More

    ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ

    ನವದೆಹಲಿ: ಪ್ರಸ್ತುತ ಜಗತ್ತಿನ ಪ್ರತಿಯೊಬ್ಬರ ಪ್ರಶ್ನೆ ಇದು? ಹಾಗೂ ತಿಳಿಯಬೇಕೆಂದಿರುವ ಕುತೂಹಲವೂ ಹೌದು. ಕರೊನಾ ಸಂಕಷ್ಟ ಯಾವಾಗ ಮುಗಿಯುತ್ತೆ? ಏಕೆಂದರೆ, ಇದರಿಂದ ಕಂಗೆಡದವರೇ ಇಲ್ಲ.

    ಸದ್ಯ ಕರೊನಾ ಕೊನೆಯಾಗಬೇಕೆಂದರೆ ಇರುವ ಒಂದು ಮಾರ್ಗವೆಂದರೆ ಲಸಿಕೆ ಕಂಡು ಹಿಡಿಯುವುದು. ವಿಶ್ವದ 140ಕ್ಕೂ ಅಧಿಕ ಕಂಪನಿಗಳು ಈ ಕಾರ್ಯದಲ್ಲಿ ತೊಡಗಿಕೊಂಡಿವೆ. ಹಲವು ಕಂಪನಿಗಳು ತಾನು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸುತ್ತಿವೆ. ಈ ವರ್ಷಾಂತ್ಯಕ್ಕೆ ಲಸಿಕೆ ಸಜ್ಜಾದರೆ, ಅದನ್ನು ಎಲ್ಲರಿಗೂ ತಲುಪಿಸಿದ್ದೇ ಅದರೆ, ಕರೊನಾಗೆ ಕಡಿವಾಣ ಬೀಳಲಿದೆ.

    ಇದನ್ನೂ ಓದಿ; ಮಾಂಸ ತಿನ್ನಬೇಡಿ; ಬಂದಿದೆ ಮತ್ತೊಂದು ಮಹಾಮಾರಿ; ಚಿಕಿತ್ಸೆ ಲಭಿಸದಿದ್ದಲ್ಲಿ 24 ತಾಸಿನಲ್ಲಿ ಸಾವು; ಚೀನಾ ಎಚ್ಚರಿಕೆ

    ಒಂದು ವೇಳೆ ಲಸಿಕೆ ಯಶಸ್ವಿಯಾಗದಿದ್ದರೆ, ವರ್ಷಗಳವರೆಗೆ ಲಸಿಕೆ ಸಿಗದೇ ಇದ್ದರೆ ಏನು ಮಾಡುವುದು? ನಾಲ್ಕು ದಶಕಗಳೇ ಕಳೆದರೂ ಎಚ್​ಐವಿ- ಏಯ್ಡ್ಸ್​ಗೆ ಇನ್ನೂ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇನ್ನು ಲಸಿಕೆ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಗಳಿಸದಿದ್ದರೆ..? ಏಕೆಂದರೆ ಅಮೆರಿಕದ ತಜ್ಞರು ಲಸಿಕೆ ಯಶಸ್ಸಿನ ಪ್ರಮಾಣ ಶೇ.75 ಮಾತ್ರ ಎಂದು ಅಂದಾಜಿಸಿದ್ದಾರೆ.

    ಇನ್ನೊಂದು ಸಾಧ್ಯತೆ ಎಂದರೆ, ಕರೊನಾ ವೈರಸ್​ ಆರು ತಿಂಗಳ ಅವಧಿಯಲ್ಲಿ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಒಮ್ಮೆ ಲಸಿಕೆ ಸಜ್ಜಾದರೂ, ವರ್ಷದ ಹೊತ್ತಿಗೆ ಅದೇ ವೈರಸ್​ ಮೇಲೆ ಔಷಧ ನಿಷ್ಪ್ರಯೋಜಕ ಎನಿಸಬಹುದು. ಆಗ ಪ್ರತಿ ವರ್ಷವೂ ಲಸಿಕೆ ತೆಗೆದುಕೊಳ್ಳಬೇಕಾಗಬಹುದು. ಏಕೆಂದರೆ, ವಿಷಮ ಶೀತಜ್ವರ ತಡೆಯಲು ಅಮೆರಿಕದಲ್ಲಿ ಪ್ರತಿವರ್ಷ ಲಸಿಕೆ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ಋತುಮಾನದ ಕಾಯಿಲೆಯಾಗಿದೆ. ಅಂತೆಯೇ ಕರೊನಾ ಕೂಡ ಋತುಮಾನ ಕಾಯಿಲೆ ಆಗಬಹುದು.

    ಇದನ್ನೂ ಓದಿ; ಆರಂಭವಾಗಿದೆ ಲಸಿಕೆ ಸಂಶೋಧನಾ ಕಾರ್ಯದ ಅಂತ್ಯ; ಭಾರತದಲ್ಲಿ ನಾಲ್ಕರ ಉತ್ಪಾದನೆ ಖಚಿತ…!

    ಲಸಿಕೆ ಯಶಸ್ಸು ಗಳಿಸದಿದ್ದರೆ ನಮಗಿರುವ ದಾರಿ ಎಂದರೆ ವೈಕ್ತಿಗತ ಅಂತರ ಕಾಯ್ದುಕೊಳ್ಳುವುದು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳುವುದು. ಆ ಮೂಲಕ ಅತಿ ಕಡಿಮೆ ಜನರಿಗೆ ಹಬ್ಬುವಂತೆ ನೋಡಿಕೊಳ್ಳುವುದು ಇನ್ನೊಂದು ಮಾರ್ಗವಾಗಿದೆ. ಆದರೆ, ಒಮ್ಮೆಲೇ ಇದು ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುವ ಅಪಾಯವಂತೂ ಇದ್ದೇ ಇದೆ.

    ಇನ್ನೊಂದು ಮಾರ್ಗದಲ್ಲಿ ಕರೊನಾ ದೂರಾಗುವ ಬಗೆ ಎಂದರೆ, ಸಾಮಾಜಿಕವಾಗಿ ಅಂತ್ಯಗೊಳ್ಳುವುದು. ಕರೊನಾ ಇದ್ದರೂ ನಮ್ಮ ಕೆಲಸಗಳಲ್ಲಿ ಎಂದಿನಂತೆ ತೊಡಗಿಕೊಳ್ಳುವುದು. 1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್​ ಫ್ಲೂ ಕೊನೆಗೊಂಡಿದ್ದು ಹೀಗೆಯೇ ಎಂದು ತಜ್ಞರು ಹೇಳುತ್ತಾರೆ. ಈ ಸಾಂಕ್ರಾಮಿಕಕ್ಕೆ 50 ಲಕ್ಷ ಜನರು ಬಲಿಯಾಗಿದ್ದರು. ಕೊನೆಗೆ ಇದರ ಅಂತ್ಯಕ್ಕೆ ವೈದ್ಯಕೀಯ ನೆರವು ದೊರೆಯಿತು.

    ಇಂದಿನ ಪರಿಸ್ಥಿತಿಯಲ್ಲಿ ವೈದ್ಯಕೀಯ ಕಾರಣಕ್ಕಿಂತ ಸಾಮಾಜಿಕ ಕಾರಣದಿಂದಾಗಿಯೇ ಕರೊನಾ ಕೊನೆಯಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ, ಕರೊನಾ ಇದ್ದರೂ ಜಗತ್ತಿನೆಲ್ಲೆಡೆ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳು ಎಂದಿನಂತೆ ಮುಂದುವರಿದಿವೆ. ಏನೇ ಇರಲಿ ಕರೊನಾ ಅಂತ್ಯ ಸನ್ನಿಹಿತವಾಗಿರುವುದಂತೂ ಸತ್ಯ ಎನ್ನುತ್ತಾರೆ ತಜ್ಞರು.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts