More

    ಪಶು ಆಸ್ಪತ್ರೆ ನಿರ್ವಣಕ್ಕೆ ನಬಾರ್ಡ್ ಅನುದಾನ

    ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದ ಎರಡು ಪಶು ಆಸ್ಪತ್ರೆಯ ಕಟ್ಟಡಕ್ಕೆ ನಬಾರ್ಡ್ ಯೋಜನೆಯಡಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

    ಮಂಗಳವಾರ ಬೆಳ್ಳೂರಿನಲ್ಲಿ 34 ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆಯಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇನ್ನೊಂದು ಪಶು ಆಸ್ಪತ್ರೆ ಕಟ್ಟಡಕ್ಕೆ ಶೃಂಗೇರಿ ತಾಲ್ಲೂಕಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಶ್ರದ್ಧೆಯಿಂದ ಕಟ್ಟಡ ಕಟ್ಟಬೇಕು. ಈಗಾಗಲೇ ಎನ್.ಆರ್.ಪುರದಲ್ಲಿ ಕಟ್ಟಿದ ಪಶು ಆಸ್ಪತ್ರೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ. ಆದ್ದರಿಂದ ಕಟ್ಟಡಕ್ಕೆ ಆರ್​ಸಿಸಿ ಬದಲು ಶೀಟ್ ಬಳಸಬೇಕು ಎಂದರು.

    ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬಿ.ಎಚ್.ಕೈಮರ-ಯಡಗೆರೆ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡಲಿದೆ. ರಸ್ತೆ ನಿರ್ವಿುಸಿದ ನಂತರ 5 ವರ್ಷಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು. ಕಳೆದ ಸಾಲಿನಲ್ಲಿ ಪ್ರಧಾನ ಮಂತ್ರಿಗ್ರಾಮ ಸಡಕ್​ಯೊಜನೆಯಡಿ 14 ಕೋಟಿ ರೂ.ಮಂಜೂರಾಗಿತ್ತು. ಇದರಲ್ಲಿ ಮೂರು ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ದಾವಣ ರಸ್ತೆ, ಕರ್ಕೆಶ್ವರ ರಸ್ತೆ ಕಾಮಗಾರಿ ಮುಕ್ತಾಯವಾಗಿದೆ. ಈ ವರ್ಷ 60 ರಿಂದ 70 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಬೆಳ್ಳೂರು ಭಾಗದವರು ಸಮುದಾಯ ಭವನ ನಿರ್ವಿುಸಲು ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆದಾಯ ಇಲ್ಲದಿರುವುದರಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ 34 ಸಾವಿರ ಕೋಟಿ ರೂ. ಜಿಎಸ್​ಟಿ ತೆರಿಗೆ ಹಣ ನೀಡಿಲ್ಲ. ಮುಖ್ಯಮಂತ್ರಿಗಳು ಕೇಂದ್ರದಿಂದ 15 ಸಾವಿರ ಕೋಟಿ ರೂ. ಸಾಲ ಪಡೆಯಲು ಸಿದ್ದತೆ ನಡೆಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts