More

    ಕರೊನಾ ಮುನ್ನೆಚ್ಚರಿಕೆ: ಆಸ್ಟ್ರೇಲಿಯಾದಿಂದ ಬಾಗಲಕೋಟೆಗೆ ಆಗಮಿಸಿದ ನಿವೃತ್ತ ವೈದ್ಯನಿಗೆ ಗೃಹಬಂಧನ

    ಬಾಗಲಕೋಟೆ: ಕರೊನಾ ಮುನ್ನೆಚ್ಚರಿಕೆ ನಿಮಿತ್ತ ಆಸ್ಟ್ರೇಲಿಯಾದಿಂದ ಬಂದ ನಿವೃತ್ತ ವೈದ್ಯನನ್ನು ಗೃಹಬಂಧನದಲ್ಲಿ ಇಡಲಾಗಿದೆ.

    ತೆರದಾಳ ಪಟ್ಟಣದ ನಿವಾಸಿಯಾಗಿದ್ದ ಈ ವೈದ್ಯರು ಆಸ್ಟ್ರೇಲಿಯಾದಲ್ಲಿರುವ ಮಗಳು ಮತ್ತು ಅಳಿಯನ ಮನೆಗೆ ಹೋಗಿದ್ದರು. ಮನೆಗೆ ಮರಳಿರುವ ಅವರ ಆರೋಗ್ಯ ತಪಾಸಣೆ ಮಾಡಲಾಗಿದ್ದು, 14 ದಿನ ಮನೆಯಿಂದ ಹೊರಬಾರದಿರಲು ಸೂಚಿಸಲಾಗಿದೆ.

    ಬಾಗಲಕೋಟೆ ಜಿಲ್ಲೆಗೆ ವಿದೇಶದಿಂದ ಬಂದಿರುವ ಒಟ್ಟು 118 ಜನರಿಗೆ ಗೃಹಬಂಧನ ವಿಧಿಸಲಾಗಿದೆ. ಅದರಲ್ಲಿ ಶಂಕಿತ ಇಬ್ಬರನ್ನು ಜಿಲ್ಲಾಸ್ಪತ್ರೆಯ ಐಸೋಲೇಶನ್​ ವಾರ್ಡ್​ನಲ್ಲಿ ಇಡಲಾಗಿದ್ದು, ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ.

    ಮಾರಕ ಕರೊನಾ ವೈರಸ್​ ಸ್ಟೀಲ್​ ಪಾತ್ರೆಗಳಲ್ಲಿ 3 ದಿನ ಜೀವಂತವಾಗಿರುತ್ತದೆ: ಅಧ್ಯಯನ ವರದಿಯಲ್ಲಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts