More

    ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ತಡೆಯಲು ರಾಜ್ಯ ರೈತ ಸಂಘದಿಂದ ಮುಖಂಡರ ಒತ್ತಾಯ

    ಹೊಸಪೇಟೆ: ಕಾಳ ಸಂತೆಯಲ್ಲಿ ಸರಗೊಬ್ಬರದ ಮಾರಾಟಕ್ಕೆ ತಡೆ ಹಾಕಿ, ನಿಗದಿತ ದರದಲ್ಲಿ ರೈತರಿಗೆ ದೊರಕಿಸಿಕೊಡುವಂತೆ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.

    ಈ ಕುರಿತು ರೈತ ಮುಖಂಡರು ಅಪರ ಜಿಲ್ಲಾಧಿಕಾರಿ ಎನ್.ಮಹೇಶ ಬಾಬುಗೆ ಸೋಮವಾರ ಮನವಿ ಸಲ್ಲಿಸಿತು. ರೈತರ ಸಮಸ್ಯೆ, ಸವಾಲುಗಳನ್ನು ಬಗೆಹರಿಸಲು ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಸಭೆ ಕರೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗುತ್ತಿದ್ದು, ವಿವಿಧ ಬೆಳೆಗಳ ಬಿತ್ತನೆ ಮತ್ತು ಭತ್ತ ನಾಟಿ ಕಾರ್ಯ ಚುರುಕುಗೊಂಡಿರುವ ಕಾರಣ ರೈತರಿಗೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಒದಗಿಸಬೇಕು. ಬಹುತೇಕ ತಾಲೂಕುಗಳಲ್ಲಿ ಬಿತ್ತನೆ ನಡೆದಿದ್ದು, ಸದ್ಯ ರಸಗೊಬ್ಬರದ ಅವಶ್ಯಕತೆ ಇದೆ. ಆದರೆ, ಮಾರುಕಟ್ಟೆಯಲ್ಲಿ ಯೂರಿಯಾ, ಡಿಎಪಿ ಸಕಾಲಕ್ಕೆ ಸಿಗುತ್ತಿಲ್ಲ. ಅಲ್ಲದೇ, ಕೆಲವೆಡೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ರೈತರಿಗೆ ವಂಚಿಸಲಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.

    ಸಂಘಟನೆಯ ಪ್ರಮುಖರಾದ ಕೆ.ಎಚ್.ಮಹಾಂತೇಶ, ಪಿ.ಕೆ.ಹಳ್ಳಿ, ಜಗನ್ ಕಮಲಾಪುರ, ಬಸವರಾಜ್ ನಲ್ಲಾಪುರ, ಹೇಮರೆಡ್ಡಿ, ಕೊಟ್ರಪ್ಪ ವಡ್ಡರಹಳ್ಳಿ ಮತ್ತಿರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts