More

    ನಾಳೆ ಹೊಸೂರು ಕೌಟೆಕಾಯಿ ಜಾತ್ರೆ

    ಶನಿವಾರಸಂತೆ: ಶನಿವಾರಸಂತೆ ಕೂಗಳತೆ ದೂರದಲ್ಲಿರುವ ಕೊಡಗು-ಹಾಸನ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಸೂರು ಬಸವೇಶ್ವರ ಕೌಟೆಕಾಯಿ ಜಾತ್ರೆ ನ.27ರಂದು ನಡೆಯಲಿದೆ.

    ಹೊಸೂರು ಗ್ರಾಮ ಕಂದಾಯ ವ್ಯವಹಾರವೊಂದನ್ನು ಹೊರತು ಪಡಿಸಿದಂತೆ ಕೊಡಗಿನ ಶನಿವಾರಸಂತೆಯಲ್ಲಿ ದಿನನಿತ್ಯದ ಓಡಾಟ, ವ್ಯವಹಾರ ಹೊಂದಿರುವ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಕೌಟೆಕಾಯಿ ಜಾತ್ರೆಗೆ 400 ವರ್ಷಗಳ ಇತಿಹಾಸ ಇದ್ದು, ಹೊಸೂರು ಬೆಟ್ಟದಲ್ಲಿ ಹಲವು ಶತಮಾನಗಳ ಹಿಂದೆ ಚೋಳರು ನಿರ್ಮಿಸಿರುವ ಜೈನ ಬಸದಿಯ ಪಕ್ಕದಲ್ಲಿ 400 ವರ್ಷಗಳ ಹಿಂದೆ ಬಸವೇಶ್ವರ ದೇವರ ಪುಟ್ಟ ಗುಡಿಯನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ.

    ದೀಪಾವಳಿ ಹಬ್ಬ ಕಳೆದು ನಂತರ ನಡೆಯುವ ಹೊಸೂರು ಕೌಟೆಕಾಯಿ ಜಾತ್ರೆ ಬಸವೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆಯಲಿದ್ದು, ಅಂದು ಬೆಳಗ್ಗೆಯಿಂದ ಬೆಟ್ಟದ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಉದ್ಯಮಿ ಕೆ.ಟಿ.ಬೆಳ್ಳಿಗೌಡ್ರು ಕಾಮನಳ್ಳಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಹಾಯಕ ಸೋಮೇಗೌಡ್ರು, ಶನಿವಾರಸಂತೆಯ ಪತ್ರಕರ್ತ ಕೆ.ಎನ್.ದಿನೇಶ್ ಮಾಲಂಬಿ ಅವರನ್ನು ಸನ್ಮಾನಿಸಲಾಗುವುದು. ಸಕಲೇಶಪುರ-ಆಲೂರು ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಪ್ರಮುಖರಾದ ಮುರುಳಿ ಮೋಹನ್, ಬೆಕ್ಕನಹಳ್ಳಿ ನಾಗರಾಜ್, ತೀರ್ಥಾನಂದ, ಅರುಣ್ ಬಾವೆ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts