More

    ಶೈಕ್ಷಣಿಕ ಅಭಿವೃದ್ಧಿಗಾಗಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ

    ಪ್ರವಾಸೋದ್ಯಮ ಸಚಿವ ಸಚಿವ ಆನಂದ ಸಿಂಗ್‌ಗೆ ಸಮಿತಿ ಮನವಿ


    ಹೊಸಪೇಟೆ: ಎಸ್ಸಿ, ಎಸ್ಟಿ ಸಮುದಾಯಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಾತಿ ಹೆಚ್ಚಿಸಲು ವಿಧಾನ ಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಒತ್ತಾಯಿಸಿದರು.

    ಸಮಿತಿ ಸದಸ್ಯರು ಪ್ರವಾಸೋದ್ಯಮ ಸಚಿವ ಸಚಿವ ಆನಂದ ಸಿಂಗ್‌ಗೆ ಮನವಿ ಸಲ್ಲಿಸಿತು. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 208 ದಿನಗಳನ್ನು ಪೂರೈಸಿದೆ. ಸೆ.12 ರಿಂದ ಆರಂಭಗೊಳ್ಳುವ ವಿಧಾನ ಮಂಡಲ ಅಧಿವೇಶನದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವ ಕುರಿತು ಸರ್ಕಾರದ ಗಮನ ಸೆಳೆಯಬೇಕು ಎಂದು ನೆನೆಪಿಸಲು ಒಕ್ಕೂಟದ ತೀರ್ಮಾನದಂತೆ ಜ್ಞಾಪಕ ಪತ್ರ ಸಲ್ಲಿಸಲಾಗುತ್ತಿದೆ. ಶೋಷಿತ ಸಮುದಾಯಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

    ಸಮಿತಿಯ ಪ್ರಮುಖರಾದ ವೀರಸ್ವಾಮಿ, ಬಿ.ಎಸ್.ಜಂಬಯ್ಯ ನಾಯಕ, ಸಣ್ಣ ಮಾರೆಪ್ಪ, ಕಿಚಡಿ ವಸಂತ, ಪಿ.ವಿ.ವೆಂಕಟೇಶ್, ಕಾಸಟಿ ಉಮಾಪತಿ, ಗೋಸಲ ಬರಮಪ್ಪ, ಗುಜ್ಜಲ ಗಣೇಶ, ಸಣ್ಣಕ್ಕಿ ಚಂದ್ರಪ್ಪ, ಮಾರ್ಕಂಡೇಯ, ವಿಜಯಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts