More

    ವಸತಿ ಯೋಜನೆ ಹಸ್ತಾಂತರಕ್ಕೆ ಕಾಲಾವಕಾಶ

    ಬೆಂಗಳೂರು: ರಿಯಾಲ್ಟಿ ಕಂಪನಿಗಳು ಆರಂಭಿಸಿರುವ ವಸತಿ ಯೋಜನೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವ ಅವಧಿಯನ್ನು ರಾಜ್ಯ ರಿಯಲ್​ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) 6 ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ನಿವೇಶನ ಅಭಿವೃದ್ಧಿ ಹಾಗೂ ಮನೆಗಳ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದ  ಹಿನ್ನೆಲೆಯಲ್ಲಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು 6 ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.

    ರಿಯಲ್​ಎಸ್ಟೇಟ್ ನಿಯಂತ್ರಣ ಕಾಯ್ದೆಯಂತೆ ರಿಯಾಲ್ಟಿ ಕಂಪನಿಗಳು ನಿಗದಿತ ಅವಧಿಯಲ್ಲಿ ಯೋಜನೆ ಪೂರೈಸಿ ಗ್ರಾಹಕರ ಸ್ವಾಧೀನಕ್ಕೆ ನೀಡಬೇಕು. ಒಂದು ವೇಳೆ ಲಾಕ್​ಡೌನ್​ನಿಂದ ಕಾಮಗಾರಿ ಸ್ಥಗಿತಗೊಂಡಿದ್ದರೆ 6 ತಿಂಗಳ ನಂತರ ಗ್ರಾಹಕರಿಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದೆ. ಯೋಜನೆಗಳು ಪೂರ್ಣಗೊಂಡಿದ್ದರೆ ಗ್ರಾಹಕರಿಗೆ ಹಸ್ತಾಂತರಿಸಬಹುದಾಗಿದೆ. ಲಾಕ್​ಡೌನ್​ನಿಂದ ಕಟ್ಟಡ ಸಾಮಗ್ರಿ ಹಾಗೂ ಕಾರ್ವಿುಕರ ಕೊರತೆ ಸಾಮಾನ್ಯವಾಗಿದೆ. ಹೀಗಾಗಿ 6 ತಿಂಗಳು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಅವಧಿಯಲ್ಲಿ ಸಾಧ್ಯವಷ್ಟು ಯೋಜನೆಗಳನ್ನು ಪೂರ್ಣಗೊಳಿಸಿ ಗ್ರಾಹಕರಿಗೆ ಹಸ್ತಾಂತರ ಮಾಡುವಂತೆ ರಿಯಾಲ್ಟಿ ಕಂಪನಿಗಳಿಗೆ ಸೂಚಿಸಿದೆ.

    ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!

    ವಿಚಾರಣೆ ಮುಂದೂಡಿಕೆ: ದಾಖಲಾಗಿರುವ ದೂರುಗಳ ವಿಚಾರಣೆಯನ್ನು ಕೂಡ ರೇರಾ ಅನಿರ್ಧಿಷ್ಟಾವಧಿಗೆ ಮುಂದೂಡಿದೆ. ಕರೊನಾ ಸೋಂಕು ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ವೈರಸ್ ನಿಯಂತ್ರಣಕ್ಕೆ ಬಂದ ನಂತರ ವಿಚಾರಣೆ ಆರಂಭಿಸುವುದಾಗಿ ಪ್ರಾಧಿಕಾರ ತಿಳಿಸಿದೆ. ದೂರುಗಳ ವಿಚಾರಣೆಯನ್ನು ಮುಂದೂಡಿರುವ ಪ್ರಾಧಿಕಾರ ಹೊಸ ದೂರು ದಾಖಲಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

    ಕೆಂಪೇಗೌಡ ನಿವೇಶನ ವಿತರಣೆ ವಿಳಂಬ: ಬಿಡಿಎ ನಿರ್ವಿುಸಿರುವ ಕೆಂಪೇಗೌಡ ಬಡಾವಣೆ ನಿವೇಶನಗಳ ಹಸ್ತಾಂತರ ಕೂಡ ವಿಳಂಬವಾಗಲಿದೆ. 2018ರ ಡಿಸೆಂಬರ್​ಗೆ ನಿವೇಶನ ಹಸ್ತಾಂತರ ಮಾಡಬೇಕಿದ್ದ ಬಿಡಿಎ, 2020ರ ಡಿಸೆಂಬರ್​ಗೆ ಹಸ್ತಾಂತರ ಮಾಡುವುದಾಗಿ ತಿಳಿಸಿತ್ತು. ಲಾಕ್​ಡೌನ್ ನಂತರ ಕಾಮಗಾರಿ ವಿಳಂಬವಾಗಿರುವುದರಿಂದ ನಿವೇಶನಗಳ ಹಸ್ತಾಂತರ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.

    ಬಿಬಿಎಂಪಿ ಆಸ್ತಿಗಳ ಒತ್ತುವರಿ ತೆರವು ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts