More

    ‘ಮೇನಲ್ಲಿ ಪೀಕ್​ ತಲುಪಲಿದೆ, ಅದಕ್ಕೆ ಸಿದ್ಧತೆ ಏನು ?’ – ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

    ನವದೆಹಲಿ : ಭಾರತವು ಹಾಲಿ ಎದುರಿಸುತ್ತಿರುವ ಕರೊನಾ ಸಮಸ್ಯೆಯನ್ನು ಸುನಾಮಿ ಎಂದು ದೆಹಲಿ ಹೈಕೋರ್ಟ್ ಬಣ್ಣಿಸಿದೆ. “ಮೇ ನಡುವಿನಲ್ಲಿ ಕರೊನಾ ವೈರಸ್​ ಸೋಂಕು ಅತ್ಯಂತ ಹೆಚ್ಚಾಗಲಿದೆ ಎಂದು ದೆಹಲಿ ಐಐಟಿ ಹೇಳಿದೆ. ಆ ಸಮಯಕ್ಕೆ ಕರೊನಾ ಸಂಬಂಧಿತ ಸಾವುಗಳನ್ನು ಕಡಿಮೆ ಮಾಡಲು ಸರ್ಕಾರದ ಯೋಜನೆ ಏನಿದೆ” ಎಂದು ಪ್ರಶ್ನಿಸಿದೆ.

    ಕರೊನಾ ರೋಗಿಗಳ ಚಿಕಿತ್ಸೆಗೆ ಮೆಡಿಕಲ್ ಆಕ್ಸಿಜನ್​ಅನ್ನು ಪೂರೈಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ಕೋರಿರುವ ದೆಹಲಿಯ ಆಸ್ಪತ್ರೆಗಳ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯ ಈ ಪ್ರಶ್ನೆ ಎತ್ತಿದೆ. ಕರೊನಾದ ‘ಪೀಕ್’​ಅನ್ನು ಎದುರಿಸಲು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಯಾವ ಮಟ್ಟದಲ್ಲಿ ಸಜ್ಜಾಗಿವೆ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಕೇಳಿದೆ.

    ಇದನ್ನೂ ಓದಿ: ವೈದ್ಯರ ಸೇವಾ ಅವಧಿ ವಿಸ್ತರಣೆ ; ಆಕ್ಸಿಜನ್ ಪ್ಲ್ಯಾಂಟ್ ಆಮದು

    “ನಾವು ಮೇ ಮಧ್ಯದಲ್ಲಿ ಪೀಕ್​ ಪ್ರಕರಣಗಳನ್ನು ಎದುರಿಸಲಿದ್ದೇವೆ. ಇದೊಂದು ಸುನಾಮಿ. ಕೆಲವರು ಸತ್ತೇ ಸಾಯುತ್ತಾರೆ. ಅದು ಅನಿವಾರ್ಯ. ಆದರೆ ಯಾರನ್ನು ಉಳಿಸಬಹುದೋ ಆ ಜನರನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಸರ್ಕಾರವು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಬೇಕು ಎಂದರು.

    ಕರೊನಾ ಎರಡನೇ ಅಲೆಯು ಇನ್ನೂ ಹದಗೆಡುವ ಸೂಚನೆಗಳಿರುವುದರಿಂದ ಹಾಸಿಗೆಗಳು, ಔಷಧಿಗಳು, ವೈದ್ಯರು, ಪ್ಯಾರಾಮೆಡಿಕ್​ ಸಿಬ್ಬಂದಿ ಮುಂತಾದ ಸಂಪನ್ಮೂಲಗಳನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಗಮನ ಹರಿಸಬೇಕು ಎಂದು ನ್ಯಾಯಪೀಠ ಹೇಳಿತು. (ಏಜೆನ್ಸೀಸ್)

    25 ಹೊಸ ರೆಮ್​ಡೆಸಿವಿರ್ ಉತ್ಪಾದನಾ ಘಟಕಗಳು ; ದಿನಕ್ಕೆ 3 ಲಕ್ಷ ವಯಲ್ ಗುರಿ !

    ಅನಿಲ್ ದೇಶ್​ಮುಖ್​ ವಿರುದ್ಧ ಲಂಚದ ಕೇಸು ದಾಖಲಿಸಿದ ಸಿಬಿಐ ; ತನಿಖೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts