More

    ಆದಿವಾಸಿ ಕುಟುಂಬದ ಮನೆ ನವೀಕರಣ

    ಉಳ್ಳಾಲ: ಮುಡಿಪು ಸಮೀಪ ಪಾಂಡಿಕಟ್ಟೆಯಲ್ಲಿ ದುಸ್ಥಿತಿಯಲ್ಲಿದ್ದ ಮನೆ ಬಗ್ಗೆ ವಿಜಯವಾಣಿ ಮಾಡಿದ್ದ ವರದಿಗೆ ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಸ್ಪಂದಿಸಿದ್ದು, ಮನೆ ನವೀಕರಣ ಕೆಲಸಕ್ಕೆ ಸೋಮವಾರ ಚಾಲನೆ ನೀಡಲಾಗಿದೆ.

    ಸುಶೀಲಾ-ಬಾಬು ದಂಪತಿ ಹಲವು ವರ್ಷಗಳ ಹಿಂದೆ ಕೇರಳದಿಂದ ಬಂದು, ಪಾಂಡಿಕಟ್ಟದಲ್ಲಿ ಸಣ್ಣ ಜೋಪಡಿ ನಿರ್ಮಿಸಿ ವಾಸವಿದ್ದಾರೆ. ಆದರೆ ಈ ಕುಟುಂಬಕ್ಕೆ ಮೂಲಸೌಲಭ್ಯಗಳು ಸಿಕ್ಕಿಲ್ಲ. ಜೀವನ ನಿರ್ವಹಣೆಗೆ ಬುಟ್ಟಿ ಹೆಣೆಯುವುದು ಮತ್ತು ಕೂಲಿ ಕೆಲಸ ನಂಬಿಕೊಂಡಿದ್ದಾರೆ. ಇವರಲ್ಲಿ ಸರ್ಕಾರದ ಹಕ್ಕುಪತ್ರ, ಮತದಾರರ ಗುರುತು ಚೀಟಿ ಇದೆ. ಮನೆ ನಂಬ್ರ, ಆಧಾರ್ ಕಾರ್ಡ್ ಇಲ್ಲ. ಜೋಪಡಿಯ ಮೇಲ್ಛಾವಣಿಗೆ ಸಿಮೆಂಟ್ ಶೀಟ್ ಅಳವಡಿಸಲಾಗಿದ್ದು, ಬಾಗಿಲು ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಆಗಿಲ್ಲ.

    ಈ ಬಗ್ಗೆ ವಿಜಯವಾಣಿ ನವೆಂಬರ್ 22ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಜನಶಿಕ್ಷಣ ಟ್ರಸ್ಟ್ ದಾನಿಗಳ ನೆರವಿನಿಂದ ಸೋಲಾರ್ ದೀಪ ಅಳವಡಿಸಿತ್ತು. ಲಯನ್ಸ್ ಕ್ಲಬ್ ಪದಾಧಿಕಾರಿಗಳು ವಿಜಯವಾಣಿ ಮತ್ತು ಜನಶಿಕ್ಷಣ ಟ್ರಸ್ಟ್ ಪ್ರತಿನಿಧಿಗಳೊಂದಿಗೆ ಜೋಪಡಿಗೆ ತೆರಳಿ ಪರಿಶೀಲಿಸಿ ನವೀಕರಣದ ಜವಾಬ್ದಾರಿ ಹೊತ್ತುಕೊಂಡಿದ್ದರು.

    ಲಯನ್ಸ್ ಜಿಲ್ಲಾ ನಿಕಟಪೂರ್ವ ಗವರ್ನರ್ ದೇವದಾಸ್ ಭಂಡಾರಿ, ಪ್ರಾಂತೀಯ ಸಲಹೆಗಾರ ರಾಧಾಕೃಷ್ಣ ರೈ ಉಮಿಯ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

    ಮನೆಯ ಸ್ಥಿತಿಯನ್ನು ವಿಜಯವಾಣಿ ಪತ್ರಿಕೆ ಮತ್ತು ಜನಶಿಕ್ಷಣ ಟ್ರಸ್ಟ್ ಬೆಳಕಿಗೆ ತಂದಿದೆ. ಲಯನ್ಸ್ ಪದಾಧಿಕಾರಿಗಳು ಪರಿಶೀಲಿಸಿದರೂ ಕರೊನಾದಿಂದ ನವೀಕರಣ ಕೆಲಸ ಮಾಡಲು ಸ್ವಲ್ಪ ತಡವಾಗಿದೆ. ಶೀಘ್ರ ಮನೆ ನವೀಕರಣಗೊಳ್ಳಲಿದೆ.

    ರಾಧಾಕೃಷ್ಣ ರೈ ಉಮಿಯ
    ಲಯನ್ಸ್ ಪ್ರಾಂತೀಯ ಸಲಹೆಗಾರ

    ಜಿಲ್ಲೆಯಲ್ಲಿ ಕೊರಗ ಸಮುದಾಯ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದೆ. ಪಾಂಡಿಕಟ್ಟದಲ್ಲಿ ಕೊರಗ ದಂಪತಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಸೋಲಾರ್ ದೀಪ ಅಳವಡಿಸಲಾಗಿದೆ. ವಿಜಯವಾಣಿ ವರದಿ ಬಂದ ಬಳಿಕ ನವೀಕರಣಕ್ಕೆ ಲಯನ್ಸ್ ಕ್ಲಬ್ ಮುಂದಾಗಿದೆ.

    ಶೀನ ಶೆಟ್ಟಿ
    ಜಿಲ್ಲಾ ಸ್ವಚ್ಛತಾ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts