More

    ಹೂ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ?: ಸಿ.ಎಸ್.ಸುಧೀರ್ ಅವರ ಮನಿಮಾತು ಅಂಕಣ

    ಹೂ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ?: ಸಿ.ಎಸ್.ಸುಧೀರ್ ಅವರ ಮನಿಮಾತು ಅಂಕಣಪ್ರತಿಯೊಂದು ಹೂವು ಪ್ರಕೃತಿಯಲ್ಲಿ ಅರಳುವ ಆತ್ಮ ಎಂಬ ಗೆರಾರ್ಡ್ ಡಿ ನೆರ್ವಾಲ್ ಮಾತಿನಂತೆ ಹೂವುಗಳು ಈ ಧರೆಗೆ ಉಡುಗೊರೆಯಂತೆ. ವಿವಿಧ ಬಣ್ಣಗಳಿಂದ, ಸೊಬಗಿನಿಂದ, ಸೂಕ್ಷ್ಮ ಸ್ಪರ್ಶಗಳಿಂದ ಕಂಗೊಳಿಸುತ್ತ ಅನೇಕರಿಗೆ ಸಂತೋಷ ಉಣಬಡಿಸುತ್ತವೆ. ಹೀಗಾಗಿಯೇ ನಮ್ಮ ಪ್ರೀತಿ ಪಾತ್ರರಿಗೆ ಹೂವನ್ನು ಉಡುಗೊರೆಯಾಗಿ ನೀಡುತ್ತೇವೆ. ಸಾಂಸ್ಕೃತಿಕ ದೇಶವಾದ ಭಾರತದಲ್ಲಿ ಹಬ್ಬ-ಹರಿದಿನ, ಸಮಾರಂಭಗಳಂದು ಹೂವಿನ ಬಳಕೆ ಸರ್ವೆಸಾಮಾನ್ಯ. ಇದರಿಂದಾಗಿಯೇ ಹೂಗಳ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.  ಹೂವಿನ ಬೆಲೆ ಹೆಚ್ಚುತ್ತಿರುವುದರಿಂದಲೇ ಬಹಳಷ್ಟು ಕೃಷಿಕರು ಹೂವಿನ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ವಿದೇಶಕ್ಕೆ ವಿವಿಧ ಬಗೆಯ ಹೂಗಳನ್ನು ರಫ್ತು ಮಾಡುತ್ತ ವರ್ಷಕ್ಕೆ ಕೋಟ್ಯಂತರ, ಲಕ್ಷಾಂತರ ರೂಪಾಯಿಯನ್ನು ಸಂಪಾದಿಸುತ್ತಿದ್ದಾರೆ. ಹೂವಿನ ಉದ್ಯಮದ ಕುರಿತಾದ ವಿಶೇಷ ಮಾಹಿತಿ ಈ ಅಂಕಣದಲ್ಲಿದೆ.

    ಹೂವಿನ ಕೃಷಿ ಎಂದರೇನು?: ಹೂವಿನ ಕೃಷಿ ತೋಟಗಾರಿಕೆಯಲ್ಲಿನ ಒಂದು ವಿಭಾಗವಾಗಿದ್ದು, ಹೂವು ಮತ್ತು ಅಲಂಕಾರಿಕ ಸಸ್ಯಗಳನ್ನು ಒಳಗೊಂಡಿದೆ. ಹೂವಿನ ಬೆಳೆಗಳಲ್ಲಿ ಹಾಸಿಗೆ ಸಸ್ಯಗಳು (ಬೆಡೆಡ್ ಪ್ಲಾಂಟ್ಸ್), ಮನೆ ಗಿಡಗಳು, ಹೂಬಿಡುವ ಉದ್ಯಾನವನ ಮತ್ತು ಮಡಕೆ ಸಸ್ಯಗಳು, ಕತ್ತರಿಸಲ್ಪಟ್ಟ ಹೂವುಗಳು (ಕಟ್ ಫ್ಲವರ್ಸ್), ಹೂಗೊಂಚಲು ಹೀಗೆ ಹಲವು ವಿಧಗಳಿವೆ.

    ಹೂ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ?: ಸಿ.ಎಸ್.ಸುಧೀರ್ ಅವರ ಮನಿಮಾತು ಅಂಕಣ ಹೂವಿನ ಕೃಷಿ-ಲೆಕ್ಕಾಚಾರ: ಪ್ರಪಂಚಾದ್ಯಂತ 4 ಲಕ್ಷ ಕೋಟಿ ರೂ. ಮೌಲ್ಯದ ಹೂವಿನ ಮಾರುಕಟ್ಟೆಯಿದೆ. ಅದರಲ್ಲಿ ನಮ್ಮ ದೇಶದ ಕೊಡುಗೆ 25 ಸಾವಿರ ಕೋಟಿ ರೂ. ಅಂದರೆ ಭಾರತದಲ್ಲಿ ಸರಿಸುಮಾರು 25 ಸಾವಿರ ಕೋಟಿ ರೂ. ಮೌಲ್ಯದ ಹೂವು ಪ್ರತಿ ವರ್ಷ ಮಾರಾಟವಾಗಿತ್ತಿದೆ. ನಮ್ಮ ದೇಶದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ತಮಿಳುನಾಡು, ರಾಜಸ್ಥಾನ, ಪಶ್ಚಿಮ ಬಂಗಾಳ ಪ್ರಮುಖ ಹೂಗಾರಿಕಾ ಕೇಂದ್ರಗಳಾಗಿ ಹೊರಹೊಮ್ಮಿವೆ. ವರದಿಯೊಂದರ ಪ್ರಕಾರ, 2015-16ರಲ್ಲಿ ಸುಮಾರು 249 ಸಾವಿರ ಹೆಕ್ಟೇರ್ ಪ್ರದೇಶವು ಹೂವಿನ ಕೃಷಿಗೆ ಮೀಸಲಿತ್ತು ಮತ್ತು ಇದೇ ವರ್ಷದಲ್ಲಿ 1659 ಸಾವಿರ ಟನ್ ಬಿಡಿ ಹೂವುಗಳು, 484 ಸಾವಿರ ಟನ್ ಕತ್ತರಿಸಿದ ಹೂವುಗಳ ಉತ್ಪಾದನೆಯಾಗಿದೆ. 2019-20ರ ವರದಿ ಪ್ರಕಾರ, ಭಾರತ 16,949.37 ಮೆಟ್ರಿಕ್ ಟನ್ ಹೂಗಾರಿಕೆ ಉತ್ಪನ್ನಗಳನ್ನು ವಿಶ್ವಕ್ಕೆ ರಫ್ತು ಮಾಡಿದೆ.

    ಹೂವಿನ ಕೃಷಿಗೆ ಸರ್ಕಾರದ ಪ್ರೋತ್ಸಾಹ: ಹೂ ಕೃಷಿ ಬೆಳವಣಿಗೆಗಾಗಿ ಸರ್ಕಾರ ಬಹಳಷ್ಟು ಸವಲತ್ತು ನೀಡಿದೆ. ಹಸಿರುಮನೆ ನಿರ್ಮಾಣಕ್ಕೆ ಶೇ.50 ಸಬ್ಸಿಡಿ, ನೆರಳು ಪರದೆಗಳು, ಹನಿ ನೀರಾವರಿ ಪದ್ಧತಿಗಳಿಗೆ ಸಬ್ಸಿಡಿ, ಯಾವುದೇ ಬಡ್ಡಿ ಇಲ್ಲದೆ ಬೆಳೆ ಸಾಲ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಯೋಜನೆಯಲ್ಲಿ ಹೂ ಕೃಷಿಗೆ ಬೇಕಾಗುವ ಸಸ್ಯಗಳ ಖರೀದಿಗೂ ಶೇ.50 ಸಬ್ಸಿಡಿ ಜತೆಗೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದಿಂದ ಕೂಡ ಕೋಲ್ಡ್ ಸ್ಟೋರೇಜ್, ಹೀಗೆ ನೆರವು, ಕೋಲ್ಡ್ ಸ್ಟೋರೇಜ್ ವಾಹನಗಳು ಹೀಗೆ ಹಲವಾರು ರೀತಿಯಲ್ಲಿ ಕೃಷಿಕರಿಗೆ ಸಹಾಯ ಹಸ್ತ ನೀಡುತ್ತಿದೆ. ಎರಡೂ ಕೈ ಸೇರಿದ್ರೇನೇ ಚಪ್ಪಾಳೆ ಅನ್ನೋ ಹಾಗೆ, ಸರ್ಕಾರದ ಸವಲತ್ತು ಏನೇ ಇದ್ದರೂ ನಾವು ಮನಸ್ಸು ಮಾಡದೇ ಕೃಷಿಯಲ್ಲಿ ಸಾಧನೆಯ ಪಥದತ್ತ ಮುಂದೆ ಸಾಗುವುದು ಅಸಾಧ್ಯ.

    ಹೂ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ?: ಸಿ.ಎಸ್.ಸುಧೀರ್ ಅವರ ಮನಿಮಾತು ಅಂಕಣಹೂವಿನ ಕೃಷಿಯ ಕೋರ್ಸ್: ಮೇಲಿನ ವಿಚಾರಗಳನ್ನೆಲ್ಲ ಗಮನಿಸಿದ ನಂತರ ನಾನು ಕೂಡ ಹೂ ಕೃಷಿಕನಾಗಬೇಕು, ಹೂ-ಬೆಳೆಯಿಂದ ಶ್ರೀಮಂತನಾಗಬೇಕು ಅಂತ ನೀವು ಅಂದುಕೊಳ್ತಿದ್ರೆ, ನಿಮಗೆ ಸಹಾಯಹಸ್ತ ನೀಡಲೆಂದೇ ಇಂಡಿಯನ್ ಮನಿ. ಕಾಮ್ ತನ್ನ ಫೈನಾನ್ಸಿಲ್ ಫ್ರೀಡಂ ಆಪ್​ನಲ್ಲಿ ಹೂವಿನ ಕೃಷಿಯ ಕೋರ್ಸ್ ಹೊರ ತಂದಿದೆ. ಗುರುಗಳಿಂದಲೇ ಗುರಿಗೆ ಶ್ರೀಕಾರ ಸಿಕ್ಕರೆ ಸಾಧನೆಯ ಶಿಖರವನ್ನೇರುವುದು ಕಷ್ಟವೇನಲ್ಲ. ಹಾಗಾಗಿಯೇ ಈ ಕೋರ್ಸ್ ಮುಖೇನ ಹೂವಿನ ಕೃಷಿಯಲ್ಲಿ ಯಶಸ್ಸು ಗಳಿಸುವುದು ಹೇಗೆ ಎಂಬುದನ್ನು ಹೇಳಲೊರಟಿರುವವರು ಇದೇ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿ ವರ್ಷಕ್ಕೆ ಲಕ್ಷಾಂತರ -ಕೋಟ್ಯಂತರ ಹಣವನ್ನು ಸಂಪಾದಿಸುತ್ತಿರುವವರು. ಹೂವಿನ ಕೃಷಿಗೆ ಬೇಕಾಗುವ ಮೂಲಭೂತ ಸವಲತ್ತುಗಳಾವುವು, ಬೀಜ ಸಂಗ್ರಹಣೆ ಮತ್ತು ಕೀಟಭಾದೆ ನಿಯಂತ್ರಣದ ಪರಿ ಹೇಗೆ,  ಇದಕ್ಕೆ ಬೇಕಾಗುವ ಬಂಡವಾಳವಾದ್ರೂ ಎಷ್ಟು, ಈ ಉದ್ದಿಮೆಯಲ್ಲಿ ನಮಗೆದುರಾಗುವ ಸವಾಲುಗಳೇನು, ಹೇಗೆ ಸರ್ಕಾರದಿಂದ ಸಹಾಯ ಸಿಗುತ್ತಾ, ಈ ಮಾರುಕಟ್ಟೆಯ ವಿಸ್ತರಣೆ ಹೇಗೆ… ಈ ರೀತಿಯ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಒಂದೇ ಕಡೆ, ಅದುವೇ ಇಂಡಿಯನ್ ಮನಿ.ಕಾಮ್ ಹೂವಿನ ಕೃಷಿಯ ಕೋರ್ಸ್​ನಲ್ಲಿ. ಆದಷ್ಟು ಬೇಗ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ ಹೂವಿನ ಕೃಷಿಯ ಕೋರ್ಸ್ ವೀಕ್ಷಣೆ ಮಾಡಿ. ಹೂವಿನಂತೆ ನಿಮ್ಮ ಜೀವನವೂ ಅರಳುತ್ತಾ ಹಸನ್ಮುಖಿಯಾಗಿರಲಿ ಎಂಬುದು ನಮ್ಮ ಉದ್ದೇಶ.

    ಹೂವಿನ ಉತ್ಪನ್ನಗಳು: ಹೂಗಳು ಅಲಂಕಾರಿಕವಾಗಿ ಬಳಕೆಯಾಗುವುದಲ್ಲದೆ, ಇತರ ರೀತಿಯಲ್ಲೂ ಬಹಳ ಉಪಯುಕ್ತವಾಗಿವೆ. ಹೂವಿನಿಂದ ತಯಾರಿಸಲ್ಪಡುವ ಇತರ ಕೆಲ ಉತ್ಪನ್ನ ಈ ಕೆಳಗಿನಂತಿವೆ: ಸುಗಂಧ ದ್ರವ್ಯ, ರೋಸ್ ವಾಟರ್, ಗುಲ್ಕಂದ್, ಸಾಬೂನುಗಳು, ಮೇಣದಬತ್ತಿಗಳು, ತುಟಿ ಮುಲಾಮು, ಆಭರಣಗಳು.

    ಎಂಟು ವರ್ಷಗಳ ನಂತರ ಕಲ್ಯಾಣ್​ ಜಿಆರ್​ಪಿನಲ್ಲಿ ಸಿಕ್ತು ಕಳುವಾಗಿದ್ದ ಚಿನ್ನದ ಎರಡು ಸರಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts