More

    ರಾಯರ 352 ನೇ ಮಧ್ಯಾರಾಧನೆ; ಕ್ಷೀರಾಭಿಷೇಕ

    ಹೊಸಪೇಟೆ: ಶ್ರೀಗುರು ರಾಯರ 352 ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನಿಮಿತ್ತ ಶುಕ್ರವಾರ ಸ್ಥಳೀಯ ಗಾಂಧಿ ಕಾಲೋನಿಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ 108 ಲೀಟರ್ ಹಾಲಿನ ಅಭಿಷೇಕ ನೆರವೇರಿಸಲಾಯಿತು.

    ಬೆಳಿಗ್ಗೆ ಶ್ರೀರಾಯರ ಬೃಂದಾವಕ್ಕೆ ವಿಶೇಷವಾಗಿ ರಾಯರ ಅಷ್ಟೋತ್ತರ ಪಾರಾಯಣ ಸಹಿತ 108 ಲೀಟರ್ ಹಾಲಿನ ಅಭಿಷೇಕ ಮಾಡಲಾಯಿತು. ಬಳಿಕ ಫಲಪಂಚಾಮೃತಾಭಿಷೇಕ, ಕನಾಕಭಿಷೇಕ, ಮಹಾಪೂಜಾ, ಸರ್ವಸೇವಾ ಜರುಗಿತು.

    ಇದನ್ನೂ ಓದಿ:ರಾಘವೇಂದ್ರ ಸ್ವಾಮಿಯನ್ನು ನಂಬಿ ಬಂದರೆ ಸಿಗಲಿದೆ ಅನುಗ್ರಹ

    ಶ್ರೀರಾಯರ ಬೃಂದಾವನ ಕ್ಕೆ ವಿಶೇಷವಾಗಿ ಹೂವಿನ ಅಲಂಕಾರ, ರೇಷ್ಮೆ, ರಜತ ಅಲಂಕಾರ ನೆರವೇರಿಸಲಾಯಿತು.ಆರಾಧನೆ ಪ್ರಯುಕ್ತ ಆಗಮಿಸಿದ ಭಕ್ತರಿಗೆ ಅನದನ ಸಂತರ್ಪಣೆ ನಡೆಯಿತು. ಶ್ರೀಮಠದ ವಿಚಾರಣಕರ್ತರು, ವ್ಯವಸ್ಥಾಪಕ ಕೃಷ್ಣಮೂರ್ತಿ, ಪ್ರಮುಖರಾದ ಕನಕವೀಡು ಮೋಹನ್ ರಾವ್, ಶ್ರೀನಿವಾಸಾಚಾರ್ಯ, ಜಗನ್ನಾಥ ರಾವ್, ಇತರರಿದ್ದರು. ಸಂಜೆ ಮನೋಜ್ಞ, ಅಖೀಲಾ ಅವರಿಂದ ದಾಸವಾಣಿ ನಡೆಯಿತು.

    ಕಾಶೀ ಆಂಜನೇಯ ಗುಡಿ

    ಮಧ್ಯಾರಾಧನೆ ಅಂಗವಾಗಿ ನಗರದ ಸ್ಟೇಷನ್ ರಸ್ತೆಯ ನಂಜನಗೂಡು ಶ್ರೀ ರಾಯರ ಮಠದ ಶ್ರೀಕಾಶೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿರುವ ರಾಯರ ಬೃಂದಾವನಕ್ಕೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ರೇಷ್ಮೆ ವಸ್ತç ಹಾಗೂ ರಜತ ಅಲಂಕಾರ ಸೇವೆ ನಡೆಯಿತು.

    ಪಂ ಶ್ರೀನಿವಾಸಾಚಾರ್ಯ ಅವರು ಉಪನ್ಯಾಸ ನೀಡಿದರು. ಶ್ರೀಮಠದ ವಿಚಾರಣಕರ್ತ ನರಸಿಂಹಮೂರ್ತಿ, ಗೋಪಾಲಕೃಷ್ಣ ಗೌಡ, ವ್ಯವಸ್ಥಾಪಕ ಗುಂಜಳ್ಳಿ ಟೀಕಾಚಾರ್ಯ, ನಿವೃತ್ತ ತಹಸೀಲ್ದಾರ್ ಗುರುರಾಜ್ ದೇಸಾಯಿ, ಶ್ರೀನಿವಾಸ, ಗುರುರಾಜ್, ಅನಂತ, ರಾಘವೇಂದ್ರ, ದಾಸ ಸಾಹಿತ್ಯ ಪ್ರಾಜೆಕ್ಟ್ ರ್ಕ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.

    ಭಕ್ತರಿಗೆ ಅನ್ನ ಸಂತರ್ಪಣೆ

    ನಗರದ ವಿಜಯಚಿತ್ರ ಮಂದಿರ ಸಮೀಪದ ಶ್ರೀರಾಘವೇಂದ್ರ ಸ್ವಾಮಿ ಮಠ ಮತ್ತು ರಾಣಿಪೇಟೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಪ್ರಯುಕ್ತ ವಿಶೇಷವಾಗಿ ರಾಯರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲ ಪಂಚಾಮೃತಾಭಿಷೇಕ ಜರುಗಿತು. ಸರ್ವಾಸೇವ, ಮಹಾಪೂಜಾ, ಕನಕಾಭಿಷೇಕ, ಪ್ರವಚನ, ಹಸ್ತೋದಕ, ನೇವೈದ್ಯ, ಮಹಾಮಂಗಳಾರತಿ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

    ಶ್ರೀಮಠದ ವಿಚಾರಣಕರ್ತ, ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಪ್ರಮುಖರಾದ ನರಸಿಂಹ ಮೂರ್ತಿ, ಅರ್ಚಕ ಮಾರುತಿ ಆಚಾರ್ಯ, ವಿಜಯಕುಮಾರ್, ಶ್ರೀಮಠದ ಭೀಮಸೇನಾಚಾರ್ಯ, ಪ್ರಹ್ಲಾದಾಚಾರ್ಯ, ಗುರುರಾಜಾಚಾರ್ಯ, ಪವನಾಚಾರ್ಯ, ಅನಿಲ್, ದೇಸಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts