More

    22ರಂದು ಪ್ರತಿ ಮನೆಯಲ್ಲಿ ಸಂಭ್ರಮವಿರಲಿ

    ಕವಿತಾಳ: ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪಟ್ಟಣದ ಪ್ರತಿಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ದುರ್ಗಾದೇವಿ ದೇವಸ್ಥಾನದ ಅರ್ಚಕ ಶ್ರೀಶೈಲಪ್ಪ ತಾತ ಹೇಳಿದರು.

    ಪಟ್ಟಣದ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸ್ಥಳೀಯರಿಂದ ಆಯೋಜಿಸಿದ್ದ ಶ್ರೀ ರಾಮಮಂದಿರ ಉದ್ಘಾಟನೆ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಕೆ ಹಾಗೂ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮ ಮಂದಿರ ಉದ್ಘಾಟನೆ ದಿನವಾದ ಜ.22ರಂದು ಪ್ರತಿ ಮನೆಯಲ್ಲಿ ಭಜನೆ, ಕೀರ್ತನೆ, ಪೂಜೆ ಸಲ್ಲಿಸಿ ಸಂಜೆ ಆರತಿ ಬೆಳಗೋಣ ಎಂದರು.

    ತ್ರಯಂಬಕೇಶ್ವರ ದೇವಸ್ಥಾಣದ ಅರ್ಚಕ ಸಿದ್ದಯ್ಯ ಸ್ವಾಮಿ ಮಾತನಾಡಿ, ಅಯೊಧ್ಯೆಯಲ್ಲಿ ಶ್ರೀರಾಮ ಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಪಟ್ಟಣದ ತ್ರಯಂಬಕೇಶ್ವರ ದೇವಸ್ಥಾನದ ಜಾತ್ರೆ ರಾಮ ನವಮಿ ದಿನವೇ ನಡೆಯುವುದು ವಿಶೇಷ. 22 ರಂದು ರಾಮ ಭಕ್ತರು ಸಾಮೂಹಿಕ ಪೂಜೆ ನೆರವೇರಿಸಬೇಕು ಎಂದರು.

    ಪ್ರಮುಖರಾದ ಮಂಜುನಾಥ ಪತ್ತಾರ, ವೀರೇಶ ಹೂಗಾರ, ಪದ್ಮನಾಭಯ್ಯ ಇಲ್ಲೂರು, ಮಾಂತೇಶ ಸಂಪಿಗೇರ, ದೇವರಾಜ ನಾಗಲಿಕರ, ಜಯತಿರ್ಥ ಆಚಾರ್ಯ, ಹರ್ಷ, ರಾಜು ಬನ್ನಿಗಿಡದ, ರಾಜಶೇಖರ ಬಳಿಗೇರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts