More

    ಕೋವಿಡ್ ಏರುಗತಿ ತಡೆಗೆ ಸಜ್ಜಾಗುತ್ತಿವೆ ಆಸ್ಪತ್ರೆಗಳು; ಸೋಂಕಿತರ ಚಿಕಿತ್ಸೆಗೆ ರಾಜ್ಯದಲ್ಲಿ ಹಾಸಿಗೆ ಮೀಸಲು..

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪಾಸಿಟೀವ್ ಪ್ರಕರಣಗಳು ಪತ್ತೆಯಾಗುತ್ತಿರುವ ಪ್ರಮಾಣದಲ್ಲಿ ವೇಗ ಕಂಡುಬರುತ್ತಿದೆ. ಆಗಸ್ಟ್ ಆರಂಭದಿಂದಲೇ ಸೋಂಕಿನ ಸಂಖ್ಯೆಯು ಪ್ರತಿನಿತ್ಯ 1,698 ಸರಾಸರಿ ಆಧಾರದಲ್ಲಿ ಏರಿಕೆಯಾಗುತ್ತಿದೆ. ಈ ಕಾರಣಕ್ಕಾಗಿ ಇತ್ತೀಚೆಗೆ ಆರೋಗ್ಯ ಇಲಾಖೆ ಕೋವಿಡ್ ಸಲಹಾ ಸಮಿತಿ ಸಭೆ ನಡೆಸಿದ್ದು, ತಜ್ಞರ ಸೂಚನೆಯಂತೆ ಸೋಂಕಿತರ ಚಿಕಿತ್ಸೆಗೆ ಕೆಲವು ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಲು ಮುಂದಾಗಿದೆ.

    ಜಾಗತಿಕವಾಗಿ ಎರಡು ವರ್ಷ ಸಾಂಕ್ರಾಮಿಕ ಭೀತಿಯಾಗಿ ಇನ್ನಿಲ್ಲದಂತೆ ಕಾಡಿದ ಕರೊನಾ ಸೋಂಕಿನ ಪ್ರಭಾವ ಕಡಿಮೆಯಾಗಿದ್ದರೂ, ಸಂಪೂರ್ಣ ದೂರವಾಗಿಲ್ಲ. ಈಗಾಗಲೇ ನಾಲ್ಕು ರೂಪಾಂತರಗಳನ್ನು ಹೊಂದಿದ ಕೋವಿಡ್ ವೈರಸ್ ಮತ್ತೊಂದು ರೂಪ ತಳೆದು ಜನರ ಆರೋಗ್ಯ ಹದಗೆಡಿಸುವ ಮುನ್ಸೂಚನೆ ಕಂಡುಬರುತ್ತಿದೆ. ಹೀಗಾಗಿ ಆ.1 ರಿಂದ 13ವರೆಗಿನ ಕರೊನಾ ಪ್ರಕರಣಗಳ ಏರಿಕೆಯ ಹಾದಿಯು ಆರೋಗ್ಯ ಇಲಾಖೆಯನ್ನು ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ನಿತ್ಯ ಒಂದು ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾಗುತ್ತಿದ್ದರೆ, ಉಳಿದ 29 ಜಿಲ್ಲೆಗಳಲ್ಲಿ ಸರಾಸರಿ 700 ಜನರಲ್ಲಿ ಸೋಂಕು ಕಂಡುಬರುತ್ತಿದೆ.

    ಇತ್ತೀಚೆಗೆ ಆಸ್ಪತ್ರೆ ಸೇರುವವರ ಪ್ರಮಾಣವೂ ಅಧಿಕ ಆಗುತ್ತಿರುವ ಹಿನ್ನೆಲೆಯಲ್ಲಿ ಆ.11ರಂದು ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗಿತ್ತು. ಈ ವೇಳೆ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಸಜ್ಜುಗೊಳಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

    ಕೋವಿಡ್ ಏರುಗತಿ ತಡೆಗೆ ಸಜ್ಜಾಗುತ್ತಿವೆ ಆಸ್ಪತ್ರೆಗಳು; ಸೋಂಕಿತರ ಚಿಕಿತ್ಸೆಗೆ ರಾಜ್ಯದಲ್ಲಿ ಹಾಸಿಗೆ ಮೀಸಲು..

    ಶೇ.7 ಪಾಸಿಟಿವಿಟಿ ದರ: ಕೋವಿಡ್ 2 ಮತ್ತು 3ನೇ ಅಲೆಯ ವೇಳೆ ಕರೊನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಅಧಿಕವಾಗಿದ್ದರೆ, ಅಂತಹ ಪ್ರದೇಶವನ್ನು ಕೆಂಪುವಲಯವೆಂದು ಗುರುತಿಸಲಾಗುತ್ತಿತ್ತು. ಲಾಕ್​ಡೌನ್, ಸೀಲ್​ಡೌನ್, ಹೋಮ್ ಕ್ವಾರಂಟೈನ್, ಐಸೋಲೇಷನ್ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಆದರೆ, ಕಳೆದ 13 ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು 3,18,561 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಶೇ.7ರ ಪಾಸಿಟಿವಿಟಿ ದರದ ಆಧಾರದಲ್ಲಿ 22,083 ಮಂದಿಗೆ ಸೋಂಕು ದೃಢಪಟ್ಟಿದೆ. ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವುದರಿಂದ ವೈರಸ್ ಹೆಚ್ಚು ಅಪಾಯಕಾರಿಯಲ್ಲವೆಂದು ತೀರ್ವನಕ್ಕೆ ಬರಲಾಗಿದೆ. ಆದರೆ, ಸೋಂಕು ಹರಡುವಿಕೆ ವೇಗ ಮತ್ತು ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಳೆದ ಮೂರು ತಿಂಗಳಿಗಿಂತ ಅಧಿಕವಾಗಿದೆ ಎನ್ನುವುದು ಆತಂಕದ ವಿಚಾರವಾಗಿದೆ. ಹೀಗಾಗಿ, ಆರೋಗ್ಯ ಇಲಾಖೆಯು ರಾಜಧಾನಿಯಲ್ಲಿ ಸಿ.ವಿ ರಾಮನ್ ಜನರಲ್ ಆಸ್ಪತ್ರೆ ಮತ್ತು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು (ಬೌರಿಂಗ್ ಆಸ್ಪತ್ರೆ) ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ.

    ಹಿಮಪಾತಕ್ಕೆ ಸಿಲುಕಿದ್ದ ಯೋಧನ ಅವಶೇಷ 38 ವರ್ಷಗಳ ಬಳಿಕ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts