More

    ಕಡಿಮೆ ವೆಚ್ಚದ ನಿವಾಸ ನಿರ್ಮಾಣಕ್ಕೆ ಮಾದರಿ ಮನೆ ನೆರವು

    ಚಿತ್ರದುರ್ಗ: ಜೀವಮಾನದಲ್ಲಿ ಒಂದು ಮನೆಯನ್ನು ಕಟ್ಟಿ ಕೊಳ್ಳುವುದು ಪ್ರತಿಯೊಬ್ಬರ ಕನಸಾಗಿದ್ದು, ಅದನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಕಷ್ಟು ಪಡುತ್ತಿರುವ ಜನರಿಗೆ‘ಮಾದರಿ ಮನೆ’,ಕಡಿಮೆ ವೆಚ್ಚದಲ್ಲಿ ಹೇಗೆ ಮನೆಯನ್ನು ನಿರ್ಮಿಸಿಕೊಳ್ಳ ಬಹುದೆಂಬುದ ಕುರಿತು ಅರಿವು ಮೂಡಿ ಸುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ಕೇಂದ್ರದ ಪ್ರಧಾನ ಮಂತ್ರಿ ಆವಾಸ್(ಗ್ರಾಮೀಣ)ವಸತಿ ಯೋಜನೆಯಡಿ ಮಾದರಿ ಮನೆ ನಿರ್ಮಾಣಕ್ಕೆ ತಾಪಂ ಆವರಣದಲ್ಲಿ ಶುಕ್ರ ವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಸರ್ಕಾರಗಳ ವಸತಿ ಯೋಜನೆ ಫಲಾನುಭವಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಮನೆ ನಿರ್ಮಾಣಕ್ಕೆ ಈ ಮಾದರಿ ಮನೆ ನೆರವಾಗಲಿದೆ. ಜಿಲ್ಲೆಯ ಪ್ರತಿ ತಾಲೂಕಿಗೆ ಒಂದರಂತೆ ನಿರ್ಮಿಸುವ ಈ ಮಾದರಿ ಮನೆ,ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ವಸತಿ ಯೋಜನೆಗೆ ಆ ಯ್ಕೆಯಾಗಿರುವ ಒಂದು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗಲಿದೆ.

    ಪರಿಶಿಷ್ಟ ಜಾತಿ,ಪಂಗಡದ ಪ್ರತಿ ಫಲಾನುಭವಿಗೆ, 1.75 ಲಕ್ಷ ರೂ.,ಉದ್ಯೋಗ ಖಾತ್ರಿಯಡಿ 28410 ರೂ.ಹಾಗೂ ಶೌಚಗೃಹಕ್ಕೆ 15000 ರೂ.ಸಹಿತ ಒಂದು ಮನೆಗೆ 218410 ರೂ.ಸಾ ಮಾನ್ಯ ವರ್ಗದ ಫಲಾನುಭವಿಗೆ 1,31,800ರೂ.,ಉದ್ಯೋಗ ಖಾತ್ರಿಯಡಿ 28410 ರೂ.ಹಾಗೂ ಶೌಚಗೃಹಕ್ಕೆ 12 ಸಾವಿರ ರೂ.ಸಹಿತ 1,72,210 ರೂ.ದೊರೆಯಲಿದೆ. ಮುಂದಿನ ಬಜೆಟ್‌ನಲ್ಲಿ ತಲಾ ಒಂದು ನಿರ್ಮಾಣ ವೆಚ್ಚವನ್ನು ಕನಿಷ್ಠ 50 ಸಾವಿರ ರೂ.ಹೆಚ್ಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.

    ತಾಪಂ ಇಒ ಹನುಮಂತಪ್ಪ,ಸಹಾಯಕ ನಿರ್ದೇಶಕ ಧನಂಜಯ, ವಸತಿ ಯೋಜನೆಯ, ಲೋಕೇಶ್, ವಿವಿಧ ಗ್ರಾಪಂಗಳ ಪಿಡಿಒಗಳಾದ ಸಂತೋಷ್ ಕುಮಾರ್, ಶಿಲ್ಪಾ, ರೂಪ ಕುಮಾರಿ, ಪಾತಣ್ಣ, ಚೈತ್ರಾ, ಮಂಜುಳಾ, ಮಂಜುನಾಥ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts