More

    ನಾಗಮ್ಮಜ್ಜಿಗೆ ಮನೆ ಹಸ್ತಾಂತರ: ಅಜ್ಜಿಗೊಂದು ಮನೆ ‘ವಿಜಯವಾಣಿ-ದಿಗ್ವಿಜಯ, ಜೇಸಿ’ ಅಭಿಯಾನ ಯಶಸ್ವಿ

    ಬಂಟ್ವಾಳ: ಚಿಕ್ಕದಾದರೂ ಪರವಾಗಿಲ್ಲ, ವಾಸ ಯೋಗ್ಯ ಮನೆ ಬೇಕೆಂಬ ಜಾರಂದಗುಡ್ಡೆ ನಿವಾಸಿ ನಾಗಮ್ಮಜ್ಜಿಯ ಹಲವು ವರ್ಷಗಳ ಬೇಡಿಕೆ ಭಾನುವಾರ ಈಡೇರಿತು.

    ವಿಜಯವಾಣಿ-ದಿಗ್ವಿಜಯ 24*7, ಜೆಸಿಐ ಮತ್ತು ಹಲವು ಸಂಘ ಸಂಸ್ಥೆಗಳ ಸಹಕಾರದಲ್ಲಿ ನಿರ್ಮಿಸಲಾದ ಸುಸಜ್ಜಿತ ಮನೆಯನ್ನು (ನಾಗಮಜ್ಜಿನ ಇಲ್‌ಲ್) ಮನೆಯೊಡತಿಗೆ ಹಸ್ತಾಂತರಿಸಲಾಯಿತು. ಕುಟುಂಬದ ಬಂಧುಗಳು, ನೆರೆಹೊರೆಯವರು, ದಾನಿಗಳು, ಹಿತೈಷಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ಸಂಭ್ರಮದಿಂದ ನೆರವೇರಿತು. ಊರವರು ಗೃಹಪ್ರವೇಶದ ಸಂಭ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ, ಹೃದಯಪೂರ್ವಕವಾಗಿ ಹರಸಿದರು.

    6 ತಿಂಗಳಲ್ಲಿ ಮನೆ ನಿರ್ಮಾಣ ಕಾರ್ಯ: ಕುಸಿಯುವ ಸ್ಥಿತಿಯಲ್ಲಿದ್ದ ಮನೆಯಲ್ಲಿ ಹಲವು ವರ್ಷಗಳಿಂದ ನಾಗಮ್ಮಜ್ಜಿಯ ಕುಟುಂಬ ಜೀವನ ಸಾಗಿಸುತ್ತಿತ್ತು. ಸುರಕ್ಷಿತ ಸೂರು ನಿರ್ಮಿಸಿಕೊಡುವಂತೆ ಈ ಬಡ ಕುಟುಂಬ ಅಳಲು ತೋಡಿಕೊಂಡಿತ್ತು. ವಿಜಯವಾಣಿ ಬಳಗ ಮತ್ತು ಜೆಸಿಐ ಬಂಟ್ವಾಳದ ಮುಂದಾಳತ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರ ಸೇರಿದಂತೆ ಹಲವು ಸಂಘಟನೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಶ್ರಮದಾನ ಮೂಲಕ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಜೂ.11ರಂದು ಆರಂಭಗೊಂಡಿದ್ದ ಮನೆ ನಿರ್ಮಾಣ ಅಭಿಯಾನ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಂಡಿತು.

    ಹಳೆಯ ಮನೆ ಯಾವಾಗ ಮೈಮೇಲೆ ಬೀಳುತ್ತದೋ ಎಂಬ ಆತಂಕವಿತ್ತು. ಮಳೆಗಾಲದಲ್ಲಿ ಮನೆಯಲ್ಲಿರಲು ಭಯವಾಗುತ್ತಿತ್ತು. ಮೊಮ್ಮಕ್ಕಳು ಬಾಗಿಲು ಹಾಕುವಾಗ ಮೆಲ್ಲನೆ ಹಾಕಿ, ಇಲ್ಲದಿದ್ದರೆ ಬಿದ್ದೀತು ಎಂದು ಬೊಬ್ಬಿಡುತ್ತಿದೆ. ವಿಜಯವಾಣಿ ಎಲ್ಲರನ್ನೂ ಸೇರಿಸಿ ನಮಗೆ ಮನೆ ನಿರ್ಮಿಸಿ ಕೊಟ್ಟಿದೆ. ಖುಷಿಯಾಗುತ್ತಿದೆ. ಎಲ್ಲರಿಗೂ ಕೃತಜ್ಞತೆಗಳು
    – ನಾಗಮಜ್ಜಿ ಮನೆಯೊಡತಿ, ಜಾರಂದಗುಡ್ಡೆ

    ವಿಜಯವಾಣಿ ಮತ್ತು ಸಮಾನಮನಸ್ಕ ಸಂಘಟನೆಗಳ ಕಾರ್ಯ ಶ್ಲಾಘನೀಯ. ಜಾತಿ, ಧರ್ಮ ತಾರತಮ್ಯವಿಲ್ಲದೆ ಮನೆ ನಿರ್ಮಾಣ ಕಾರ್ಯ ನಡೆದಿರುವುದು ಮಾದರಿ. ಇಂತಹ ಕೆಲಸವನ್ನು ವಿಜಯವಾಣಿ ಮುಂದುವರಿಸಬೇಕು. ಉಳ್ಳಾಲ ದರ್ಗಾ ಸಮಿತಿ ಈ ಕಾರ್ಯದಲ್ಲಿ ಕೈಜೋಡಿಸಲಿದೆ.
    – ಅಬ್ದುಲ್ ರಶೀದ್ ಅಧ್ಯಕ್ಷ, ಸೈಯ್ಯದ್ ಮದನಿ ದರ್ಗಾ ಉಳ್ಳಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts