More

    ದಂಡ ಪಾವತಿಗೆ 50% ರಿಯಾಯಿತಿ; ಇಲ್ಲಿಯವರೆಗೂ ಒಟ್ಟು ಸಂಗ್ರಹವಾದ ಹಣವೆಷ್ಟು? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಟ್ರಾಫಿಕ್​​ ಪೊಲೀಸರು ದಂಡ ಪಾವತಿ ಮಾಡಲು ಮತ್ತೊಮ್ಮೆ 50% ರಿಯಾಯಿತಿಯ ಸುವರ್ಣವಕಾಶವನ್ನು ನೀಡಿದ್ದರು. ಇದೀಗ ನಾಲ್ಕು ದಿನಕ್ಕೆ ಒಟ್ಟು ಸಂಗ್ರಹಗೊಂಡ ಹಣ ಎಷ್ಟು ಎಂಬುದರ ಮಾಹಿತಿ ಕೆಳಕಂಡಂತಿದೆ.

    ಇದನ್ನೂ ಓದಿ: ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ

    50% ದಂಡ ಪಾವತಿಯ ಮೊದಲ ದಿನದಲ್ಲಿ ಒಟ್ಟು 8,820 ಪ್ರಕರಣಗಳಿಂದ 28,35,500 ರೂ. ದಂಡ ಸಂಗ್ರಹವಾಗಿದೆ. ಎರಡನೇ ದಿನದಲ್ಲಿ 7,931 ಪ್ರಕರಣಗಳಿಂದ 24,74,750 ರೂ. ಫೈನ್​​ ಹರಿದುಬಂದಿದೆ.

    ಮೂರನೇ ದಿನಕ್ಕೆ 7,234 ಕೇಸ್​​ಗಳಿಂದ 22,34,300 ರೂ. ದಂಡ ಸಂಗ್ರಹವಾಗಿದೆ. ನಾಲ್ಕನೇ ದಿನಕ್ಕೆ (ಸಂಜೆ 8 ಗಂಟೆಯೊಳಗೆ) 3,795 ಪ್ರಕರಣಗಳಿಂದ 11,49,200 ರೂ. ಫೈನ್​​ ಕಲೆಕ್ಟ್​​ ಆಗಿದೆ. ನಾಲ್ಕು ದಿನಗಳ ಅಂತ್ಯಕ್ಕೆ ಒಟ್ಟು 88,94,300 ರೂ. ದಂಡ ಸಂಗ್ರಹವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ 50% ರಿಯಾಯಿತಿಗೆ ನೀರಸ ಪ್ರತಿಕ್ರಿಯೆ ದೊರಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts