ಸಿನಿಮಾ

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಸಾವು; ಪತಿ ಮೇಲೆ ಕೊಲೆ ಆರೋಪ!

ದಾವಣಗೆರೆ: ವರದಕ್ಷಿಣೆ ಕಿರುಕುಳ ಹಿನ್ನಲೆ ಗೃಹಿಣಿ ಸಾವನ್ನಪ್ಪಿರುವ ಘಟನೆ ಹೊನ್ನಾಳಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ನಡೆದಿದೆ.

ಅನಿತಾ (28) ಮೃತ ಮಹಿಳೆ. ಈಕೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ತವರು ಮನೆಯವರಿಂದ ಕೊಲೆ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಲಾಬಿ; ದೆಹಲಿಗೆ ಹೊರಟ ಕೈ ಶಾಸಕರು ಯಾರ್‍ಯಾರು ಗೊತ್ತಾ..?

ಕತ್ತಲಗೆರೆಯ ಅಶೋಕ್ ಹಾಗೂ ಅನಿತಾಗೆ ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿತ್ತು.ಮದುವೆಯಾದಾಗಿನಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಅಶೋಕ್ ಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧವಿತ್ತು. ಅದ್ದರಿಂದ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪವನ್ನು ಮೃತ ಮಹಿಳೆಯ ಕುಟುಂಬಸ್ಥರು ಮಾಡುತ್ತಿದ್ದಾರೆ.

ಇಬ್ಬರು ಪುಟ್ಟ ಮಕ್ಕಳ ತಾಯಿ ಆಗಿದ್ದಳು ಮೃತ ಅನಿತಾ. ಅನಿತಾ ಸಾವನ್ನಪ್ಪುತ್ತಿದ್ದಂತೆ ಗಂಡ ಮತ್ತು ಆತನ ಮನೆಯವರು ತಲೆಮರೆಸಿಕೊಂಡಿದ್ದಾರೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಮ್ ಯಾವುದು ಗೊತ್ತಾ? ಲಕ್ಷಾಂತರ ರೂ. ಬೆಲೆ ಬಾಳುತ್ತೆ ಈ ಐಸ್​ ಕ್ರೀಮ್​​

Latest Posts

ಲೈಫ್‌ಸ್ಟೈಲ್