More

    ಬೀಜದ ತೊಗಟೆ ಸೃಷ್ಟಿಯಾದದ್ದು ಹೇಗೆ? ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು

    ಮುಂದುವರಿದ ಭಾಗ…

    ಬೀಜದ ತೊಗಟೆ ಸೃಷ್ಟಿಯಾದದ್ದು ಹೇಗೆ? ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವುಸಸ್ಯಗಳಲ್ಲಿ ಅಂದಾಜು 50 ಕೋಟಿ ವರ್ಷಗಳ ವಿಕಾಸದಲ್ಲಿ ಇಂದಿನ ರೂಪಕ್ಕೆ ತಲುಪುವ ಪ್ರಕ್ರಿಯೆಯನ್ನು ಮುಖ್ಯವಾಗಿ ಐದು ಹಂತಗಳಾಗಿ ವಿಂಗಡಿಸಬಹುದು.
    1. ಶೈವಲಗಳು ನೀರಿನಿಂದ ನೆಲದ ಮೇಲೆ ಉಳಿದು ಹರಡಿದ್ದು ಒಂದು ವೃತ್ತಾಂತ.
    2. ಐದು ಕೋಟಿ ವರ್ಷಗಳ ನಂತರದ ವಿಕಾಸದಲ್ಲಿ ಅವುಗಳು ತಮ್ಮ ದೇಹದಲ್ಲಿ ಬೀಜಕಗಳನ್ನು ವೃದ್ಧಿಮಾಡಿಕೊಂಡಿದ್ದು.
    3. ನಾಳೀಯ (ಕ್ಸೈಲಂ ಮತ್ತು ಫ್ಲ್ಯೂಯಂ) ಅಂಗಾಂಶಗಳು ವಿಕಾಸ ಮಾಡಿಕೊಂಡಿದ್ದು.
    4. ಬೀಜಗಳನ್ನು ವೃದ್ಧಿ ಮಾಡಿಕೊಂಡಿದ್ದು.
    5. ಹೂವು ಹಣ್ಣುಗಳನ್ನು ವಿಕಾಸ ಮಾಡಿಕೊಂಡಿದ್ದು.

    ಮೊದ ಮೊದಲು ಸೂರ್ಯನಿಂದ ಬಂದ ನೇರಳಾತೀತ ಕಿರಣಗಳನ್ನು ಸಹಿಸಿಕೊಳ್ಳುವುದು ಇವುಗಳಿಗೆ ಕಷ್ಟವಾಗುತ್ತಿತ್ತು. ನೀರು, ಖನಿಜಾಂಶಗಳನ್ನು ತನ್ನ ದೇಹದ ಇತರ ಭಾಗಗಳಿಗೆ ಸರಬರಾಜು ಮಾಡಲು ಕಷ್ಟವಾಗುತ್ತಿತ್ತು. ನಂತರದ ಹತ್ತು ಕೋಟಿ ವರ್ಷಗಳ ಅಂತರದಲ್ಲಿ, ತಮ್ಮ ದೇಹದಲ್ಲಿ ವಿವಿಧ ರೀತಿಯ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಿಕೊಂಡು, ಅತಿ ಸೂಕ್ಷ್ಮವಾದ ಬೀಜಕಗಳು (ಸ್ಪೋರ್ಸ್‌) ಮತ್ತು ನಾಳೀಯ ಅಂಗಾಂಶಗಳು (ವಾಸ್ಕ್ಯುಲರ್ ಟಿಶ್ಯೂಸ್), ಕ್ಸೈಲಮ್ ಫ್ಲೂಯಮ್ ಸೃಷ್ಟಿ ಮಾಡಿಕೊಂಡವು. ಬೀಜಕಗಳು ಗಾಳಿ ಮತ್ತು ನೀರಿನ ಮುಖಾಂತರ ಇತರ ಪ್ರದೇಶಗಳಿಗೆ ಪ್ರಸಾರವಾಗಿ ಈ ಚಿಕ್ಕ ಸಸ್ಯಗಳು ಭೂಮಿಯನ್ನು ಆವರಿಸಿದವು.

    ಮೂರು ಕೋಟಿ ವರ್ಷಗಳ ನಂತರ ಬೀಜಕಗಳಲ್ಲಿ ನೇರವಾಗಿ ಕಾಯಿಗಳನ್ನು ಸೃಷ್ಟಿಸಿಕೊಂಡು ಸಂತಾನಾಭಿವೃದ್ಧಿ ಮಾಡಲಾರಂಭಿಸಿದವು. ಆದರೆ, ಅಂತಹ ಕಾಯಿಗಳು ಬಲಿಯುವ ಮೊದಲೇ ಹಲವಾರು ಕೀಟಗಳು ತಿನ್ನುತ್ತಿದ್ದವು. ಕಾಯಿಗಳು ಗಾಳಿಯ ರಭಸಕ್ಕೆ ಬಿದ್ದುಹೋಗುತ್ತಿದ್ದವು, ಸೂರ್ಯನ ಉಷ್ಣಾಂಶವನ್ನು ತಡೆಯಲಾರದೆ ಸುಟ್ಟುಹೋಗುತ್ತಿದ್ದವು, ಮಳೆಯ ನೀರಿನಲ್ಲಿ ಕರಗಿಹೋಗುತ್ತಿದ್ದವು, ಆಲಿಕಲ್ಲು ಬಿದ್ದು ಜಜ್ಜಿಹೋಗುತ್ತಿದ್ದವು, ಹಗಲು ಮತ್ತು ರಾತ್ರಿಯ ಉಷ್ಣಾಂಶದ ವ್ಯತ್ಯಾಸವನ್ನು ನಿಯಂತ್ರಿಸಲಾಗದೆ ಬೀಜಗಳು ಬಲಿಯುವುದು ಕಷ್ಟವಾಗುತ್ತಿತ್ತು.

    ಇಂತಹ ತೊಂದರೆಗಳನ್ನು ಅರಿತ ಮುಂದಿನ ಹಲವು ಸಂತತಿಯ ಬುದ್ಧಿವಂತ ಸಸ್ಯಗಳು ಬೀಜಗಳಲ್ಲಿರುವ ಭ್ರ್ರೂಣವನ್ನು ರಕ್ಷಿಸುವುದಕ್ಕೋಸ್ಕರ, ಹಲವಾರು ಪ್ರಯೋಗಗಳನ್ನು ಮಾಡಿ, ಕೆಲವು ತಲೆಮಾರುಗಳ ಅಂತರದಲ್ಲಿ, ಅಬ್ಸಿಸಿಕ್ ಹಾರ್ಮೋನ್‌ನನ್ನು ಸೃಷ್ಟಿ ಮಾಡಿಕೊಂಡು ಬೀಜದ ತೊಗಟೆಯನ್ನು (ಕವಚ) ತಯಾರಿಸಿಕೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts