More

    ವಿಜಯನಗರಕ್ಕೆ ವಾಲ್ಮೀಕಿ ಸಮುದಾಯದ ಕೊಡುಗೆ ಅಪಾರ ಎಂದು ಶ್ಲಾಘಿಸಿದ ಸಚಿವ ಆನಂದ ಸಿಂಗ್

    ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಬೆಳವಣಿಗೆಗೆ ವಾಲ್ಮೀಕಿ ಸಮುದಾಯದ ಕೊಡುಗೆ ಅಪಾರ ಎಂದು ಸಚಿವ ಆನಂದ ಸಿಂಗ್ ಹೇಳಿದರು.

    ಹಂಪಿಯ ಶ್ರೀ ಬಿಷ್ಟಪ್ಪಯ್ಯ ಗೋಪುರದ ಎದುರು ಸೋಮವಾರ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ದಾನವಾಗಿ ನೀಡಲಾದ ಬೃಹತ್ ತೇರಿನ ಬಿಡಿ ಭಾಗಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ವಾಲ್ಕೀಕಿ ಗುರುಪೀಠದ ಶ್ರೀಗಳೊಂದಿಗೆ ಚರ್ಚಿಸುತ್ತಿರುವಾಗ ಪೀಠಕ್ಕೆ ರಥ ನಿರ್ಮಾಣ ಮಾಡಬೇಕೆಂಬ ಆಲೋಚನೆ ಇದೆ. ಇದಕ್ಕೆ ತಮ್ಮದೇನಾದರೂ ಕೊಡುಗೆ ನೀಡಲು ಸಾಧ್ಯವಾಗುತ್ತಾ ಎಂದು ಶ್ರೀಗಳು ಕೇಳಿದ್ದರು. ಅದರಂತೆ ರಥ ನಿರ್ಮಾಣಕ್ಕೆ ನನ್ನ ಕೈಲಾದ ಕೊಡುಗೆ ನೀಡಿದ್ದೇನೆ. ಪುಣ್ಯ ಕೆಲಸ ಮಾಡುವಾಗ ಎಲ್ಲರೂ ಸೇರಿ ಮಾಡುವುದು ಸೂಕ್ತವೆಂದು ಭಾವಿಸಿ ಎಲ್ಲರೂ ಒಳಗೊಂಡಂತೆ ಧನ ಸಹಾಯ ಪಡೆದು ರಥ ನಿರ್ಮಾಣ ಮಾಡಲಾಗಿದೆ. ಉತ್ತರ ಕನ್ನಡದ ಕಾರವಾರದ ಯಲ್ಲಾಪುರದಲ್ಲಿ ಅಂದಾಜು 60 ಅಡಿ ಎತ್ತರದ ರಥ ನಿರ್ಮಾಣ ಮಾಡಲಾಗಿದೆ. ಹೈಡ್ರಾಲಿಕ್ ಚಕ್ರ ಹಾಗೂ ತಂತ್ರಜ್ಞಾನದಿಂದ ಕೂಡಿದೆ. ತೇರಿನಲ್ಲಿ ಮಹರ್ಷಿ ವಾಲ್ಮೀಕಿ, ರಾಮಾಯಣ, ಶಬರಿ, ಏಕಲವ್ಯ ಹೀಗೆ ಪ್ರಮುಖ ಆಕೃತಿಗಳ ಕೆತ್ತನೆಗಳನ್ನು ಒಳಗೊಂಡಿದೆ ಎಂದು ಹೇಳಿದರು.

    ಜನ ಸ್ನೇಹಿ ಮಾಸ್ಟರ್ ಪ್ಲಾನ್: ಈ ಹಿಂದೆ ಹಂಪಿಯ ಅಭಿವೃದ್ಧಿಗೆ ಸಂಬಂಧಿಸಿ ಮಾಸ್ಟರ್ ಪ್ಲಾನ್‌ಅನ್ನು ಅಧಿಕಾರಿಗಳು ತಯಾರಿಸಿದ್ದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಭೆ ಕರೆದು, ಜನಾಭಿಪ್ರಾಯ ಸಂಗ್ರಹಿಸಿ, ಈ ಹಿಂದಿನ ಮಾಸ್ಟರ್ ಪ್ಲಾನ್‌ನಲ್ಲಿನ ಲೋಪ ದೋಷಗಳನ್ನು ಬಗೆಹರಿಸಿಕೊಂಡು ಜನ ಸ್ನೇಹಿ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಸಚಿವ ಆನಂದ ಸಿಂಗ್ ಹೇಳಿದರು.

    ಲಾರಿ ಚಾಲನೆ ಮಾಡಿದ ಸಚಿವ: ತೇರಿನ ಬಿಡಿ ಭಾಗಗಳನ್ನು ಎರಡು ಬೃಹತ್ ಲಾರಿಗಳಲ್ಲಿ ತುಂಬಲಾಗಿತ್ತು. ತೇರಿನ ಬಿಡಿ ಭಾಗಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸಚಿವ ಆನಂದ ಸಿಂಗ್ ಹಾಗೂ ಪುತ್ರ ಸಿದ್ಧಾರ್ಥ ಸಿಂಗ್ ಹಂಪಿಯ ಗೋಪುರದ ರಥ ಬೀದಿಯಿಂದ ಹೊಸಪೇಟೆವರೆಗೆ ಒಂದೊಂದು ಲಾರಿಗಳನ್ನು ಚಲಾಯಿಸಿಕೊಂಡು ಬಂದರು. ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಧರ್ಮದರ್ಶಿ ಜಂಬಯ್ಯ ನಾಯಕ, ಮುಖಂಡರಾದ ಜಿ.ಕೆ.ಹನುಮಂತಪ್ಪ, ಬಾಣದ ಕಣಿವೆಪ್ಪ, ಬಂಡೆರಂಗಪ್ಪ, ಗೋಸಲ ಭರಮಪ್ಪ, ಜಂಬಾನಹಳ್ಳಿ ಪರಶುರಾಮಪ್ಪ, ನಗರಸಭೆ ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಜೀವರತ್ನಂ, ಬುಜ್ಜಿ ಮಾಕರ್ಂಡಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts