More

    ಸುಡು ಬಿಸಿಲಿನ ತಾಪಕ್ಕೆ ನಿಮ್ಮ ಕಣ್ಣುಗಳ ರಕ್ಷಣೆ ಮಾಡುವುದು ಹೇಗೆ?

    ಬೆಂಗಳೂರು: ಬೇಸಿಗೆ ಬಂದರೆ ಸಾಕು ಮನೆಯಿಂದ ಹೊರಗೆ ಬರಲು ಬೇಸರವಾಗುತ್ತದೆ. ಒಂದೆಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದೆಡೆ ಧೂಳಿನ ಕಾಟ. ಈ ವಾತಾವರಣದಲ್ಲಿ ಅನಾರೋಗ್ಯಸಮಸ್ಯೆಗಳು ಹೆಚ್ಚಾಗುತ್ತವೆ. ಅತ್ಯಂತ ಸೂಕ್ಷವಾದ ಕಣ್ಣಿನ ಆರೋಗ್ಯ ಕಾಪಾಡಿಒಳ್ಳುವುದು ಬಹುಮುಖ್ಯವಾಗುತ್ತದೆ.

    ಕಣ್ಣನ್ನು ಕಾಡುವ ಅನಾರೋಗ್ಯ:
    ಕಣ್ಣಿಗೆ ಬೀಳುವ ಧೂಳು ಸಾಕಷ್ಟು ಅಲರ್ಜಿ ಮತ್ತು ಸೋಂಕು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸುಡುವ ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಣ್ಣು ಕೆಂಪಾಗುವುದು, ಕಣ್ಣಿನ ಕಿರಿ ಕಿರಿಯಂಥಹ ಲಕ್ಷಣಗಳು ಕಂಡು ಬರುತ್ತದೆ. ಕಣ್ಣಿನಲ್ಲಿ ನವೆ, ನೀರು ಸುರಿಯುವವುದು, ಗೀಜು ಕಟ್ಟುವುದು, ಕಣ್ಣೊಳಗೆ ಚುಚ್ಚಿದ ಅನುಭವವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಣ್ಣುಗಳ ಬಗ್ಗೆ ಸ್ವಲ್ಪ ಜಾಸ್ತಿಯೇ ಜಾಗರೂಕರಾಗಬೇಕಾಗುತ್ತದೆ.

     ಇದನ್ನೂ ಓದಿ: ಏಪ್ರಿಲ್ 25 ರಂದು ಶೂನ್ಯ ನೆರಳಿನ ದಿನ; ನಾಳೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ! 

    ಕಣ್ಣಿನ ಆರೋಗ್ಯ ಕಾಪಾಡುವುದು:
    * ತಣ್ಣಗಿನ ಶುದ್ಧ ನೀರಿನಲ್ಲಿ ದಿನಕ್ಕೆ ಎರಡರಿಂದ ಮೂರು ಬರಿ ಕಣ್ಣನ್ನು ಸ್ವಚ್ಛಗೊಳಿಸಬೇಕು.
    * ಬೇಸಿಗೆಯಲ್ಲಿ ನೀರು ಕೂಡ ಬಹಳಷ್ಟು ಕಲುಷಿತವಾಗಿರುತ್ತದೆ. ಹಾಗಾಗಿ ಕಣ್ಣುಗಳನ್ನು ಕ್ಲೀನ್ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಅಲ್ಲದೇ ಕಣ್ಣಿಗೆ ಧೂಳು ಅಥವಾ ಕಸ ಬಿದ್ದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು. ಮೊದಲು ಸ್ವಚ್ಛ ನೀರು ಅಥವಾ ಬಟ್ಟೆಯಿಂದ ಒರೆಸಿ ನಂತರ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು.
    * ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
    *ಸನ್​ಗ್ಲಾಸ್​ ಬಳಸುವ ಮೂಲಕ ಕಣ್ಣುಗಳನ್ನು ರಕ್ಷಿಸಿಕೊಳ್ಳಿ
    * ಕಣ್ಣುಗಳ ಆರೋಗ್ಯ ಸುಧಾರಣೆಗೆ 7 ರಿಂದ 8 ಗಂಟೆಗಳ ನಿದ್ರೆ ಮಾಡುವುದು ಅಗತ್ಯವಾಗಿರುತ್ತದೆ.
    * ಸೀಬೆಹಣ್ಣನ್ನು ಆಗಾಗ ಸೇವಿಸುವುದರ ಮೂಲಕ ಕಣ್ಣುಗಳ ಬಾಧೆಯಿಂದ ಪಾರಾಗಬಹುದು.
    * ಬೇಸಿಗೆಯಲ್ಲಿ ಹೆಚ್ಚಾಗಿ ಎಸಿ ಮತ್ತು ಫ್ಯಾನುಗಳನ್ನು ಬಳಸುತ್ತೇವೆ. ಇದರಿಂದಾಗಿ ಕಣ್ಣುಗಳು ಬೇಗ ಒಣಗುತ್ತವೆ. ಆದಷ್ಟು ಎಸಿ ಅಥವಾ ಫ್ಯಾನಿನ ಗಾಳಿ ನೇರವಾಗಿ ಕಣ್ಣಿಗೆ ತಗುಲದಂತೆ ನೋಡಿಕೊಳ್ಳಬೇಕು.

    ಉದ್ಯೋಗಿಗೆ 1500 ಕೋಟಿ ರೂ. ಮೌಲ್ಯದ ಬಂಗಲೆ ಗಿಫ್ಟ್ ಕೊಟ್ಟ ಮುಖೇಶ್​​ ಅಂಬಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts