More

    ರುದ್ರಭೂಮಿ ರಸ್ತೆಯ ಬ್ಯಾರಿಕೇಡ್ ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳ ಆಗ್ರಹ

    ಹೊಸಪೇಟೆ: ಹಳೇ ಅಮರಾವತಿ ಸಮೀಪ ರೈಲ್ವೆ ಗೇಟ್- 9 ಸಮೀಪದ ಸ್ಮಶಾನಕ್ಕೆ ತೆರಳುವ ಮಾರ್ಗಕ್ಕೆ ಅಡಲಾಗಿ ರೈಲ್ವೆ ಇಲಾಖೆಯಿಂದ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ ನೇತೃತ್ವದಲ್ಲಿ ರೈಲ್ವೆ ಇಲಾಖೆ ಇಂಜಿನಿಯರ್ ಶಿವಶಂಕರ್‌ಗೆ ಮನವಿ ಸಲ್ಲಿಸಲಾಯಿತು.

    ಈ ಭಾಗದ ನಿವಾಸಿಗಳು ಹಲವು ದಶಕಗಳಿಂದ ಶವ ಸಂಸ್ಕಾರಕ್ಕಾಗಿ ಇದೇ ಪ್ರದೇಶವನ್ನು ಅವಲಂಭಿಸಿದ್ದಾರೆ. ಆದರೆ, ಇತ್ತೀಚೆಗೆ ರೈಲ್ವೆ ಇಲಾಖೆ ಬ್ಯಾರಿಕೇಡ್ ಅಳವಡಿಸಿದೆ. ಇದರಿಂದ ಅಂತಿಮ ಯಾತ್ರೆಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಕೂಡಲೇ ಬ್ಯಾರಿಕೇಡ್ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

    ಮನವಿ ಸ್ವೀಕರಿಸಿದ ರೈಲ್ವೆ ಇಂಜಿನಿಯರ್ ಶಿವಶಂಕರ್, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಲಾಗಿದೆ. ಆದಾಗ್ಯೂ ತಮ್ಮ ಮನವಿಯನ್ನು ಪರಿಗಣಿಸಿ ರೈಲ್ವೆ ನಿಯಮಗಳ ಉಲ್ಲಂಘನೆಯಾಗದಂತೆ ಮೊದಲಿನಂತೆ ಸುಸೂತ್ರವಾಗಿ ಶವಸಂಸ್ಕಾರಕ್ಕೆ ಅನುಕೂಲ ಕಲ್ಪಿಸಲು ಕ್ರಮಕ್ಕೆ ಕೋರಿ ಮೇಲಧಿಕಾರಿಗಳಿಗೆ ವರದಿ ಕಳುಹಿಸುವುದಾಗಿ ಭರವಸೆ ನೀಡಿದರು.

    ರೈಲ್ವೆ ಸಲಹಾ ಸಮಿತಿ ಸದಸ್ಯರಾದ ವೈ.ಯಮುನೇಶ್, ಬಿ.ಜಿ.ತಿರುಮಲ, ಕೃಷ್ಣ, ಶಿವಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts