More

    ರೋಹಿತ್ ಅಧ್ಯಕ್ಷತೆಯ ಸಮಿತಿ ರದ್ದುಗೊಳಿಸುವಂತೆ ಪ್ರಗತಿಪರ ಸಂಘಟನೆ, ಬಂಡಾಯ ಸಾಹಿತಿಗಳ ಆಗ್ರಹ

    ಹೊಸಪೇಟೆ: ರೋಹಿತ್ ಚಕ್ರತೀರ್ಥ ನೇತೃತ್ವದ ಶಾಲಾ ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯ ಕ್ರಮವನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಹಾಗೂ ಬಂಡಾಯ ಸಾಹಿತಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಶ್ರಮಿಕ ಭವನದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಶ್ರೀಧರಗೆ ಮನವಿ ಸಲ್ಲಿಸಿದರು.

    ಶಿಕ್ಷಣ ತಜ್ಞರಲ್ಲದ ರೋಹಿತ್ ಚಕ್ರತೀರ್ಥರ ನೇತೃತ್ವದ 9 ಜನರ ಸಮಿತಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ರಚಿಸಲಾಗಿದೆ. ಇದರ ಪರಿಣಾಮ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆ ಹೆಸರಿನಲ್ಲಿ ಪಠ್ಯದಲ್ಲಿ ಜಾತಿ, ಮತೀಯವಾದ ಮತ್ತು ಸಂವಿಧಾನ ವಿರೋಧಿ ವಿಚಾರಗಳನ್ನು ತುರುಕಲಾಗಿದೆ. ಕನ್ನಡದ ಪ್ರಮುಖ ಲೇಖಕರು, ಸಾಹಿತಿಗಳ ರಚನೆಗಳನ್ನು ಉದ್ದೇಶ ಪೂರ್ವಕವಾಗಿಯೇ ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ದೇಶದ ಸಾರ್ವಭೌಮ, ಶಾಂತಿ ಮತ್ತು ಸಹಬಾಳ್ವೆಯ ಸಂವಿಧಾನಾತ್ಮಕ ಮೌಲ್ಯಗಳ ಪಾಠಗಳನ್ನು ಕೈಬಿಟ್ಟು ಜಾತೀಯತೆ, ಮತೀಯವಾದ, ಲಿಂಗ ತಾರತಮ್ಯ, ಮೂಢನಂಬಿಕೆ ಮತ್ತು ಕಂದಾಚಾರವನ್ನು ಪ್ರೇರೇಪಿಸುವ ಮತ್ತು ಸ್ವಾತಂತ್ರ್ಯ ಚಳವಳಿಯ ಆಶಯಕ್ಕೆ ಅಪಮಾನ ಮಾಡುವ ವಿಚಾರಗಳಿರುವ ಪಾಠಗಳನ್ನು ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯನ್ನು ರದ್ದುಗೊಳಿಸಬೇಕು. ಪಠ್ಯ ಕ್ರಮ ವಿವಾದಕ್ಕೆ ಕಾರಣರಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಡಿವೈಎಫ್‌ಐ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್, ಜಿಲ್ಲಾ ಅಧ್ಯಕ್ಷ ಮಹಮ್ಮದ್‌ಖಲೀದ್, ಕಾರ್ಯದರ್ಶಿ ಈ. ಮಂಜುನಾಥ, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಂಬಯ್ಯ ನಾಯಕ, ಬಂಡಾಯ ಸಾಹಿತ್ಯ ಸಂಘಟನೆ ಬಸಂತ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಪವನ್‌ಕುಮಾರ್, ರಮೇಶ, ಸತ್ಯಮೂರ್ತಿ, ಮಹಾಂತೇಶ ಹಾಗೂ ಎಸ್‌ಎಫ್‌ಐ, ಸಿಐಟಿಯು ಕಾರ್ಯಕರ್ತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts