More

    ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಗಲಭೆ ಸೃಷ್ಟಿಸಲು ಪಿಎಫ್​ಐನಿಂದ ವಿವಿಧ ನಾಯಕರಿಗೆ ಹಣ ಸಂದಾಯ: ಇಲ್ಲಿದೆ ಆಘಾತಕಾರಿ ಮಾಹಿತಿ…

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿ ಗಲಭೆ ಸೃಷ್ಟಿಸಲು ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ಹಸರಿನ ಇಸ್ಲಾಮಿಕ್​ ಸಂಘಟನೆ ಅನೇಕರಿಗೆ ಸಾಕಷ್ಟು ಹಣವನ್ನು ಸಂದಾಯ ಮಾಡಿದೆ ಎಂಬ ಆತಂಕಕಾರಿ ವಿಷಯವನ್ನು ಜೀ ನ್ಯೂಸ್​ ವರದಿ ಮಾಡಿದೆ.

    ಹಣ ಪಡೆದ ಫಲಾನುಭವಿಗಳಲ್ಲಿ ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​, ಸುಪ್ರೀಂಕೋರ್ಟ್​ ವಕೀಲೆ ಇಂದಿರಾ ಜೈಸಿಂಗ್​, ದುಶ್ಯಂತ್​ ಎ ದೇವ್​ ಮತ್ತು ಅಬ್ದುಲ್​ ಸಮಂದ್​ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.

    ಮೂಲಗಳ ಪ್ರಕಾರ ಒಟ್ಟು 120 ಕೋಟಿ ರೂ. ಮೌಲ್ಯದ ಬ್ಯಾಂಕ್​ ವಹಿವಾಟು ಪಿಎಫ್​ಐನ 73 ಬ್ಯಾಂಕ್​ ಖಾತೆಗಳಿಂದ ನಡೆದಿದೆ. ಇದರಲ್ಲಿ ಕಪಿಲ್​ ಸಿಬಲ್​ಗೆ​ 77 ಲಕ್ಷ ರೂ, ಜೈಸಿಂಗ್​ 4 ಲಕ್ಷ ರೂ., ದುಶ್ಯಂತ್​ ಎ ದೇವ್ 11 ಲಕ್ಷ ರೂ. ಮತ್ತು ಅಬ್ದುಲ್​ ಸಮಂದ್​ 3.10 ಲಕ್ಷ ರೂ. ಹಣ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ, ನ್ಯೂ ಜೋತಿ ಗ್ರೂಪ್​ಗೆ 1.17 ಕೋಟಿ ರೂ. ಮತ್ತು ಪಿಎಫ್​ಐ ಕಾಶ್ಮೀರಕ್ಕೆ 1.65 ಕೋಟಿ ರೂ. ಸಂದಾಯವಾಗಿದೆ ಎನ್ನಲಾಗಿದೆ.

    ಪಿಎಫ್​ಐಗೆ ಸಂಬಂಧಿಸಿದ 73 ಬ್ಯಾಂಕ್​ ಖಾತೆಗಳನ್ನು ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಒಟ್ಟಾರೆ ಬ್ಯಾಂಕ್​ ವ್ಯವಹಾರವನ್ನು ಪರೀಕ್ಷಿಸಿದಾಗ ಒಟ್ಟು 120.5 ಕೋಟಿ ರೂ. ಈ ಖಾತೆಗಳಲ್ಲಿ ಸಂದಾಯವಾಗಿದ್ದು, ಅದೇ ದಿನ ಅಥವಾ ಎರಡು ಮೂರು ದಿನದೊಳಗೆ ಖಾತೆಗಳಲ್ಲಿ ಕನಿಷ್ಠ ನಗದು ಉಳಿತಾಯ ಮಾಡಿ ಹಣವನ್ನು ಹಿಂಪಡೆದಿರುವುದು ಬೆಳಕಿಗೆ ಬಂದಿದೆ.

    ಪಿಎಫ್​ಐನ(10) ಮತ್ತು ರೆಹಬ್​ ಇಂಡಿಯಾ(5) ಸೇರಿ ಒಟ್ಟು 15 ಬ್ಯಾಂಕ್​ಗಳಲ್ಲಿ 1.04 ಕೋಟಿ ರೂ. ಹಣವನ್ನು ಡಿಸೆಂಬರ್ 4, 2019ರಿಂದ ಜನವರಿ 6 2020ರವರೆಗೆ ಜಮಾವನೆ ಮಾಡಲಾಗಿದೆ. ಈ ಹಣವನ್ನು ಮೊಬೈಲ್​ ಬಳಸಿ ಐಎಂಪಿಎಸ್ ಮೂಲಕ ಜಮಾವಣೆ ಮಾಡಲಾಗಿದೆ.​ ಜಮಾವಣೆ ಮಾಡುವವರ ಗುರುತನ್ನು ಬಹಿರಂಗ ಪಡಿಸದೇ 50 ಸಾವಿರ ರೂ. ಕೆಳಗೆ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ.

    ಪ್ರಸ್ತುತ ನಡೆಯುತ್ತಿರುವ ಸಿಎಎ ವಿರುದ್ಧ ಪ್ರತಿಭಟನೆಗೆ ನಿಧಿಯನ್ನು ನೀಡಲು ಪಿಎಫ್​ಐನ 9 ಕಚೇರಿಗಳು ಮತ್ತು ಸಂಬಂಧಿತ ಸಂಘಟನೆಗಳು ದೆಹಲಿಯ ಶಾಹೀನ್​ ಬಾಘ್​ ಏರಿಯಾದಲ್ಲಿ ತೆರೆದಿವೆ ಎಂಬ ಭಯಾನಕ ಮಾಹಿತಿಯನ್ನು ಕೂಡ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts