More

    ಸ್ವ-ಉದ್ಯೋಗದಿಂದ ಆರ್ಥಿಕ ಪ್ರಗತಿ

    ಹೊಸಪೇಟೆ: ಗರದ ಮೇದಾರ್ ಕಲ್ಯಾಣ ಮಂಟಪದಲ್ಲಿ ಕೇಂದ್ರ ಸರ್ಕಾರ, ಮಂಗಳೂರಿನ ಕರಕುಶಲ ಇಲಾಖೆಯಿಂದ ಸಮರ್ಥ ತರಬೇತಿ ಯೋಜನೆಯಡಿ 2 ತಿಂಗಳ ಕಾಲ ಆಯೋಜಿಸಿದ್ದ ಬಿದಿರಿನಿಂದ ಕರಕುಶಲ ವಸ್ತುಗಳ ತಯಾರಿಕಾ ತರಬೇತಿ ಶಿಬಿರ ಬುಧವಾರ ಸಮಾರೋಪಗೊಂಡಿತು.

    ಕರಕುಶಲ ಇಲಾಖೆ ಮಂಗಳೂರು ಜಿಲ್ಲಾ ಸಹಾಯಕ ನಿರ್ದೇಶಕಿ ವೀಣಾ ಮಾತನಾಡಿ, ಸರ್ಕಾರದ ಸಹಾಯಧನ, ತರಬೇತಿಗಳನ್ನು ಸದ್ಬಳಕೆ ಮಾಡಿಕೊಂಡು, ಶಿಬಿರಾರ್ಥಿಗಳು ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು. ಕುಟುಂಬದ ಆದಾಯ ಮೂಲ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ತರಬೇತಿ ಪಡೆದವರಿಗೆ ಟೂಲ್ ಕಿಟ್ ನೀಡುವುದಾಗಿ ತಿಳಿಸಿದರು.

    ಹೊಸಪೇಟೆ ಕೌಶಲಾಭಿವೃದ್ಧಿ ಅಧಿಕಾರಿ ಲಕ್ಷ್ಮೀ ಮಾತನಾಡಿದರು. ಶಿಬಿರದ ಉಸ್ತುವಾರಿಗಳಾದ ಪ್ರಕಾಶ್, ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಿಬಿರಾರ್ಥಿಗಳಿಗೆ ಕುಶಲಕರ್ಮಿಗಳ ಕಾರ್ಡ್ ವಿತರಿಸಲಾಯಿತು. ಪ್ರಮುಖರಾದ ಯಾದವ ಮೂರ್ತಿ, ಪರಮೇಶ್ವರಪ್ಪ, ಗರಗದ ಶಂಕರ್, ಟಿ.ಎಂ.ಹನುಮಂತ, ದೇವರಾಜ್, ಕವಿತಾ, ಗಂಗಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts