ಮಂತ ನಟ, ಮತ್ತು ವ್ಯಕ್ತಿ ಬೇರಾರು ಇಲ್ಲ. ನನ್ನ ಬಾಲ್ಯವನ್ನು ನಿಮ್ಮ ಸಿನಿಮಾಗಳೊಟ್ಟಿಗೆ ಕಳೆದಿದ್ದೇನೆ. ಕಠಿಣ ಪರಿಶ್ರಮದ ಬಗ್ಗೆ ನೀವು ಹೇಳುತ್ತಿದ್ದ ಮಾತು ಈಗಲೂ ನನ್ನ ಕಿವಿಯಲ್ಲಿ ಡ್ರಮ್​ ಬಡಿದಂತಿದೆ. ನನ್ನಂತೆಯೇ ಹಲವರಿಗೆ ಸ್ಫೂರ್ತಿಯಾಗಿದ್ದೀರಿ. ನಿಮ್ಮನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಚಿಂಟು ಅಂಕಲ್​’ ಎಂದು ಬಾಲ್ಯ ಮತ್ತು ಹೀರೋ ಆದ ಬಳಿಕ ದಿನಗಳನ್ನು ಹೃತಿಕ್​ ನೆನಪು ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ಚಿತ್ರದಲ್ಲಿ … ಪುನೀತ್-ದರ್ಶನ್ ಜತೆಯಾಗಿ ಕೆಲಸ ಮಾಡಿದ ಚಿತ್ರ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts